ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಕ್ಸಾಂ ಹಾಲ್ ನಲ್ಲಿ ಜಸ್ಟ್ 'ವಾಚ್' ನೋಡಿದರೆ ಕಾಣುತ್ತಿತ್ತು ಉತ್ತರ

|
Google Oneindia Kannada News

ಉಡುಪಿ, ನವೆಂಬರ್.27: ಪರೀಕ್ಷೆಗಳಲ್ಲಿ ಕಾಫಿ ಹೊಡೆಯೋದು ಅಂದ್ರೆ ಈಗಿನ ವಿದ್ಯಾರ್ಥಿಗಳಿಗೆ ಒಂದು ಚಾಲೆಂಜಿಂಗ್ ಜಾಬ್ ಆದಂತೆ ಕಾಣುತ್ತಿದೆ. ಶಿಕ್ಷಕರು ಚಾಪೆ ಕೆಳಗೆ ನುಸುಳಿದರೆ, ವಿದ್ಯಾರ್ಥಿಗಳು ರಂಗೋಲಿ ಕೆಳಗೆ ನುಸುಳುತ್ತಾರೆ. ಇಂಥದೊಂದು ಮಾತಿಗೆ ಈ ವಿದ್ಯಾರ್ಥಿಯೇ ಬೆಸ್ಟ್ ಎಕ್ಸಾಂಪಲ್.

ಇದು ಯಾವುದೋ ಪರದೇಶ, ಪರ ರಾಜ್ಯದಲ್ಲಿ ನಡೆದಿರುವ ಘಟನೆಯಂತೂ ಅಲ್ಲವೇ ಅಲ್ಲ. ಬುದ್ಧವಂತನ ಜಿಲ್ಲೆ ಎಂದೇ ಪ್ರಸಿದ್ಧ ಪಡೆದಿರುವ ಉಡುಪಿಯಲ್ಲಿ ವಿದ್ಯಾರ್ಥಿಯೊಬ್ಬ ಮಾಡಿರುವ ಕೆಲಸ ಎಂಥವರೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ.

10 ಸಾವಿರ ಕೊಟ್ಬಿಡಿ, ಬೇಕಾದ ಹಾಗೆ ಕಾಪಿ ಮಾಡ್ಕೊಳಿ...10 ಸಾವಿರ ಕೊಟ್ಬಿಡಿ, ಬೇಕಾದ ಹಾಗೆ ಕಾಪಿ ಮಾಡ್ಕೊಳಿ...

ಇಂಜಿನಿಯರ್ ವಿದ್ಯಾರ್ಥಿ ತೋರಿದ ಜಾಣಾಕ್ಷತನವೇನೋ ಬೊಂಬಾಟ್. ಆದರೆ, ಅದನ್ನು ಬಳಸಿಕೊಂಡ ಮಾರ್ಗ ಮಾತ್ರ ಯಾರಿಗೂ ಇಷ್ಟವಾಗುವುದಿಲ್ಲ. ಕೈಯಲ್ಲಿ ಕಟ್ಟಿಕೊಂಡು ವಾಚ್ ನಿಂದ ವಿದ್ಯಾರ್ಥಿಯ ಹಣೆಬರಹವೇ ಫುಲ್ ಚೇಂಜ್ ಆಗಿದೆ.

ಚಿತ್ರಕೃಪೆ: ಡೈಜಿ ವರ್ಲ್ಡ್

ಎಕ್ಸಾಂ ಹಾಲ್ ನಲ್ಲಿ ಜಸ್ಟ್ 'ವಾಚ್' ಎಂದ ವಿದ್ಯಾರ್ಥಿ!

ಎಕ್ಸಾಂ ಹಾಲ್ ನಲ್ಲಿ ಜಸ್ಟ್ 'ವಾಚ್' ಎಂದ ವಿದ್ಯಾರ್ಥಿ!

ಹೌದು, ಉಡುಪಿ ಜಿಲ್ಲೆ ಮಣಿಪಾಲ್ ನ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆದ ಘಟನೆಯಿದು. ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಕಾಪಿ ಹೊಡೆಯಲು ಸ್ಪೆಷಲ್ ವಾಚ್ ಕಟ್ಟಿಕೊಂಡು ಬಂದಿದ್ದನು. ಪದೇ ಪದೆ ವಾಚ್ ಗಮನಿಸುತ್ತಿದ್ದ ವಿದ್ಯಾರ್ಥಿ ಮೇಲೆ ಕಣ್ಣಿಟ್ಟ ಶಿಕ್ಷಕರೇ ಫುಲ್ ಶಾಕ್ ಆಗಿ ಬಿಟ್ಟರು.

ಇಡೀ ಪುಸ್ತಕವೇ ಇತ್ತು ವಾಚ್ ನಲ್ಲಿ!

ಇಡೀ ಪುಸ್ತಕವೇ ಇತ್ತು ವಾಚ್ ನಲ್ಲಿ!

ಅಚ್ಚರಿ ಅನಿಸಿದರೂ ಇದ ಸತ್ಯವಾದ ಘಟನೆ. ವಿದ್ಯಾರ್ಥಿ ಕಟ್ಟಿಕೊಂಡ ವಾಚ್ ನಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿತ್ತು. ಏಕೆಂದರೆ ಇಡೀ ಪುಸ್ತಕವನ್ನೇ ವಿದ್ಯಾರ್ಥಿ ವಾಚ್ ನಲ್ಲಿ ಸ್ಕ್ಯಾನ್ ಮಾಡಿಕೊಂಡು ಬಂದಿದ್ದನು. ಉತ್ತರವನ್ನು ವಾಚ್ ನಲ್ಲಿ ಜೂಮ್ ಮಾಡಿಕೊಂಡು ನೋಡುತ್ತಾ ವಿದ್ಯಾರ್ಥಿ ಪರೀಕ್ಷೆಯನ್ನು ಸಖತ್ ಹಾಯಾಗಿ ಬರೆಯುತ್ತಿದ್ದನು.

ಕಾಪಿ ಹೊಡೆಯದಂತೆ ತಡೆಯಲು ವಿದ್ಯಾರ್ಥಿಗಳಿಗೆ 'ಪೆಟ್ಟಿಗೆ' ಹೆಲ್ಮೆಟ್!ಕಾಪಿ ಹೊಡೆಯದಂತೆ ತಡೆಯಲು ವಿದ್ಯಾರ್ಥಿಗಳಿಗೆ 'ಪೆಟ್ಟಿಗೆ' ಹೆಲ್ಮೆಟ್!

ಸಿಸಿ ಕ್ಯಾಮರಾ ಇರೋದೇ ಕಾಣಲಿಲ್ವಾ ಪಾಪಾ?

ಸಿಸಿ ಕ್ಯಾಮರಾ ಇರೋದೇ ಕಾಣಲಿಲ್ವಾ ಪಾಪಾ?

ವಾಚ್ ನಲ್ಲೇ ಪುಸ್ತಕವನ್ನು ಸ್ಕ್ಯಾನ್ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿ, ಅದನ್ನೇ ನೋಡಿಕೊಂಡು ಪರೀಕ್ಷೆ ಬರೆಯುತ್ತಿದ್ದನು. ಆದರೆ, ವಿದ್ಯಾರ್ಥಿಯ ಚಲನವಲನಗಳು ಪರೀಕ್ಷಾ ಕೊಠಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಿಂದ ಅನುಮಾನಗೊಂಡ ಪರೀಕ್ಷಾ ಮೇಲ್ವಿಚಾರಕರು, ವಿದ್ಯಾರ್ಥಿಯನ್ನು ಪರೀಕ್ಷಿಸಿದಾಗ ವಾಚ್ ನಲ್ಲಿದ್ದ ನಿಜರೂಪ ತಿಳಿದು ಬಂದಿದೆ.

ಹಣೆಬರಹ ಬದಲಿಸದಿರಲಿ ಇಂಥ ವಾಚ್!

ಹಣೆಬರಹ ಬದಲಿಸದಿರಲಿ ಇಂಥ ವಾಚ್!

ವಾಚ್ ನ್ನೇ ನೋಡಿಕೊಂಡು ಎಕ್ಸಾಂನಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಯನ್ನು ಈಗಾಗಲೇ ಡಿಬಾರ್ ಮಾಡಲಾಗಿದೆ. ಸರಿಯಾಗಿ ಓದಿಕೊಳ್ಳದೇ ಹೀಗೆ ವಾಮಮಾರ್ಗ ಅನುಸರಿಸಲು ಹೋಗಿ ಇಲ್ಲೊಬ್ಬ ವಿದ್ಯಾರ್ಥಿ ತನ್ನ ಬದುಕನ್ನೇ ಹಾಳು ಮಾಡಿಕೊಂಡಿದ್ದಾನೆ. ತಂತ್ರಜ್ಞಾನವನ್ನು ಉತ್ತಮ ಚಟುವಟಿಕೆಗಳಿಗೆ ಬಳಸಬೇಕೇ ವಿನಃ ಇಂಥ ಕೆಲಸಗಳಿಗೆ ಉಪಯೋಗಿಸುವುದು ಅಷ್ಟು ಸೂಕ್ತವಲ್ಲ.

ಇವರೇ ದೇಶದ ಅತ್ಯಂತ್ಯ ಕಿರಿಯ ನ್ಯಾಯಾಧೀಶರು: ಇದು ಹೊಸ ದಾಖಲೆಇವರೇ ದೇಶದ ಅತ್ಯಂತ್ಯ ಕಿರಿಯ ನ್ಯಾಯಾಧೀಶರು: ಇದು ಹೊಸ ದಾಖಲೆ

English summary
The Engineering Student Copy In Examination From Using Smart Watch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X