• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿ; ಪ್ರಿಯತಮೆ ಹತ್ಯೆ, ಪ್ರಿಯಕರನ ಆತ್ಮಹತ್ಯೆ ಕೇಸ್‌ಗೆ ತಿರುವು!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 05; ಉಡುಪಿಯನ್ನು ಬೆಚ್ಚಿ ಬೀಳಿಸಿದ್ದ ಪಾಗಲ್ ಪ್ರೇಮಿ ಮಾಡಿದ ಭೀಕರ ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಪ್ರೇಯಸಿಗೆ ಚೂರಿ ಇರಿದು ಹತ್ಯೆ ಮಾಡಿದ್ದ ಸಂದೇಶ್ ಕುಲಾಲ್ (29) ತಾನೂ ಸಹ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಪ್ರೇಮಿಯಿಂದ ಹತ್ಯೆಯಾದ ಯುವತಿಯ ಮನೆಯವರು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹಲವು ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 30ರಂದು ಉಡುಪಿಯ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಸಂದೇಶ್ ಸೌಮ್ಯಶ್ರೀ ಎಂಬ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದ.

ನಡು ರಸ್ತೆಯಲ್ಲಿ ಚೂರಿ ಇರಿದ ಪ್ರೇಮಿ; ಯುವತಿ ಸಾವುನಡು ರಸ್ತೆಯಲ್ಲಿ ಚೂರಿ ಇರಿದ ಪ್ರೇಮಿ; ಯುವತಿ ಸಾವು

ಈ ಘಟನೆ ಇಡೀ ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಆ ಬಳಿಕ ಯುವತಿಯ ಬಗ್ಗೆ ಹಲವು ಊಹಾಪೋಹಗಳು ಸೃಷ್ಠಿ ಯಾಗಿತ್ತು. ಈ ಹಿನ್ನಲೆಯಲ್ಲಿ ಮೃತ ಯುವತಿಯ ಮನೆಯವರು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸೌಮ್ಯಶ್ರೀ ಅಣ್ಣ, ಅತ್ತಿಗೆ ದೀಕ್ಷಿತಾ, ತಾಯಿ ಸುಶೀಲಾ ಪಾಲ್ಗೊಂಡಿದ್ದರು. ಸೌಮ್ಯಶ್ರೀ ಮತ್ತು ಸಂದೇಶ್ 8 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಅಂತಾ ಸುದ್ದಿಯಾಗಿದೆ. ಆದರೆ ಅವರಿಬ್ಬರ ಪ್ರೀತಿಸುತ್ತಾ ಕೇವಲ ಎರಡು ವರ್ಷವಾಗಿದೆ ಎಂದರು.

ಶಿವಮೊಗ್ಗ; ಕಾಡಲ್ಲಿ ಪ್ರಿಯತಮೆ ಕೊಂದು ವಿಷ ಕುಡಿದ ಪ್ರಿಯಕರ! ಶಿವಮೊಗ್ಗ; ಕಾಡಲ್ಲಿ ಪ್ರಿಯತಮೆ ಕೊಂದು ವಿಷ ಕುಡಿದ ಪ್ರಿಯಕರ!

ಸೌಮ್ಯಶ್ರೀ ಮತ್ತು ಸಂದೇಶ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಆದರೆ ಕಾಲೇಜಿನಲ್ಲಿ ಇರುವಾಗ ಅವರಿಬ್ಬರ ನಡುವೆ ಪ್ರೀತಿ ಇರಲಿಲ್ಲ. ಕಾಲೇಜು ಬಿಟ್ಟ ಬಳಿಕ ಇತ್ತೀಚೆಗೆ ಪ್ರೀತಿಸ ತೊಡಗಿದ್ದರು. ಈ ಬಗ್ಗೆ ನಮ್ಮಲ್ಲಿ ಹೇಳಿದಾಗ ಮನೆಯವರು ಪ್ರೀತಿಯನ್ನು ಒಪ್ಪಿಕೊಂಡಿದ್ದೇವೆ. ಒಂದು ವರ್ಷದಿಂದ ಸೌಮ್ಯಶ್ರೀಯನ್ನು ಮದುವೆಯಾಗುವಂತೆ ಸಂದೇಶ್ ಬಳಿ ಕೇಳಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಆದರೆ ಆತ ಎರಡು ವರ್ಷ ವಿವಾಹ ಆಗಲ್ಲ ಅಂತಾ ಮುಂದೂಡಿದ್ದ. ಅಣ್ಣನ ಮದುವೆಯಾದ ಬಳಿಕವೂ ಮದುವೆಯಾಗೋಕೆ ಹಣ ಇಲ್ಲ ಅಂತಾ ಹೇಳಿದ್ದ. ನಾವು ಕೊನೆ ಪಕ್ಷ ರಿಜಿಸ್ಟರ್ ಮದುವೆಯಾದರೂ ಆಗು ಅಂತಾ ಹೇಳಿದಾಗ ಅದಕ್ಕೂ ಒಪ್ಪಲಿಲ್ಲ.

 Twist To Lover Murder Case In Santekatte Udupi

ನಾವು ಕುಟುಂಬ ಸಮೇತವಾಗಿ ಸಂದೇಶ್ ಮನೆಗೆ ಹೋಗಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ಸೌಮ್ಯಶ್ರೀ ಹಲವು ಬಾರಿ ಮದುವೆಯಾಗು ಅಂತಾ ಹೇಳಿದರೂ ಸ್ವಲ್ಪ ಸಮಯ ಕೊಡು ಅಂತಾ ಹೇಳಿದ್ದ. ನಿರಂತರವಾಗಿ ಸೌಮ್ಯಶ್ರೀಗೆ ಕಾಲ್ ಮಾಡುತ್ತಿದ್ದ. ನಿಮಿಷ ನಿಮಿಷಕ್ಕೂ ಕರೆ ಮಾಡಿ ಅಂತಾ ಪೀಡಿಸುತ್ತಿದ್ದ. ಇದಿರಿಂದ ರೋಸಿ ಹೋದ ಸೌಮ್ಯಶ್ರೀ ಬೇರೆ ಮದುವೆಯಾಗೋದಾಗಿ ಹೇಳಿದ್ದಳು ಎಂದು ಸೌಮ್ಯಶ್ರೀ ಅತ್ತಿಗೆ ದೀಕ್ಷಿತಾ ಹೇಳಿದ್ದಾರೆ.

ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರಿಂದ ನಮ್ಮ ಕುಟುಂಬದ ಮಾನ ಹರಾಜಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೌಮ್ಯಶ್ರೀ ಕುರಿತು ಇಲ್ಲಸಲ್ಲದ ಸುಳ್ಳುಸುದ್ದಿಗಳು ಹರಿದಾಡುತ್ತಿದೆ. ಮನೆ ಮಗಳನ್ನು ಕಳೆದುಕೊಂಡು ನೋವಿನಲ್ಲಿರುವ ನಮಗೆ ಇಂತಹ ಸುದ್ದಿಗಳಿಂದ ಇನ್ನಷ್ಟು‌ ಕುಗ್ಗಿಸುವಂತೆ ಮಾಡಿದೆ. ಒಬ್ಬ ಹೆಣ್ಣು ಮಗಳ ಬಗ್ಗೆ ಇಲ್ಲಸಲ್ಲದ‌ ಕತೆಗಳನ್ನು ಸೃಷ್ಠಿಸಿ ಕುಟುಂಬದ ಮಾನ ಹರಾಜು ಹಾಕುವುದನ್ನು ದಯವಿಟ್ಟು ನಿಲ್ಲಿಸಬೇಕು ಎಂದು ಕುಟುಂಬದವರು ಮನವಿ ಮಾಡಿದ್ದಾರೆ.

ಸಂದೇಶ್‌ ಕುಲಾಲ್‌ಗೆ ಕೆಟ್ಟ ಚಟಗಳಿತ್ತು ಎಂದು ಜನರು ಹೇಳುತ್ತಿದ್ದು, ಘಟನೆಯ ದಿನ ಕೂಡ ಮಾದಕ ವಸ್ತು ಸೇವನೆ ಮಾಡಿರುವ ಸಂಶಯ ಇದೆ. ಆರಂಭದಿಂದ ಸಣ್ಣ ಸಣ್ಣ ವಿಷಯಗಳಿಗೆ ಕೂಡ ಸೌಮ್ಯಶ್ರೀಯಿಂದಲೇ ಹಣವನ್ನು ಖರ್ಚು ಮಾಡಿಸುತ್ತಿದ್ದ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೌಮ್ಯಶ್ರೀ ತಾಯಿ ಸುಶೀಲಾ, "ಸಂದೇಶ್‌ನಿಂದ ಸೌಮ್ಯಶ್ರೀಗೆ ತುಂಬಾ ಕಿರಿಕಿರಿಯಾಗುತ್ತಿತ್ತು. ಮದುವೆಯಾಗೋಕೆ 5 ಲಕ್ಷ ರೂಪಾಯಿ ನೀಡುವಂತೆ ಪೀಡಿಸುತ್ತಿದ್ದ. ನಾನು ಹಲವು ಬಾರಿ, ಅವನ ಸಹವಾಸ ಮಾಡಬೇಡ ಅಂತಾ ಹೇಳಿದ್ದೆ. ಆದರೆ ಈಗ ಅವನು ಮಗಳ ಜೀವನವನ್ನೇ ಹಾಳು ಮಾಡುತ್ತಾನೆ ಅಂತಾ ಭಾವಿಸಿರಲಿಲ್ಲ" ಎಂದು ಕಣ್ಣೀರು ಹಾಕಿದರು.

ಆಗಸ್ಟ್30ರ ಸಂಜೆ ವೇಳೆಗೆ ಉಡುಪಿಯ ಸಂತೆಕಟ್ಟೆಯ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸೌಮ್ಯಶ್ರೀಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ನಿಲ್ಲಿಸಿದ ಸಂದೇಶ್ ವಾಗ್ವಾದ ನಡೆಸಿ 14 ಬಾರಿ ಸೌಮ್ಯಶ್ರೀಗೆ ಚೂರಿಯಿಂದ ಇರಿದಿದ್ದ. ಬಳಿಕ ತಾನೂ ಕತ್ತು ಕೊಯ್ದು ಆತ್ಮಹತ್ಯೆ ಮಾಡಿಕೊಂಡಿದ್ದ.

   ಇಂದು Rohit ಹಾಗು Pujara ಫೀಲ್ಡಿಂಗ್ ಮಾಡೋದಿಲ್ಲ | Oneindia Kannada

   ಗಂಭೀರವಾಗಿ ಗಾಯಗೊಂಡಿದ್ದ ಸಂದೇಶ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮರುದಿನ ಬೆಳಗ್ಗೆ ಚಿಕಿತ್ಸೆ ಫಲಾರಿಯಾಗದೇ ಆತ ಮೃತಪಟ್ಟಿದ್ದ. ಆದೇನೇ ಆದರೂ ಪ್ರೀತಿ ಯ ಮಾಯೆಯಲ್ಲಿ ಇಬ್ಬರ ಪ್ರಾಣ ಬಲಿಯಾಗಿದ್ದು ಮಾತ್ರ ದುರಂತವಾಗಿದೆ.

   English summary
   Twist to lover murder case at Udupi. 29-year-old Sandesh Kulal murdered his lover at Santekatte in Udupi later committed suicide.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X