ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಳಿ ಕರುಗಳಿಗೆ ಮನೆಯವರಿಟ್ಟ ಹೆಸರೇ ಹೇಳುತ್ತಿದೆ ಗಾಂಧಿಪ್ರೇಮದ ಕಥೆಯನ್ನು...

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 3: ಉಡುಪಿಯ ಮಣೂರಿನಲ್ಲಿ ಗಾಂಧಿ ಹುಟ್ಟಿದ ದಿನದಂದೇ ಗಾಂಧಿ ಜಯಂತಿ ಜನನವಾಗಿದೆ. ಇದೇನು ಅಂತ ಕೇಳ್ತೀರಾ...

ಚಿತ್ರದುರ್ಗ: ಮಹಾತ್ಮಾ ಗಾಂಧಿಗೆ ದೇವಸ್ಥಾನ, ನಿತ್ಯ ಪೂಜೆ-ಪುನಸ್ಕಾರಚಿತ್ರದುರ್ಗ: ಮಹಾತ್ಮಾ ಗಾಂಧಿಗೆ ದೇವಸ್ಥಾನ, ನಿತ್ಯ ಪೂಜೆ-ಪುನಸ್ಕಾರ

ಹೌದು. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ದೇವಸ ದೊಡ್ಮನೆ ಕಮಲ ಶೆಡ್ತಿ ಅವರ ಮನೆಯಲ್ಲಿ ಗಾಂಧಿ ಜಯಂತಿಯಂದು ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಗಾಂಧಿ ಹುಟ್ಟಿದ ದಿನದಂದೇ ಹುಟ್ಟಿದ ಮುದ್ದಾದ ಗಂಡು ಮತ್ತು ಹೆಣ್ಣು ಕರುವಿಗೆ ಗಾಂಧಿ ಹಾಗೂ ಜಯಂತಿ ಎಂದು ಹೆಸರಿಡುವ ಮೂಲಕ ಮನೆಯೊಡತಿ ರಾಷ್ಟ್ರಪಿತನ ಕುರಿತ ಪ್ರೇಮ ಮೆರೆದಿದ್ದಾರೆ.

Twin Calves Named As Gandhi Jayanthi In Udupi

ಕರಾವಳಿಯಲ್ಲಿ, ಹುಟ್ಟಿದ ವಾರಕ್ಕೆ ಅನುಗುಣವಾಗಿ ಹಸುಗಳಿಗೆ ಹೆಸರಿಡುವುದು ವಾಡಿಕೆ. ಆದರೆ ದೇಶ ಪ್ರೇಮಿ ಕಮಲ ಶೆಡ್ತಿ ಮಾತ್ರ ಗಾಂಧಿ ಮತ್ತು ಜಯಂತಿ ಎಂದು ನಾಮಕರಣ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಇದೀಗ ಈ ಅವಳಿ ಕರುಗಳನ್ನು ನೋಡಲು ಸ್ಥಳೀಯರು ಕಮಲ ಅವರ ಮನೆಯತ್ತ ಧಾವಿಸುತ್ತಿದ್ದಾರೆ. ಗಾಂಧಿ ಜಯಂತಿಯಂದು ಜನ್ಮ ನೀಡಿದ ಹಿನ್ನೆಲೆಯಲ್ಲಿ ಕರುಗಳಿಗೆ ಗಾಂಧಿ ಹಾಗೂ ಜಯಂತಿ ಎಂದು ಹೆಸರಿಟ್ಟಿದ್ದೇವೆ ಎಂದು ಮನೆಯೊಡೆಯ ಸಂತೋಷ ಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ.

English summary
A twin calves named as Gandhi and Jayanti in Brahmavar taluk in Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X