ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಕಡಲಿಗಿಳಿಯಲಿವೆ ಸಾವಿರಾರು ನಾಡದೋಣಿಗಳು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 15: ದೇಶಾದ್ಯಂತ ಕೊರೋನಾ ವೈರಸ್ ಮಹಾಮಾರಿ ಸೋಂಕಿನಿಂದಾಗಿ ಇಡೀ ಭಾರತ ದೇಶವೇ ಲಾಕ್ ಡೌನ್ ಆಗಿದ್ದರಿಂದ ಹಲವು ದಿನಗಳಿಂದ ಮೀನುಗಾರಿಕೆಯನ್ನು ನಿಷೇಧಿಸಲಾಗಿತ್ತು.

ಸಾಂಪ್ರದಾಯಿಕ ಮೀನುಗಾರಿಕೆಗೆ ಸರಕಾರ ಅವಕಾಶ ಕೊಟ್ಟಿರುವುದರಿಂದ, ಇಂದು ಉಡುಪಿಯಲ್ಲಿ ನಾಡದೋಣಿಗಳಿಂದ ಮೀನುಗಾರಿಕೆ ಆರಂಭವಾಗಲಿದೆ.

ಉಡುಪಿಯ ಮಲ್ಪೆ, ಕಟಪಾಡಿ, ಪಡುಬಿದ್ರೆಯಲ್ಲಿ ಮೀನುಗಾರಿಕೆ ಆರಂಭವಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮೀನುಗಾರಿಕೆ ಕಸುಬನ್ನು ಮೊಗವೀರರು ಮಾಡುತ್ತಿದ್ದಾರೆ.

Today Fishing Start In Udupi

ಕುಂದಾಪುರ, ಕಾಪು, ಗಂಗೊಳ್ಳಿಯಲ್ಲಿಯೂ ಮೀನುಗಾರಿಕೆ ಆರಂಭಿಸುತ್ತಿದ್ದಾರೆ. ಸಮುದ್ರ ತೀರ, ನದಿಗಳಲ್ಲಿ ಕಡಲ ಮಕ್ಕಳು ಮೀನಿನ ಬೇಟೆಯಲ್ಲಿ ತೊಡಗಿದ್ದಾರೆ.

Today Fishing Start In Udupi

ಸರಕಾರದ ನಿಯಮದನ್ವಯ ದೋಣಿಯಲ್ಲಿ ಕೇವಲ ಐದು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ 14 ಸಾವಿರ ದೋಣಿ ಹಾಗೂ ತೆಪ್ಪಗಳಿಗೆ ಅವಕಾಶ ನೀಡಲಾಗಿದೆ.

English summary
Fishing is starting in Malpe, Katapadi and Padubidri Of Udupi District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X