ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಪೆ ಬೀಚಿನಲ್ಲಿ ಮೇರೆ ಮೀರಿದ 'ಸ್ಟಿಂಗ್ ರೇ' ಮೀನಿನ ಹಾವಳಿ

|
Google Oneindia Kannada News

ಉಡುಪಿ, ಸೆಪ್ಟೆಂಬರ್ 28: ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಮಲ್ಪೆ ಬೀಚ್ ನಲ್ಲಿ ತೊರಕೆ ಅಥವಾ ಸ್ಟಿಂಗ್ ರೇ ಮೀನಿನ ಹಾವಳಿ ಹೆಚ್ಚಾಗಿದೆ. ನೀರಾಟ ಆಡಲು ಕಡಲಿಗಿಳಿಯುವ ಪ್ರವಾಸಿಗರಿಗೆ ಸ್ಟಿಂಗ್ ರೇ ಮೀನು ಚಾಟಿ ಏಟು ನೀಡುತ್ತಿದೆ.

ಉಡುಪಿಯ ಮಲ್ಪೆ ಬೀಚಿನಲ್ಲಿ ಸ್ಟಿಂಗ್ ರೇ ಮೀನುಗಳ ಹಾವಳಿಉಡುಪಿಯ ಮಲ್ಪೆ ಬೀಚಿನಲ್ಲಿ ಸ್ಟಿಂಗ್ ರೇ ಮೀನುಗಳ ಹಾವಳಿ

ಎರಡು ದಿನಗಳ ಹಿಂದೆ ಸ್ಟಿಂಗ್ ರೇ ಮೀನಿನ ದಾಳಿಯಿಂದ ಮಲ್ಪೆ ಬೀಚಿನಲ್ಲಿ 8 ಜನ ಗಾಯಗೊಂಡಿದ್ದರು. ಇದೀಗ ಮಲ್ಪೆ ಬೀಚ್ ನಲ್ಲಿ ಮತ್ತೆ 4 ಮಂದಿ ಪ್ರವಾಸಿಗರಿಗೆ ತೊರಕೆ ಮೀನು ತನ್ನ ಬಾಲದಲ್ಲಿರುವ ಮುಳ್ಳು ಚುಚ್ಚಿದೆ.

Stingray fish at Malpe troubles tourists more and more

ಸ್ಥಳೀಯ ಜೀವರಕ್ಷಕ ತಂಡದವರು ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ಪ್ರವಾಸಿಗರು ನೀರಾಟಕ್ಕೆ ಮುಂದಾಗುತ್ತಿದ್ದು ಸ್ಟಿಂಗ್ ರೇ ದಾಳಿಗೆ ಗುರಿಯಾಗುತ್ತಿದ್ದಾರೆ.

ಈ ತೊರಕೆ ಮೀನುಗಳ ಬಣ್ಣ ಹಾಗೂ ನೀರಿನಡಿಯ ಮರಳಿನ ಬಣ್ಣ ಒಂದೇ ರೀತಿ ಗೊಚರಿಸುವ ಕಾರಣ ನೀರಿಗಿಳಿದು ಆಟವಾಡುವ ಪ್ರವಾಸಿಗರು ಕಾಲಿನಡಿಯಲ್ಲಿ ಸಂಚರಿಸುವ ತೊರಕೆ ಮೀನನ್ನು ಅರಿವಿಲ್ಲದೆ ಮೆಟ್ಟಿ ನಿಲ್ಲುತ್ತಾರೆ. ಹೀಗಾದಾಗೆಲ್ಲಾ ಮೀನು ಮುಳ್ಳಿನಿಂದ ಚುಚ್ಚುತ್ತಿದೆ. ತೊರಕೆ ಮೀನಿನ ಮುಳ್ಳು ಚುಚ್ಚಿ ಗಾಯಗೊಂಡವರು ಸ್ಥಳೀಯ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ತೆರಳುತ್ತಿದ್ದಾರೆ .

ಶುಕ್ರವಾರದಿಂದ ಸರಣಿ ರಜೆಗಳು ಆರಂಭವಾಗಲಿದ್ದು ಸಹಜವಾಗಿ ಮತ್ತಷ್ಟು ಪ್ರವಾಸಿಗರ ದಂಡು ಮಲ್ಪೆ ಬೀಚ್ ನತ್ತ ಬರಲಿದೆ . ಸ್ಟಿಂಗ್ ರೇ ಅಥವಾ ತೊರಕೆ ಮೀನಿನ ಕುರಿತು ಮಾಹಿತಿ ಇರದ ಪ್ರವಾಸಿಗರು ತೊಂದರೆಗೀಡಾಗುವ ಸಾಧ್ಯತೆ ಇದೆ . ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಜಾಗೃತೆ ವಹಿಸಬೇಕಾದ ಅವಶ್ಯಕತೆ ಇದೆ. ಉಡುಪಿ ಜಿಲ್ಲಾಡಳಿತ ಕೂಡ ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ.

ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಕಂಡು ಬರುವ ಈ ಮೀನು ಈ ಅವಧಿಗೆ ಸಂತಾನೋತ್ಪತ್ತಿಗಾಗಿ ಕಡಲ ತಡಿಗೆ ಬರುತ್ತದೆ. ಅದರಂತೆ ಈ ವರ್ಷವೂ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳು ತೀರ ಸೇರಿವೆ. ಇನ್ನು ಒಂದು ವಾರದವರೆಗೆ ಈ ಮೀನುಗಳು ಸಮುದ್ರ ಕಿನಾರೆಯಲ್ಲಿ ಇರುತ್ತವೆ ಎಂದು ತಜ್ಞರು ಅಂದಾಜಿಸಿದ್ದಾರೆ.

English summary
For the last 6 days Malpe Beach has gathered with lots of Stingray fishes which is sharp as thorn. Day by day more and more Stingray fishes pricking tourists from their thorns and putting tourists in trouble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X