ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯ ಹನ್ನೊಂದರ ಬಾಲೆಯಿಂದ ಆರನೇ ವಿಶ್ವದಾಖಲೆ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ 6: ಯೋಗಾಸನದ ವಿವಿಧ ಭಂಗಿಗಳಲ್ಲಿ 5 ವಿಶ್ವ ದಾಖಲೆಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿರುವ 11ರ ಬಾಲೆ ಉಡುಪಿಯ ತನುಶ್ರೀ ಪಿತ್ರೋಡಿ ಶನಿವಾರ 6ನೇ ವಿಶ್ವದಾಖಲೆ ಮಾಡಿದ್ದಾಳೆ.

ಉಡುಪಿಯ ಸೇಂಟ್ ಸಿಸಿಲಿಸ್ ಶಾಲೆಯ ಆವರಣದಲ್ಲಿ 'ಮೋಸ್ಟ್ ಬ್ಯಾಕ್‌ವರ್ಡ್ಸ್ ಬಾಡಿ ಸ್ಕಿಪ್ ಇನ್‌ ಒನ್ ಮಿನಿಟ್' ವಿಭಾಗದಲ್ಲಿ 55 ಬಾರಿ ಉರುಳಿದ್ದು, ಈ ಬಾರಿ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ನಲ್ಲಿ ತನ್ನ ಹೆಸರನ್ನು ಸೇರ್ಪಡೆಗೊಳಿಸುವ ಮೂಲಕ ಆರನೇ ವಿಶ್ವದಾಖಲೆ ಪೂರ್ಣಗೊಳಿಸಿದಳು.

ಉಡುಪಿ; 5ನೇ ವಿಶ್ವದಾಖಲೆ ಮಾಡಲಿದ್ದಾಳೆ ತನುಶ್ರೀ ಪಿತ್ರೋಡಿ ಉಡುಪಿ; 5ನೇ ವಿಶ್ವದಾಖಲೆ ಮಾಡಲಿದ್ದಾಳೆ ತನುಶ್ರೀ ಪಿತ್ರೋಡಿ

ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ ಅಧಿಕಾರಿಗಳು ಮತ್ತು ಉಡುಪಿಯ ಜನತೆ ಈ ಬಾಲಕಿಯ ಅಪೂರ್ವ ದಾಖಲೆಗೆ ಸಾಕ್ಷಿಯಾದರು.

Sixth World Record Of The Tanushri Pitrodi Of Udupi

ಈ ಹಿಂದಿನ ವಿಶ್ವ ದಾಖಲೆಗಳು:

2017, ನಿರಾಲಾಂಭ ಪೂರ್ಣ ಚಕ್ರಾಸನ - 1 ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌

2018ರಲ್ಲಿ 'ಮೋಸ್ಟ್ ಫುಲ್ ಬಾಡಿ ರೆವಲ್ಯೂಷನ್ ಮೇನ್‌ಟೇನಿಂಗ್ ಎ ಚೆಸ್ಟ್ ಸ್ಟಾಂಡ್ ಪೊಸಿಷನ್' ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಮಾಡಿ ಗಿನ್ನಿಸ್‌ ವಿಶ್ವ ದಾಖಲೆ

Sixth World Record Of The Tanushri Pitrodi Of Udupi

2018ರಲ್ಲಿ ಇಟಲಿಯ ರೋಮ್‌ನಲ್ಲಿ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಸೇರಿ ಯೋಗ ಪ್ರದರ್ಶನ

2019ರಲ್ಲಿ ಉಡುಪಿಯ ಸೇಂಟ್ ಸಿಸಿಲಿಸ್ ಶಾಲೆಯಲ್ಲಿ 'ಮೋಸ್ಟ್ ನಂಬರ್ ಆಫ್‌ ರೋಲ್ಸ್‌ ಇನ್ ಒನ್‌ ಮಿನಿಟ್‌ ಇನ್‌ ಧನುರಾಸನ ಭಂಗಿ'ಯಲ್ಲಿ ಹಾಗೂ ಫೆ.22, 2020ರಲ್ಲಿ ಉದ್ಯಾವರ ಗ್ರಾಮ ಪಂಚಾಯಿತಿ ಮೈದಾನದಲ್ಲಿ ಚಕ್ರಾಸನ ರೇಸ್‌ ವಿಭಾಗದಲ್ಲಿ 100 ಮೀ ಅಂತರವನ್ನು 1 ನಿಮಿಷ 14 ಸೆಕೆಂಡ್‌ನಲ್ಲಿ ಕ್ರಮಿಸಿ ವಿಶ್ವದಾಖಲೆ

ಉಡುಪಿಯ ತನುಶ್ರೀ ಪಿತ್ರೋಡಿ ಈಗ 6ನೇ ವಿಶ್ವದಾಖಲೆ ನಿರ್ಮಿಸಿದ್ದಾಳೆ.

English summary
Tanushree Pitrodi from Udupi, who has made 5 world records in various postures of Yogasana, now made her 6th world record on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X