ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ: ಪ್ರವಾಸಿಗರ ಫೇವರಿಟ್ ತಾಣ ಮಲ್ಪೆಯ ಸೀ ವಾಕ್

By ರಹೀಂ ಉಜಿರೆ
|
Google Oneindia Kannada News

ಉಡುಪಿ, ಡಿಸೆಂಬರ್ 14; ಮಾರ್ಚ್ ತಿಂಗಳ ಬಳಿಕ ಮನೆಯಲ್ಲೇ ಕುಳಿತ ಜನ ಕ್ರಮೇಣ ಹೊರಗಡೆ ಹೋಗುತ್ತಿದ್ದಾರೆ. ಪ್ರಕೃತಿ ಪ್ರಿಯರಂತೂ ತಮ್ಮ ಇಷ್ಟದ ಪ್ರವಾಸಿ ತಾಣಗಳತ್ತ ದೌಡಾಯಿಸುತ್ತಿದ್ದಾರೆ. ಬಿಸಿಲ ಧಗೆಗೆ ಕಡಲ ದಂಡೆಯತ್ತ ಓಡಿ ಬರುವ ಪ್ರವಾಸಿಗರಿಗೆ ಸದ್ಯ ಮಲ್ಪೆಯ ಸೀವಾಕ್ ಫೇವರಿಟ್ ತಾಣವಾಗಿದೆ.

ಕರ್ನಾಟಕ ರಾಜ್ಯದ ಮೊದಲ ಸೀವಾಕ್ ವೇ ಇದಾಗಿದೆ. ಉಡುಪಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿ ಸಂಚಾರ ಮಾಡದೇ ವಾಪಸ್ ಬರುವುದಿಲ್ಲ. ಮಲ್ಪೆಯ ಈ ಹೊಸ ಪ್ರವಾಸಿ ತಾಣವೀಗ ಪ್ರಸಿದ್ಧಿಯನ್ನು ಪಡೆಯುತ್ತಿದೆ.

ಮಲ್ಪೆ ಬಂದರಿಗೆ ದಾಳಿ: ಮೀನು ಆಯ್ದು ಮಾರಾಟ ಮಾಡುತ್ತಿದ್ದ 17 ಮಕ್ಕಳ ರಕ್ಷಣೆಮಲ್ಪೆ ಬಂದರಿಗೆ ದಾಳಿ: ಮೀನು ಆಯ್ದು ಮಾರಾಟ ಮಾಡುತ್ತಿದ್ದ 17 ಮಕ್ಕಳ ರಕ್ಷಣೆ

ಮೊದಲು ಉಡುಪಿಗೆ ಬರುವ ಪ್ರವಾಸಿಗರು ಕೃಷ್ಣಮಠದ ದರ್ಶನ ಪಡೆದು, ಮಲ್ಪೆ ಬೀಚ್ ಮತ್ತು ಸೈಂಟ್ ಮೇರೀಸ್ ದ್ವೀಪಗಳಿಗೆ ಹೋಗುವುದು ಮಾಮೂಲಿಯಾಗಿತ್ತು. ಆದರೆ, ಈಗ ಮಲ್ಪೆಯಲ್ಲಿ ಇನ್ನೊಂದು ಪ್ರಮುಖ ಪ್ರವಾಸೀ ತಾಣ ತನ್ನ ಚೆಲುವಿನ ಮೂಲಕ ಪ್ರವಾಸಿಗರನ್ನು ಕರೆಯುತ್ತಿದೆ.

ಮಲ್ಪೆ ಮೀನುಗಾರರ ಬಲೆಗೆ 750 ಕೆ.ಜಿ ತೂಕದ ಫಿಶ್ ಮಲ್ಪೆ ಮೀನುಗಾರರ ಬಲೆಗೆ 750 ಕೆ.ಜಿ ತೂಕದ ಫಿಶ್

ಮಲ್ಪೆ ಬಂದರಿನ ಟೂರಿಸ್ಟ್ ಜೆಟ್ ಸಮೀಪ ಸೀವಾಕ್ ವೇ ಇದೆ. ಸೆಂಟ್ ಮೇರೀಸ್ ದ್ವೀಪಕ್ಕೆ ಹೋಗುವವರು ಇಲ್ಲಿಯೇ ಬೋಟ್ ಹತ್ತಬೇಕಿದೆ. ಸುಮಾರು 53.5 ಲಕ್ಷದ ವೆಚ್ಚದಲ್ಲಿ ಮೂರು ತಿಂಗಳಿನಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

ಮಲ್ಪೆ ಮೀನುಗಾರರ ಬಲೆಗೆ ಬಿತ್ತು ಅಪರೂಪದ ಮಲ್ಪೆ ಮೀನುಗಾರರ ಬಲೆಗೆ ಬಿತ್ತು ಅಪರೂಪದ

ಆಕರ್ಷಕವಾದ ಪ್ರವಾಸಿ ತಾಣಗಳು

ಆಕರ್ಷಕವಾದ ಪ್ರವಾಸಿ ತಾಣಗಳು

ಉಡುಪಿಯ ಮಲ್ಪೆ ಬಂದರಿನ ತುದಿಯಲ್ಲಿ ಆಕರ್ಷಕ ಸೀವಾಕ್ ವೇ ನಿರ್ಮಾಣಗೊಂಡಿದೆ. ಈಗ ಅದರ ಸುತ್ತಮುತ್ತ ಸುಂದರ ಉದ್ಯಾನವನ‌ ಮತ್ತು ಆಕರ್ಷಕ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳು ಪ್ರವಾಸಿಗರ ಮನಸೂರೆಗೊಳ್ಳುತ್ತವೆ.

ಅಲೆಗಳ ಸದ್ದು ಇಂಪಾಗಿ ಕೇಳುತ್ತದೆ

ಅಲೆಗಳ ಸದ್ದು ಇಂಪಾಗಿ ಕೇಳುತ್ತದೆ

ಸೈಂಟ್ ಮೇರೀಸ್‌ಗೆ ತೆರಳುವ ಬೋಟ್‌ನ‌ ಪ್ರವೇಶದ್ವಾರದಿಂದ ಸಮುದ್ರದ ಮಧ್ಯೆ ಸುಂದರ ಸೀವಾಕ್ ವೇನಲ್ಲಿ ನಡೆಯುವುದೇ ಒಂದು ಅದ್ಭುತ ಅನುಭವ. ಸಮುದ್ರದ ಅಲೆಗಳ ಸದ್ದು ಸದ್ದು ಇಂಪಾಗಿ ಕಿವಿಗೆ ಅಪ್ಪಳಿಸುತ್ತಿರುವಾಗ ಸಮುದ್ರದ ದಂಡೆ ಮಧ್ಯೆ ನಡೆದುಕೊಂಡು ಹೋಗುವುದು ಒಂದು ವಿಶೇಷ ಅನುಭವ.

ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಿ

ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಿ

ಸಂಜೆ ವೇಳೆ ಬಂದರೆ ಸುಂದರ ಸೂರ್ಯಾಸ್ತವನ್ನು‌ ಇಲ್ಲಿ ಕಣ್ತುಂಬಿಸಿಕೊಳ್ಳಬಹುದು. ಕತ್ತಲು ಕವಿಯುವ ಸಮಯಕ್ಕೆ ಬಂದರೆ ಸಮುದ್ರದ ದಂಡೆಯಲ್ಲಿ ತಂಪಾದ ಗಾಳಿಯೊಂದಿಗೆ ಒಂದಷ್ಟು ವಾಕ್ ಮಾಡಬಹುದು. ವಾಕ್ ಮಾಡುತ್ತಾ ಮಾಡುತ್ತಾ ಸೂರ್ಯಾಸ್ತವನ್ನೂ ಸವಿಯಬಹುದು.

Recommended Video

ಮಂಡ್ಯ: ಬೆಲ್ಲಕ್ಕೆ ಕಂಟಕವಾದ ಕಳಪೆ ಸಕ್ಕರೆ...! | Oneindia Kannada
ಉತ್ತಮ ಪ್ರವಾಸಿ ತಾಣ

ಉತ್ತಮ ಪ್ರವಾಸಿ ತಾಣ

ಸೀ ವಾಕ್ ವೇಗೆ ಹೊಂದಿಕೊಂಡು ಉದ್ಯಾನವನ ಇದೆ, ಇದು ಮನಸಿಗೆ ಮುದ ನೀಡುತ್ತಿದೆ. ವಿವಿಧ ಜಾತಿಯ ಗಿಡಗಳು, ಲೈಟ್‍, ಜಟಾಯು ಪಕ್ಷಿ, ಆಮೆ, ಕಾಪು ಲೈಟ್ ಹೌಸ್ ಕಲಾಕೃತಿಗಳು ಪ್ರವಾಸಿಗರಿಗೆ ಮನರಂಜನೆ ಒದಗಿಸುತ್ತವೆ ಮತ್ತು‌ ಮನಸಿಗೆ ಮುದ ನೀಡುತ್ತವೆ. ಉಡುಪಿಯಲ್ಲಿ ಈ ಪ್ರವಾಸಿ ತಾಣ ನೂರಾರು ಜನರನ್ನು ಸೆಳೆಯುತ್ತಿದೆ.

English summary
Tourists cannot afford to miss walking on the Sea Walkway in Udupi, Malpe. This is the another landmark for the visitors of the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X