ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಸತ್ತ ಮಂಗಗಳ ಸಂಖ್ಯೆ 63 ಕ್ಕೆ ಏರಿಕೆ: ಆತಂಕದಲ್ಲಿ ಜನರು

|
Google Oneindia Kannada News

ಉಡುಪಿ, ಜನವರಿ 24:ಉಡುಪಿ ಜಿಲ್ಲೆಯಲ್ಲಿ ಈವರೆಗೆ ಸತ್ತ ಮಂಗಗಳ ಸಂಖ್ಯೆ 63 ಕ್ಕೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಂಗಗಳ ಸಾವಿನ ಸಂಖ್ಯೆ ಜನರ ಆತಂಕಕ್ಕೆ ಕಾರಣ ವಾಗಿದೆ. ನಿನ್ನೆ ಕೂಡ ಉಡುಪಿ ಜಿಲ್ಲೆಯ ಕಾರ್ಕಳದ ಇರ್ವತ್ತೂರು, ಬೈಲೂರು, ಅಜೆಕಾರು, ಬೈಂದೂರು ಹಾಗೂ ಪೇತ್ರಿಯಲ್ಲಿ ಒಟ್ಟು 5 ಮಂಗಗಳ ಶವ ಪತ್ತೆಯಾಗಿದೆ.

ಮಂಗಗಳ ಸಾವು:'ಮುಖ್ಯ ಪ್ರಾಣ'ನ ಮೊರೆ ಹೋದ ಉಡುಪಿ ನಾಗರಿಕರುಮಂಗಗಳ ಸಾವು:'ಮುಖ್ಯ ಪ್ರಾಣ'ನ ಮೊರೆ ಹೋದ ಉಡುಪಿ ನಾಗರಿಕರು

ಈಗಾಗಲೇ ಬೈಂದೂರು ಮತ್ತು ಅಜೆಕಾರಿನಲ್ಲಿ ಪತ್ತೆಯಾದ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಂಗಗಳ ಶವದ ಅಂಗಾಂಗ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

 ಉಡುಪಿ ಕಾಡಂಚಿನಲ್ಲಿ ಮತ್ತೆ 6 ಮೃತ ಮಂಗಗಳ ಶವ ಪತ್ತೆ: ಜನರಿಗೆ ಎಚ್ಚರಿಕೆ ಉಡುಪಿ ಕಾಡಂಚಿನಲ್ಲಿ ಮತ್ತೆ 6 ಮೃತ ಮಂಗಗಳ ಶವ ಪತ್ತೆ: ಜನರಿಗೆ ಎಚ್ಚರಿಕೆ

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇದುವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆಸುಪಾಸಿನ ಸುಮಾರು 114 ಮಂದಿ ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಇದರಲ್ಲಿ 45 ಮಂದಿಗೆ ಮಂಗನ ಕಾಯಿಲೆ ದೃಢಪಟ್ಟಿದೆ. 85 ಮಂದಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. 32 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Still now monkey death is continued in Udupi

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 6 ಮಂದಿಗೆ ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಯ ತಪಾಸಣೆ ನಡೆಸಲಾಗಿದೆ. ಈ ಪೈಕಿ 5 ಮಂದಿಯ ಪರೀಕ್ಷೆಯಲ್ಲಿ ಮಂಗನ ಕಾಯಿಲೆ ಇರುವುದು ದೃಢಪಟ್ಟಿಲ್ಲ. ಇನ್ನೋರ್ವನ ಪರೀಕ್ಷೆಯ ವರದಿ ಬರಬೇಕಿದೆ . ಉಡುಪಿ ಜಿಲ್ಲೆಯಲ್ಲಿ ಈವರೆಗೆ ಮಂಗನ ಕಾಯಿಲೆಯಿಂದ ಸಾವು ಸಂಭವಿಸಿಲ್ಲ.

English summary
Still now monkey death is continued in Udupi.63 monkey found dead in Udupi. Monkey fever being reported in Udupi is on high alert following the death of monkey in kundapura and Karkala taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X