ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ವಿಶಿಷ್ಟ ಬಗೆಯ ಹೋಳಿ ಹಬ್ಬ ಆಚರಣೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 08: ಬೇರೆ ಕಡೆಗಳಲ್ಲಿ ಬಣ್ಣಗಳನ್ನು ಎರಚಿ ಹೋಳಿಯನ್ನು ಆಚರಿಸಿದರೆ ಕರಾವಳಿಯ ಮರಾಠಿ ನಾಯಕ ಮತ್ತು ಕುಡುಬಿ ಜನಾಂಗಗಳು ತಮ್ಮ ಬಗೆಬಗೆಯ ಉಡುಗೆ-ತೊಡುಗೆಯಿಂದಲೇ ಹೋಳಿ ಹಬ್ಬಕ್ಕೆ ಬಣ್ಣ ತುಂಬುತ್ತಿದ್ದಾರೆ.

ಉತ್ತರ ಭಾರತದಲ್ಲಿ ಬಣ್ಣಗಳನ್ನು ಎರಚಿ ಹೋಳಿ ಹಬ್ಬವನ್ನು ಆಚರಿಸಿದರೆ, ಕರಾವಳಿ ಭಾಗದಲ್ಲಿ ಬಗೆಬಗೆಯ ಬಣ್ಣದ ಬಟ್ಟೆಗಳನ್ನು ತೊಟ್ಟು ಮನಬಿಚ್ಚಿ ಕುಣಿಯುತ್ತ ಒಂದಷ್ಟು ಜನ ಹೋಳಿ ಆಚರಿಸುತ್ತಾರೆ.

ಜರ್ಮನಿಯಿಂದ ಕೃಷ್ಣನಗರಿಗೆ ಬಂದು ನಮ್ಮ ಸಂಸ್ಕೃತಿಗೆ ಮಾರು ಹೋದರುಜರ್ಮನಿಯಿಂದ ಕೃಷ್ಣನಗರಿಗೆ ಬಂದು ನಮ್ಮ ಸಂಸ್ಕೃತಿಗೆ ಮಾರು ಹೋದರು

ಉಡುಪಿಯಲ್ಲಿ ಮರಾಠಿ ನಾಯಕ ಸಮುದಾಯಕ್ಕೆ ಸೇರಿದ ಗಿರಿಜನರು, ಮಹಾರಾಷ್ಟ್ರದಿಂದ ಹೊರಟು ದಕ್ಷಿಣದ ಕಡೆಗೆ ವಲಸೆ ಬಂದವರು. ಹೋಳಿಯ ಹುಣ್ಣಿಮೆಯ ಸಂದರ್ಭ ಈ ಮರಾಠಿ ನಾಯಕ ಸಮುದಾಯದ ಉತ್ಸಾಹಿ ಯುವಕರು ಮನೆಯಲ್ಲಿರುವ ಬಣ್ಣ ಬಣ್ಣದ ಬಟ್ಟೆಯನ್ನು ತೊಟ್ಟುಕೊಂಡು ತಮ್ಮ ಕುಲದೇವಿ ಮಮ್ಮಾಯಿ ದೇವಸ್ಥಾನಕ್ಕೆ ಬರುತ್ತಾರೆ.

Special Kind Of Holi Festival Celebration In Coastal Area

ಇಲ್ಲಿ ದೇವರಿಗೆ ತೆಂಗಿನಕಾಯಿಯನ್ನು ತೆಗೆದಿಟ್ಟು, ಬಳಿಕ ಊರಿನ ಪ್ರಮುಖ ಮನೆಗಳಿಗೆ ತೆರಳುತ್ತಾರೆ. ಗುಮ್ಮಟೆ ಮತ್ತು ಜಾಗಟೆಯನ್ನು ಬಡಿಯುತ್ತಾ ಲಯಬದ್ಧವಾಗಿ ಮಹಾಮಾಯಿ ದೇವಿಯ ಸ್ಥುತಿಯನ್ನು ಹಾಡುತ್ತಾರೆ. ಬಳಿಕ ಹೋಳಿಯ ಹಾಡನ್ನು ಹಾಡುತ್ತಾ ಕುಣಿಯುತ್ತಾರೆ. ಈ ಕುಣಿತವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬವಾಗಿದೆ.

ಲಿವಾ ಮಿಸ್ ದಿವಾಗೆ ಹುಟ್ಟೂರು ಉಡುಪಿಯಲ್ಲಿ ಭರ್ಜರಿ ಸ್ವಾಗತಲಿವಾ ಮಿಸ್ ದಿವಾಗೆ ಹುಟ್ಟೂರು ಉಡುಪಿಯಲ್ಲಿ ಭರ್ಜರಿ ಸ್ವಾಗತ

ಹಾಡು, ಕುಣಿತ ಅಷ್ಟೇ ಅಲ್ಲದೆ ಈ ಹೋಳಿ ಆಚರಣೆಯಲ್ಲಿ ಧಾರ್ಮಿಕ ನಂಬಿಕೆಗಳು ಗಾಢವಾಗಿ ಹಾಸುಹೊಕ್ಕಾಗಿವೆ. ಹೋಳಿ ಕುಣಿತದ ತಂಡ ಮನೆಯ ಮುಂದೆ ಬರುತ್ತಿದ್ದಂತೆಯೇ ಮನೆಯ ಯಜಮಾನರು ಈ ತಂಡಕ್ಕೆ ಬೆಲ್ಲ, ನೀರು ನೀಡಿ ಉಪಚರಿಸುತ್ತಾರೆ.

Special Kind Of Holi Festival Celebration In Coastal Area

ಮನೆಯಲ್ಲಿ ಮದುವೆಯಾಗದೇ ಇರುವವರು, ಮಕ್ಕಳು ಆಗದೇ ಇರುವವರು ಇದ್ದರೆ ಹೋಳಿ ತಂಡದ ಮುಖ್ಯಸ್ಥರಿಂದ ಪ್ರಾರ್ಥನೆ ಮಾಡಿಸುತ್ತಾರೆ. ಈ ರೀತಿ ಪ್ರಾರ್ಥನೆ ಮಾಡಿಸಿ ಅದೆಷ್ಟೋ ಕಡೆಗಳಲ್ಲಿ ದೇವಿಯ ಅನುಗ್ರಹದಿಂದ ಫಲ ಸಿಕ್ಕಿದೆ. ಹೀಗಾಗಿ ಹೋಳಿಯ ತಂಡಗಳು ಮನೆಗೆ ಬರುವುದೆಂದರೆ ಅದೊಂದು ರೀತಿ ಮನೆಗೆ ಅದೃಷ್ಟ ಎಂಬ ಭಾವನೆ ಇದೆ.

English summary
The coastal Marathi Nayaka and the Kudubi people are all Colourful dressed for their Holi festivals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X