ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಗಾಸನದಲ್ಲಿ 3 ನೇ ಬಾರಿ ವಿಶ್ವದಾಖಲೆ ಬರೆದ ಉಡುಪಿಯ ತನುಶ್ರೀ ಪಿತ್ರೋಡಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ 24: ಯೋಗಾಸನದಲ್ಲಿ ಎರಡು ಜಾಗತಿಕ ದಾಖಲೆ ಮಾಡಿರುವ 10ರ ಹರೆಯದ ತನುಶ್ರೀ ಪಿತ್ರೋಡಿ ಧನುರಾಸನದ ನಂಬರ್ ಆಫ್ ರೋಲ್ಸ್ ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. 1 ನಿಮಿಷದಲ್ಲಿ 62 ಉರುಳು ಹಾಕಿದ್ದಲ್ಲದೆ, 1.40 ನಿಮಿಷದಲ್ಲಿ 100 ಉರುಳುಗಳನ್ನು ಹಾಕುವ ವಿಶಿಷ್ಟ ದಾಖಲೆ ಇದು.

ಪೋರಿಯ ಈ ಸಾಧನೆಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸ್ಥಳದಲ್ಲೇ ಪ್ರಮಾಣಪತ್ರ ನೀಡಿ ಗೌರವಿಸಿತು.

ಉಡುಪಿಯ ಸೇಂಟ್ ಸಿಸಿಲಿ ವಿದ್ಯಾಸಂಸ್ಥೆ ಕ್ರೀಡಾಂಗಣ ನಿನ್ನೆ ಶನಿವಾರ ಸಂಜೆ (ಫೆ.23) ಅಪೂರ್ವ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ನೂರಾರು ಜನರ ಸಮಕ್ಷಮ ಇಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದು, ಹತ್ತರ ಹರೆಯದ ಬಾಲೆ ತನುಶ್ರೀ ಪಿತ್ರೋಡಿ.

ಮಕ್ಕಳ ದಿನಾಚರಣೆ ವಿಶೇಷ: ಯೋಗ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಮೈಸೂರಿನ ಪೋರಿಮಕ್ಕಳ ದಿನಾಚರಣೆ ವಿಶೇಷ: ಯೋಗ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಮೈಸೂರಿನ ಪೋರಿ

ಹೌದು, ಯೋಗಭಂಗಿಯಲ್ಲಿ ಜಾಗತಿಕ ದಾಖಲೆಯೊಂದಕ್ಕೆ ಇಲ್ಲಿ ಸಕಲ ಏರ್ಪಾಟು ಮಾಡಲಾಗಿತ್ತು. ನೂರಾರು ಜನ ನೋಡ ನೋಡುತ್ತಿದ್ದಂತೆ ಹತ್ತರ ಹರೆಯದ ಬಾಲಕಿ ದಾಖಲೆಯೊಂದನ್ನು ಬರೆದೇ ಬಿಟ್ಟಳು.

Tanushree breaks Guinness world record in full body revolutions

ಯೋಗ ಪ್ರದರ್ಶನದಲ್ಲಿ ಈಕೆ 1 ನಿಮಿಷದಲ್ಲಿ 62 ಉರುಳು ಹಾಕಿದ್ಳು, ಜತೆಗೆ 1.40 ನಿಮಿಷದಲ್ಲಿ 100 ಉರುಳುಗಳನ್ನು ಹಾಕುವ ಮೂಲಕ ಎರಡು ವಿಶ್ವದಾಖಲೆ ಮಾಡಿದಳು. ಈ ಅಪೂರ್ವ ಸಾಧನೆಗಾಗಿ ತನುಶ್ರೀಗೆ ಸ್ಥಳದಲ್ಲೇ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ದಕ್ಷಿಣ ಏಷ್ಯಾ ನಿರ್ದೇಶಕ ಮನೀಶ್ ಬಿಶ್ನೋಯಿ ಪ್ರಮಾಣಪತ್ರ ಹಸ್ತಾಂತರಿಸಿದರು.

ಸತತ 3 ವರ್ಷದಲ್ಲಿ ನಾಲ್ಕು ಸಾಧನೆ ಮಾಡಿರುವ ತನುಶ್ರೀ ಉಡುಪಿ ಸೇಂಟ್ ಸಿಸಿಲೀಸ್ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ.

ಮಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಹೆತ್ತವರು, ಮಗಳ ಸಾಧನೆ ನಮಗೆ ಖುಷಿ ತಂದಿದೆ. ಅವಳು ಯೂಟ್ಯೂಬ್ ವೀಡಿಯೊ ನೋಡಿ ಅಭ್ಯಾಸ ಮಾಡುತ್ತಿದ್ದಳು. 52 ಗರಿಷ್ಠ ಉರುಳು ಹಾಕುತ್ತಿದ್ದವಳು ಈಗ 62 ಮುಟ್ಟಿರುವುದು ಸಂತಸ ತಂದಿದೆ. ಈ ಸಾಧನೆ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಣೆ ಎಂದು ಪ್ರತಿಕ್ರಿಯಿಸಿದ್ದಾರೆ.

English summary
Udupi:10-year-old Tanushree breaks Guinness world record in full body revolutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X