ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಗಡಿಯಲ್ಲಿ ಹೆಚ್ಚಿದ ಆತಂಕ; ಬಿಗಿ ಭದ್ರತೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಊಡುಪಿ, ಮೇ 8: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ 12 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಗಡಿಯಲ್ಲಿ ವಾಹನಗಳ ತಪಾಸಣೆ ತೀವ್ರಗೊಳಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24 ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡದ ಗಡಿಯನ್ನು ಹಂಚಿಕೊಳ್ಳುವ ಉಡುಪಿಯ ಗಡಿ ಭಾಗ ಶಿರೂರು ಟೋಲ್ ಬಳಿ ಆತಂಕ ಎದುರಾಗಿದ್ದು, ಪೊಲೀಸರಿಗೂ ಇದು ಸವಾಲಾಗಿದೆ.

Tight Security In Udupi District Border

ಹೀಗಾಗಿ ಶಿರೂರು ಟೋಲ್ ಗೇಟ್ ನಲ್ಲಿ ಸದ್ಯ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಟೋಲ್ ನಲ್ಲಿ ಇನ್ನಷ್ಟು ಭದ್ರತೆಯ ಜೊತೆಗೆ ಕೊರೊನಾ ವೈರಸ್ ತಪಾಸಣಾ ಕೇಂದ್ರದ ಅಗತ್ಯತೆಯೂ ಹೆಚ್ಚುವಂತೆ ಮಾಡಿದೆ.

ಉಡುಪಿ To ಬಾಗಲಕೋಟೆ: ಯುವತಿಗೆ ಅಂಟಿದ್ದು ಹೇಗೆ ಕೊರೊನಾ?ಉಡುಪಿ To ಬಾಗಲಕೋಟೆ: ಯುವತಿಗೆ ಅಂಟಿದ್ದು ಹೇಗೆ ಕೊರೊನಾ?

Tight Security In Udupi District Border

ಇನ್ನೊಂದು ಕಡೆ ದಕ್ಷಿಣ ಕನ್ನಡ ಗಡಿಯನ್ನೂ ಹಂಚಿಕೊಳ್ಳುವ ಉಡುಪಿ, ಎರಡೂ ಜಿಲ್ಲೆಗಳಿಂದ ಬರುವ ಜನರ ಮೇಲೆ ನಿಗಾ ವಹಿಸಬೇಕಾಗಿದೆ. ಗಮನಾರ್ಹ ಸಂಗತಿ‌ ಅಂದರೆ ಉಡುಪಿ ಜಿಲ್ಲೆಯಲ್ಲಿ 40 ದಿನಗಳಿಂದ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ.

English summary
Vehicle inspection on the border of Udupi district has been intensified as coronavirus infects 12 people in a single day in Bhatkal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X