ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಾದಕ್ಕೆ ಕಾರಣವಾಯ್ತು ಉಡುಪಿಯ ಈ ಮದುವೆ

|
Google Oneindia Kannada News

ಉಡುಪಿ, ಮೇ 11:ಇತ್ತೀಚೆಗೆ ಉಡುಪಿಯಲ್ಲಿ ನಡೆದ ಮದುವೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.ಮದುವೆಯ ದಿಬ್ಬಣದಲ್ಲಿ ಯಕ್ಷಗಾನ ಪಾತ್ರಧಾರಿಗಳ ಬಳಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಹಿಂದೆಲ್ಲಾ ಮದುವೆ ಮಂಟಪಕ್ಕೆ ವಧು- ವರರು ಮಾಮೂಲಿಯಾಗಿ ದಿಬ್ಬಣದ ಮೂಲಕ ಬರುವ ಸಂಪ್ರದಾಯ ಇತ್ತು. ಆದರೆ ಈಗ ಮದುವೆಗಳೆಲ್ಲಾ ಸಿಕ್ಕಾಪಟ್ಟೆ ಸ್ಟೈಲೀಷ್ ಆಗಿ, ಎಲ್ಲವೂ ಫಿಲ್ಮಿ ಸ್ಟೈಲ್ ತರ ನಡೆಯಬೇಕೆಂಬುದು ಇಂದಿನ ಯುವ ಮನಸ್ಸುಗಳ ಆಶಯ.

ಮಂಗಳೂರಿನಲ್ಲಿ ಮೋದಿ ವಿಜಯೋತ್ಸವಕ್ಕಾಗಿ ಯಕ್ಷಗಾನ ಪ್ರದರ್ಶನ ಆಯೋಜನೆ!ಮಂಗಳೂರಿನಲ್ಲಿ ಮೋದಿ ವಿಜಯೋತ್ಸವಕ್ಕಾಗಿ ಯಕ್ಷಗಾನ ಪ್ರದರ್ಶನ ಆಯೋಜನೆ!

ಉಡುಪಿಯ ಕಿದಿಯೂರು ಹೋಟೆಲ್ ನಲ್ಲಿ ಇತ್ತೀಚೆಗೆ ನಡೆದ ಮದುವೆಯಲ್ಲಿ ಯಕ್ಷಗಾನ ವೇಷಧಾರಿಗಳೊಂದಿಗೆ ಆಗಮಿಸಿದ್ದರು. ದಿಬ್ಬಣದೊಂದಿಗೆ ವಧು ಯಕ್ಷಗಾನ ವೇಷಧಾರಿಗಳೊಂದಿಗೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ. ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

This marriage is now created controversy

ಬಡಗುತಿಟ್ಟು ವೇಷಧಾರಿಗಳ ಜೊತೆ ವಧು ಕುಣಿದರೆ, ವರ ನಾಚಿಕೊಂಡು ಪಕ್ಕದಲ್ಲೇ ನಡೆದು ಬರುತ್ತಿರುವ ದೃಶ್ಯವಿದೆ. ಚೆಂಡೆಯ ನಾದಕ್ಕೆ ತಕ್ಕಂತೆ ಶಾಸ್ತ್ರೀಯ ಯಕ್ಷಗಾನಕ್ಕೆ ವಧು ವೇಷಧಾರಿಗಳು ಹೆಜ್ಜೆ ಹಾಕಿದ್ದಾರೆ.

ವಿವಾದದ ಸುಳಿಯಲ್ಲಿ ಟೀಮ್ ಮೋದಿಯ ಯಕ್ಷಗಾನ ಬಯಲಾಟವಿವಾದದ ಸುಳಿಯಲ್ಲಿ ಟೀಮ್ ಮೋದಿಯ ಯಕ್ಷಗಾನ ಬಯಲಾಟ

ಆದರೆ ಯಕ್ಷಗಾನ ವೇಷಧಾರಿಗಳ ಜೊತೆ ಮದುವೆ ದಿಬ್ಬಣ ಬಂದಿರೋದು ಇದೇ ಮೊದಲು. ಕರಾವಳಿಯ ಗಂಡುಕಲೆಯನ್ನು ಈ ರೀತಿ ಬಳಸಿದ್ದಕ್ಕೆ ಕೆಲ ಯಕ್ಷಪ್ರೇಮಿಗಳು ಮೂಗು ಮುರಿದಿದ್ದಾರೆ. ಕರಾವಳಿಯ ಯಕ್ಷಗಾನವನ್ನು ದಿಬ್ಬಣದಲ್ಲಿ ಬಳಸಿರುವುದರ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು ಚರ್ಚೆಗಳು ಆರಂಭಗೊಂಡಿವೆ.

English summary
Video of marriage function in udupi gone viral.Bride and groom entering marriage hall with with Yakshagana Veshadharis. This video is now created controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X