ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀನು ಉತ್ಪಾದನೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನ ಗಳಿಸಲು ಕ್ರಮ: ಸಚಿವ ಶ್ರೀನಿವಾಸ್ ಪೂಜಾರಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 6: ದೇಶದಲ್ಲಿ ಕಡಲ ಮೀನುಗಾರಿಕೆಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಒಳನಾಡು ಮೀನು ಉತ್ಪಾದನೆಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನು ಮೂರೇ ವರ್ಷದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮೀನು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ತಲುಪುವ ಅವಕಾಶ ನಿಚ್ಚಳವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Recommended Video

Coronaಗೆ ಜನರು ಹಿಂದೆ ಕೊಡುತ್ತಿದ್ದ ಮರ್ಯಾದೆ ಈಗ ಕೊಡುತ್ತಿಲ್ಲ | Oneindia Kannada

ಉಡುಪಿ ಜಿಲ್ಲೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಗಂಗೊಳ್ಳಿ, ಮರವಂತೆ, ಕೊಡೇರಿ ಮೀನುಗಾರಿಕಾ ಜಟ್ಟಿ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಮ್ಮ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮೀನುಗಾರಿಕೆಗೆ ಪರಿಪೂರ್ಣ ಸಹಕಾರ ಹಾಗೂ ಉತ್ತೇಜನ ಕೊಡುತ್ತಿದ್ದಾರೆ ಎಂದರು.

ಮಲ್ಪೆ ಬಂದರಿನಲ್ಲಿ ಹಗ್ಗ ಕಡಿದು ಜಾರಿದ ಬೋಟ್: ಟೆಂಪೋ ಸಮುದ್ರಕ್ಕೆಮಲ್ಪೆ ಬಂದರಿನಲ್ಲಿ ಹಗ್ಗ ಕಡಿದು ಜಾರಿದ ಬೋಟ್: ಟೆಂಪೋ ಸಮುದ್ರಕ್ಕೆ

ಗಂಗೊಳ್ಳಿ ಮೀನುಗಾರಿಕಾ ಜಟ್ಟಿ ಕಾಮಗಾರಿ ವೀಕ್ಷಿಸಿದ ಸಚಿವರು 12 ಕೋಟಿ ರುಪಾಯಿ ಮೊತ್ತದಲ್ಲಿ ಹೊಸದಾಗಿ ಜಟ್ಟಿ ನಿರ್ಮಾಣವಾಗಲಿದ್ದು, ಇದರಿಂದ ಗಂಗೊಳ್ಳಿ ಪ್ರದೇಶದ ಮೀನುಗಾರಿಕೆಗೆ ಹೊಸ ಕಾಯಕಲ್ಪವಾಗಲಿದೆ ಎಂದು ಹೇಳಿದರು.

Step To Get Karnataka First Place In Fish Production: Minister Kota Srinivas Poojari

ಗಂಗೊಳ್ಳಿ ಮೀನುಗಾರಿಕಾ ಜಟ್ಟಿ ಪ್ರದೇಶದಲ್ಲಿ ಹೈಮಾಸ್ಟ್ ದೀಪದ ಅಳವಡಿಕೆ, ತುರ್ತಾಗಿ ಹೂಳೆತ್ತುವುದೂ ಸೇರಿದಂತೆ ಹಲವಾರು ಬೇಡಿಕೆಗೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿ, ತಕ್ಷಣ ಸಮಸ್ಯೆ ಬಗೆಹರಿಸಲು ತಿಳಿಸಿದರು.

ಮರವಂತೆ ಬ್ರೇಕ್ ವಾಟರ್ ನಿರ್ಮಾಣವಾಗುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಬ್ರೇಕ್ ವಾಟರ್ ಎರಡನೇ ಹಂತದ ಕಾಮಗಾರಿಗೆ 85 ಕೋಟಿ ರೂ. ಮೊತ್ತಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮೀನುಗಾರರ ಪರವಾಗಿ ಕೃತಜ್ಞತೆ ತಿಳಿಸಿದರು. ಎರಡನೇ ಹಂತದ ಕಾಮಗಾರಿಯ ಯೋಜನಾ ವರದಿ ಸಿದ್ಧವಾಗಿ, ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆಗಳು ಮುಗಿದು, ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮೀನುಗಾರರಿಗೆ ಭರವಸೆ ನೀಡಿದರು.

Step To Get Karnataka First Place In Fish Production: Minister Kota Srinivas Poojari

ಕೊಡೇರಿ ಮೀನುಗಾರಿಕಾ ಜೆಟ್ಟಿ ಮತ್ತು ಉಪ್ಪುಂದ ನಾಡದೋಣಿ ತಂಗುದಾಣದ ಕಿರು ಜಟ್ಟಿಗಳ ವಿಸ್ತರಣೆ ಮಾಡಿ ಮೂಲಭೂತ ಸೌಕರ್ಯ, ವಿದ್ಯುತ್ ದೀಪ, ಕೊಂಡಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಇದಕ್ಕೆ ಪೂರಕವಾಗಿ 4.5 ಕೋಟಿ ರುಪಾಯಿ ಪ್ರಸ್ತಾವನೆ ಹಣಕಾಸು ಇಲಾಖೆಯಲ್ಲಿ ಇದ್ದು, ವಾರಾಂತ್ಯದಲ್ಲಿ ಮಂಜೂರಾತಿ ಪಡೆದು ಮೀನುಗಾರರಿಗೆ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.

Step To Get Karnataka First Place In Fish Production: Minister Kota Srinivas Poojari

ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘಕ್ಕೆ ಭೇಟಿ ನೀಡಿದ ಸಚಿವರಿಗೆ, ಹಲವಾರು ಮಂದಿ ಮೀನುಗಾರಿಕೆಯಲ್ಲಿ ನಿರತರಾದ ಮಹಿಳೆಯರು ತಮಗೆ ವೃತ್ತಿ ಮಾಡಲು ಜಾಗದ ಸಮಸ್ಯೆಗಳಿದ್ದು, ಪರಿಹಾರ ಕೊಡಿಸಬೇಕೆಂದು ವಿನಂತಿಸಿದರು.

English summary
Karnataka ranks fourth in marine fisheries in the country and 9th in inland fish production. Minister Kota Srinivasa Poojari said the Karnataka state fish production in the country will be the first in the next three years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X