ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಳೆತ್ತರದ ರಕ್ಕಸ ಅಲೆಗಳ ನಡುವೆ ಪ್ರವಾಸಿಗನ ರಕ್ಷಣೆ

|
Google Oneindia Kannada News

Recommended Video

ಸಮುದ್ರ ತಟದಲ್ಲಿ ಆಟವಾಡುತ್ತಿದ್ದವರಿಗೆ ಕಾದಿತ್ತು ಅಪಾಯ | Oneindia Kannada

ಉಡುಪಿ, ಜೂನ್ 14: ಉಡುಪಿಯ ಪ್ರಸಿದ್ಧ ಮಲ್ಪೆ ಕಡಲ ಕಿನಾರೆಯಲ್ಲಿ ಕಡಲಿಗೆ ಇಳಿದು ನೀರಾಟವಾಡುತ್ತಿದ್ದ ಸಂದರ್ಭ, ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರೊಬ್ಬರನ್ನು ಜೀವ ರಕ್ಷಕರು ರಕ್ಷಣೆ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರವಾಸಿಗನ ಜೀವ ರಕ್ಷಣೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೂರು ದಿನಗಳ‌ ಹಿಂದೆ ಮಲ್ಪೆ ಬೀಚ್ ನಲ್ಲಿ ಸಮುದ್ರದ ಅಲೆಗಳ ಮಧ್ಯೆ ಸಿಲುಕಿದ ಪ್ರವಾಸಿಗರೊಬ್ಬರನ್ನು ರಕ್ಷಿಸಲಾಗಿದೆ. ಭದ್ರಾವತಿ ಮೂಲದ ಯುವಕರ ತಂಡ ಬೀಚ್ ಗೆ ಬಂದಿದ್ದು, ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ನೀರಿಗಿಳಿದಿದ್ದಾರೆ.

ಕಾವೇರಿ ನದಿಯಲ್ಲಿ ಸಿಲುಕಿಕೊಂಡಿದ್ದ ತಮಿಳುನಾಡು ಪ್ರವಾಸಿಗರ ರಕ್ಷಣೆಕಾವೇರಿ ನದಿಯಲ್ಲಿ ಸಿಲುಕಿಕೊಂಡಿದ್ದ ತಮಿಳುನಾಡು ಪ್ರವಾಸಿಗರ ರಕ್ಷಣೆ

ಈ ಸಂದರ್ಭ ಒಬ್ಬ ಯುವಕ ಅಲೆಗಳ ಮಧ್ಯೆ ಸಿಲುಕಿಕೊಂಡಿದ್ದ. ಮಲ್ಪೆಯ ಜೀವ ರಕ್ಷಕ ತಂಡದ ಮಧು ಎಂಬುವರು ಆ ಯುವಕನನ್ನು ರಕ್ಷಿಸಿದ್ದಾರೆ. ಕೆಲ ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆ ಬಿರುಸುಗೊಂಡು, ಕಡಲಿನಲ್ಲಿ ಅಲೆಗಳ ಅಬ್ಬರವಾಗಿದೆ.

tourist rescued in Malpe beach

 ಪ್ರವಾಹದ ನಡುವಲ್ಲೂ ಆ ತಾಯಿಮಗ ಬದುಕಿದ್ದು ಪವಾಡವೇ! ಪ್ರವಾಹದ ನಡುವಲ್ಲೂ ಆ ತಾಯಿಮಗ ಬದುಕಿದ್ದು ಪವಾಡವೇ!

ಪ್ರವಾಸಿಗರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದ್ದರೂ ಅದನ್ನು ಲೆಕ್ಕಿಸದೆ ಕೆಲ ಪ್ರವಾಸಿಗರು ನೀರಿಗಿಳಿಯುವ ದುಸ್ಸಾಹಸ ಮಾಡುತ್ತಾರೆ. ಮಳೆ‌ ಮತ್ತು ಗಾಳಿ ಜೋರಾಗಿದ್ದು ಸಮುದ್ರ ಅಪಾಯಕಾರಿಯಾಗಿದೆ. ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ರವಾನಿಸಿದೆ.

English summary
Tourist from Bhadravathi rescued in Malpe beach by lifeguard team. Incident of this video viral in social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X