ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಸಾಹಸಕ್ಕೆ ಮುಂದಾದ ಉಡುಪಿಯ ಈಜುಗಾರ ಗಂಗಾಧರ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 20: ಉಡುಪಿಯ ರಾಷ್ಟ್ರಪ್ರಶಸ್ತಿ ವಿಜೇತ ಈಜುಪಟು ಗಂಗಾಧರ ಜಿ. ಅವರು ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಅರಬ್ಬಿ ಸಮುದ್ರದಲ್ಲಿ ಪದ್ಮಾಸನ ಹಾಕಿ ಈಜಲಿದ್ದಾರೆ.

ಹಲವು ಪ್ರಶಸ್ತಿಗಳನ್ನು ತನ್ನ ಸಾಧನೆಯ ಮುಡಿಗೇರಿಸಿಕೊಂಡಿರುವ ಖ್ಯಾತ ಈಜುಪಟು ಗಂಗಾಧರ ಜಿ. ಜನವರಿ 24ರಂದು ಪದ್ಮಾಸನ ಭಂಗಿಯಲ್ಲಿ, ಕಾಲಿಗೆ ಸರಪಳಿ ಸುತ್ತಿ ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ ಒಂದು ಕಿಲೋಮೀಟರ್ ಈಜಿ ನೂತನ ದಾಖಲೆ ನಿರ್ಮಿಸಲಲು ಸಜ್ಜಾಗಿದ್ದಾರೆ.

ಚಿಕ್ಕಮಗಳೂರು; ಹನುಮಾನ್ ಚಾಲೀಸಾ ಹೇಳಿ ದಾಖಲೆ ಬರೆದ ಹುಡುಗಿಚಿಕ್ಕಮಗಳೂರು; ಹನುಮಾನ್ ಚಾಲೀಸಾ ಹೇಳಿ ದಾಖಲೆ ಬರೆದ ಹುಡುಗಿ

ಈ ಸಂಬಂಧ ಬುಧವಾರ ಮಾಹಿತಿ ನೀಡಿದ ಅವರು, "ಜನವರಿ 24 ರಂದು ಬೆಳಗ್ಗೆ 8 ಗಂಟೆಗೆ ಮಲ್ಪೆ ಕಡಲ ಕಿನಾರೆಯಲ್ಲಿ ಒಂದು ಕಿಲೋಮೀಟರ್ ಈಜುವ ಮೂಲಕ ಇಂಡಿಯ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ಹೊಸ ದಾಖಲೆ ನಿರ್ಮಿಸುವುದಾಗಿ" ಹೇಳಿದರು.

 ವಿವಿ ಸಾಗರ ಜಲಾಶಯದ ಹಿನ್ನೀರಿನಲ್ಲಿ ವಿದ್ಯಾರ್ಥಿಗಳಿಗೆ ಈಜು ತರಬೇತಿ ವಿವಿ ಸಾಗರ ಜಲಾಶಯದ ಹಿನ್ನೀರಿನಲ್ಲಿ ವಿದ್ಯಾರ್ಥಿಗಳಿಗೆ ಈಜು ತರಬೇತಿ

Swimmer Gangdher All Set To Enter India Book Of Records

ಗಂಗಾಧರ ಜಿ. ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಗಂಗಾಧರ ಅವರಿಗೆ ಈಗ 65ರ ಹರೆಯ. 2009ರಿಂದ 2019ರವರೆಗೆ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 31 ಚಿನ್ನ, 16 ಬೆಳ್ಳಿ, ಎಂಟು ಕಂಚಿನ ಪದಕ ಗಳಿಸಿದ್ದಾರೆ.

ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಮತ್ತೆ ಕಂಟಕ?ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಮತ್ತೆ ಕಂಟಕ?

Recommended Video

DK Shivakumarನ ಅರೆಸ್ಟ್ ಮಾಡಿ ಎಲ್ಲಿಗೆ ಕರ್ಕೊಂಡು ಹೋದರು ಗೊತ್ತಾ?? | Oneindia Kannada

ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿರುವ ಹೆಗ್ಗಳಿಕೆ ಇವರದು. ಈ ಬಾರಿ ಗಂಗಾಧರ ಇಂಡಿಯ ಬುಕ್ ಅಫ್ ರೆಕಾರ್ಡ್ಸ್ ಗಾಗಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಹಾಕಿ ಈಜುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ.

English summary
Udupi based 65 year old swimmer Gangdher G. all set to enter India book of records. Record swimming will be held on January 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X