ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗ ವಿಜಯೇಂದ್ರ ಮೂಲಕ ಯಡಿಯೂರಪ್ಪ ವರ್ಗಾವಣೆ ದಂಧೆ: ಎಚ್ ಡಿಕೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ 18: "ಫೋನ್ ಕದ್ದಾಲಿಕೆ ವಿಚಾರದಲ್ಲಿ ಯಾವುದೇ ರೀತಿ ತನಿಖೆಗೆ ಮುಕ್ತವಾಗಿದ್ದೇನೆ. ವೈಯಕ್ತಿಕವಾಗಿ ನನಗೆ ಯಾವುದೇ ಆತಂಕ ಇಲ್ಲ. ಕುಮಾರಸ್ವಾಮಿಯನ್ನು ಹತ್ತಿಕ್ಕಲು ಇದೊಂದು ಅಸ್ತ್ರ ಎಂದು ಕೆಲ ಮಾಧ್ಯಮಗಳು ಹೇಳುತ್ತಿವೆ" ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಠಮಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಅವರು ಉಡುಪಿಗೆ ಬಂದಿದ್ದರು. ಮಠಕ್ಕೆ ತೆರಳುವ ಮುನ್ನ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು‌ ತರಾಟೆಗೆ ತೆಗೆದುಕೊಂಡರು.

ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಟ್ರಂಪ್ ಮಾರ್ಗದರ್ಶನವೂ ಪಡೆಯಲಿ: ಎಚ್ ಡಿ ಕುಮಾರಸ್ವಾಮಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಟ್ರಂಪ್ ಮಾರ್ಗದರ್ಶನವೂ ಪಡೆಯಲಿ: ಎಚ್ ಡಿ ಕುಮಾರಸ್ವಾಮಿ

"ಯಾವ ಅಸ್ತ್ರವೂ ಇಲ್ಲ, ಎಲ್ಲಾ ಅಸ್ತ್ತ ನಿಶ್ಶಸ್ತ್ರ ಆಗುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ನಿಮಗೆ ಯಾವುದೇ ಫಲ ಸಿಗಲ್ಲ" ಎಂದು ಮಾದ್ಯಮಗಳಿಗೆ ಕುಮಾರಸ್ವಾಮಿ ಹೇಳಿದರು. "ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿದವನು ನಾನು. ಕಳೆದ 14 ತಿಂಗಳ ಆಡಳಿತದಲ್ಲಿ ನಾನು ತಪ್ಪು ಮಾಡಿಲ್ಲ. ಹೀಗಿರುವಾಗ ನಾನ್ಯಾಕೆ ಭಯ ಪಡಬೇಕು?" ಎಂದು ಪ್ರಶ್ನಿಸಿದರು.

HD Kumaraswamy

ಆಪರೇಷನ್ ಕಮಲದ ತನಿಖೆ ಕೂಡ ನಡೆಯಲಿ
"ನಾನೇನೂ ಚೆಕ್ ಮುಖಾಂತರ ಹಣ ಪಡೆದಿಲ್ಲ, ರಾಜ್ಯ ಲೂಟಿ ಮಾಡಿಲ್ಲ" ಎಂದು ಯಡಿಯೂರಪ್ಪ ಅವರ ಕಾಲೆಳೆದರು. ಸಿದ್ದರಾಮಯ್ಯನವರ ಸಲಹೆ ಪಡೆದು, ಫೋನ್ ಟ್ಯಾಪಿಂಗ್ ಸಿಬಿಐಗೆ ಕೊಟ್ಟಿದ್ದಕ್ಕೆ ಯಡಿಯೂರಪ್ಪಗೆ ಕೃತಜ್ಞತೆ ಸಲ್ಲಿಸಿದ ಕುಮಾರಸ್ವಾಮಿ, ಆಪರೇಷನ್ ಕಮಲದ ಹೆಸರಲ್ಲಿ ಆದ ಸೂಟ್ ಕೇಸ್ ವ್ಯಾಪಾರದ ತನಿಖೆಯೂ ಆಗಲಿ ಎಂದರು.

ಹದಿನೈದು ವರ್ಷಗಳ ಮೂರೂ ಸರಕಾರಗಳ ತನಿಖೆ ನಡೆಯಲಿ
ಈ ಬಗ್ಗೆ ಕೂಡ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ. ಆ ಕೆಲಸವನ್ನೂ ಮಾಡಿಬಿಡಿ. ಸಿದ್ದರಾಮಯ್ಯನವರ ಈ ಸಲಹೆಯನ್ನೂ ಪರಿಗಣಿಸಿ, ಪ್ರಕರಣವನ್ನು ಸಿಬಿಐಗೆ ವಹಿಸಲಿ. ಜತೆಗೆ ಈ ಹಿಂದಿನ ಹದಿನೈದು ವರ್ಷಗಳ ಎಲ್ಲ ಸರಕಾರದ ಅವಧಿಯಲ್ಲಿ ಏನಾಗಿದೆ, ಅದೂ ತನಿಖೆ ಆಗಲಿ ಎಂದರು.

ಫೋನ್ ಟ್ಯಾಪಿಂಗ್ : ಸಿದ್ದರಾಮಯ್ಯ ವಿರುದ್ದ 'ಎಚ್ಡಿಕೆ - ಡಿಕೆಶಿ' ಒಂದಾದಾಗ!ಫೋನ್ ಟ್ಯಾಪಿಂಗ್ : ಸಿದ್ದರಾಮಯ್ಯ ವಿರುದ್ದ 'ಎಚ್ಡಿಕೆ - ಡಿಕೆಶಿ' ಒಂದಾದಾಗ!

ಯಲಹಂಕ ತಹಸೀಲ್ದಾರ್ ಪೋಸ್ಟ್ ವ್ಯವಹಾರ ಎಷ್ಟಕ್ಕೆ?
ಯಡಿಯೂರಪ್ಪ ಸರಕಾರ, ಸಿದ್ದರಾಮಯ್ಯ ಸರಕಾರ ಮತ್ತು ನನ್ನ ಅವಧಿಯ ಎಲ್ಲ ವಿಚಾರ ಸಿಬಿಐ ತನಿಖೆಗೆ ಒಳಪಡಿಸಲಿ ಎಂದು ಒತ್ತಾಯಿಸಿದ ಅವರು, ನನ್ನ ಹೋರಾಟವನ್ನು ಈ ರೀತಿಯ ತನಿಖೆಯಿಂದ ನಿಲ್ಲಿಸಲು ಸಾಧ್ಯ ಇಲ್ಲ. "ನಮ್ಮ ಸರಕಾರ ವರ್ಗಾವಣೆ ದಂಧೆ ಮಾಡಿದೆ ಅಂದರು. ಯಲಹಂಕ ತಹಸೀಲ್ದಾರ್ ಪೋಸ್ಟ್ ಗೆ ಎಷ್ಟು ವ್ಯವಹಾರ ಆಯ್ತು? ನಮಗೆ ವರ್ಗಾವಣೆ ಲೂಟಿ ಅಂತೀರಿ. ನೀವೇನು ಮಾಡ್ತಿದೀರಿ?" ಎಂದು ಪ್ರಶ್ನಿಸಿದರು.

ಟ್ರಾನ್ಸ್ ಫರ್ ದಂಧೆಗೆ ಮಗನನ್ನೇ ಬಿಟ್ಟಿದ್ದಾರೆ ಯಡಿಯೂರಪ್ಪ
ಈ ಬಗ್ಗೆ ಯಡಿಯೂರಪ್ಪ ಪಟಾಲಂ ಏನು ಹೇಳುತ್ತದೆ? ವರ್ಗಾವಣೆ ದಂಧೆಗೆ ಯಡಿಯೂರಪ್ಪ ತಮ್ಮ ಸುಪುತ್ರ ವಿಜೇಯಂದ್ರನನ್ನೇ ಬಿಟ್ಡಿದ್ದಾರೆ. ಮುಂದಿನ ದಿನಗಳಲ್ಲಿ ಹಲವಾರು ವಿಚಾರ ಬರುತ್ತದೆ. ಕುಮಾರಸ್ವಾಮಿ ಮಾಡಬಾರದ್ದು ಮಾಡಿದಾನೆ ಅಂತೀರಲ್ಲ? ನಿಮ್ಮಿಂದ ಏನೂ ಮಾಡುವುದಕ್ಕೆ ಸಾಧ್ಯ ಇಲ್ಲ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

English summary
Former chief minister HD Kumraswamy alleged that, CM BS Yeddyurppa doing transfer deal through his son Vijayendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X