ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ವಿಷಯದಲ್ಲಿ ಅನುತ್ತೀರ್ಣ: ಹೆಬ್ರಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

|
Google Oneindia Kannada News

ಉಡುಪಿ, ಏಪ್ರಿಲ್ 16:ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ವಿದ್ಯಾರ್ಥಿನಿಯೊಬ್ಬಳು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅನುತ್ತೀರ್ಣಗೊಂಡ ಬೇಸರದಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹೆಬ್ರಿಯಲ್ಲಿ ನಡೆದಿದೆ.

ಕನ್ನಡ ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಮನನೊಂದ ವಿದ್ಯಾರ್ಥಿನಿ ಪ್ರಜ್ಞಾ (18) ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಹೆಬ್ರಿಯ ನಡುಮನೆ ಗ್ರಾಮದ ನಿವಾಸಿಯಾಗಿರುವ ಪ್ರಜ್ಞಾ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದರು.

ಪಿಯು ಫಲಿತಾಂಶ:ತೃತೀಯ ಸ್ಥಾನ ಪಡೆದ ಇಬ್ಬರೂ ಒಂದೇ ಜಿಲ್ಲೆಯವರು, ವಿಷಯವೂ ಒಂದೇಪಿಯು ಫಲಿತಾಂಶ:ತೃತೀಯ ಸ್ಥಾನ ಪಡೆದ ಇಬ್ಬರೂ ಒಂದೇ ಜಿಲ್ಲೆಯವರು, ವಿಷಯವೂ ಒಂದೇ

ಎಲ್ಲಾ ಸಬ್ಜೆಕ್ಟ್ ನಲ್ಲಿ 60ಕ್ಕಿಂತ ಹೆಚ್ಚು ಅಂಕ ಪಡೆದಿದ್ದ ಪ್ರಜ್ಞಾ ಕನ್ನಡ ಭಾಷೆಯಲ್ಲಿ ಕೇವಲ 4 ಅಂಕ ಪಡೆದು ಅನುತ್ತೀರ್ಣರಾಗಿದ್ದರು . ಇದರಿಂದ ಮನ ನೊಂದು ಸೀರೆಯಿಂದ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

Student committed suicide in Udupi

 ದ್ವಿತೀಯ ಪಿಯುಸಿ ಫಲಿತಾಂಶ: ಕೃತಿ, ವರ್ಷಿಣಿ, ಸ್ವಾತಿ ಟಾಪರ್ಸ್ ದ್ವಿತೀಯ ಪಿಯುಸಿ ಫಲಿತಾಂಶ: ಕೃತಿ, ವರ್ಷಿಣಿ, ಸ್ವಾತಿ ಟಾಪರ್ಸ್

ಕನ್ನಡ ಭಾಷೆಯಲ್ಲಿ‌ ಫೇಲ್ ಎನ್ನುವ ವಿಷಯವನ್ನು ಬೆಂಗಳೂರಿನ ಸಂಬಂಧಿಕರೊಬ್ಬರು ತಿಳಿಸಿದ ಹಿನ್ನೆಲೆಯಲ್ಲಿ ಪ್ರಜ್ಞಾ ತೀವ್ರ ಆಘಾತಕ್ಕೊಳಗಾಗಿದ್ದರು ಎಂದು ಹೇಳಲಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು ಮಾಡಲಾಗಿದೆ.

English summary
In a shocking incident second PUC student of Udupi committed suicide. Prajna (18) resident of Nadumane village near Bharmmavara disappointed after failing to clear the exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X