ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡ-ಬಿಎಸ್ ವೈ ಒಳ ಒಪ್ಪಂದ ಏನಿದೆಯೋ ಎಂದ ಸಿದ್ದು

By ಉಡುಪಿ ಪ್ರತಿನಿಧಿ
|
Google Oneindia Kannada News

Recommended Video

Siddaramaiah speaks on internal politics between Devegowda and Yediyurappa

ಉಡುಪಿ, ನವೆಂಬರ್ 6: "ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ವಾದಕ್ಕೆ ಹಿನ್ನಡೆಯಾಗಿಲ್ಲ. ಆಡಿಯೋವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಪ್ರತ್ಯೇಕ ವಿಚಾರಣೆ ಬೇಡ, ತೀರ್ಪಿನ ವೇಳೆ ಪರಿಗಣಿಸುವುದಾಗಿ ಹೇಳಿದೆ" ಎಂದು ಹೇಳಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

ಉಡುಪಿಯಲ್ಲಿ ಏರ್ಪಡಿಸಲಾಗಿದ್ದ ಗಾಂಧಿ 150 ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಸಂದರ್ಭ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಪಕ್ಷಕ್ಕೆ ದ್ರೋಹ ಬಗೆದು ಪಕ್ಷಾಂತರ ಮಾಡುವವರಿಗೆ ತಕ್ಕ ಪಾಠ: ಸಿದ್ದು ಗುಡುಗುಪಕ್ಷಕ್ಕೆ ದ್ರೋಹ ಬಗೆದು ಪಕ್ಷಾಂತರ ಮಾಡುವವರಿಗೆ ತಕ್ಕ ಪಾಠ: ಸಿದ್ದು ಗುಡುಗು

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಬಿಎಸ್ ವೈ ನಡುವೆ ನಡೆದಿದೆ ಎನ್ನಲಾದ ಮಾತುಕತೆ ಕುರಿತು ಗಮನ ಸೆಳೆದಾಗ, "ಅವರಿಬ್ಬರ ನಡುವೆ ಏನು ಒಳ ಒಪ್ಪಂದ ಆಗಿದ್ಯೋ ಗೊತ್ತಿಲ್ಲ. ಒಳ ಒಪ್ಪಂದದ ಟರ್ಮ್ಸ್ ಆಂಡ್ ಕಂಡೀಷನ್ಸ್ ಏನೋ ಗೊತ್ತಿಲ್ಲ. ಅವರಿಬ್ಬರ ನಡುವೆ ಮಾತುಕತೆ ಆಗಿರೋದಂತೂ ಸ್ಪಷ್ಟವಾಗಿದೆ. ಮಾತುಕತೆ ವಿಚಾರವನ್ನು ದೇವೇಗೌಡ, ಕುಮಾರಸ್ಬಾಮಿ ಇಬ್ಬರೂ ಒಪ್ಪಿಕೊಂಡಿದಾರೆ" ಎಂದು ಹೇಳಿದರು.

Siddaramaiah Speaks On Internal Settlement Between Devegowda And Yediyurappa

ಇನ್ನು ಸಿದ್ದರಾಮಯ್ಯ ಸರ್ಕಾರ ಬೀಳಿಸ್ತಾರೆ ಎಂಬ ಕುಮಾರಸ್ವಾಮಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿ, "ನಾನೇನೂ ಸರ್ಕಾರ ಬೀಳಿಸ್ತೀನಿ ಅಂದಿಲ್ಲ. ಕುಮಾರಸ್ವಾಮಿ ತಪ್ಪಾಗಿ ಪರಿಭಾವಿಸಿದ್ದಾರೆ. ಬಿಜೆಪಿ ಸರ್ಕಾರ ಉಳಿಯಲು ಉಪಚುನಾವಣೆಯಲ್ಲಿ ಎಂಟು ಸ್ಥಾನ ಗೆಲ್ಲಬೇಕು. ಗೆಲ್ಲಕಾಗಿಲ್ಲ ಅಂದ್ರೆ ಯಡಿಯೂರಪ್ಪ ರಾಜೀನಾಮೆ ಕೊಡ್ಬೇಕಾಗುತ್ತೆ. ಈ ಸಂದರ್ಭ ಬಂದ್ರೆ ಮಧ್ಯಾವಧಿ ಚುನಾವಣೆ ಬರಬಹುದು ಅಂದಿದ್ದೆ ಅಷ್ಟೆ. ಅದು ಬಿಟ್ಟು ನಾನು ಮುಖ್ಯಮಂತ್ರಿ ಆಗ್ಬೇಕು ಅಂತ ಈ ಮಾತು ಹೇಳಿಲ್ಲ" ಎಂದರು.

"ಹೇಗಾದರೂ ಮತ್ತೆ ಸಿಎಂ ಆಗೋಕೆ ಸಿದ್ದರಾಮಯ್ಯ ಸರ್ವಪ್ರಯತ್ನ"

"ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಡೋದಾದ್ರೆ ಕೊಡಲಿ. ಹಾಗೆ ಮಾಡಿದ್ರೆ ಜೆಡಿಎಸ್ ಜನರ ಮುಂದೆ ಎಕ್ಸ್ ಪೋಸ್ ಆಗುತ್ತೆ ಅವರು ಎಷ್ಡು ಜಾತ್ಯಾತೀತರು ಅಂತ.ನಿಜಕ್ಕೂ ಜಾತ್ಯತೀತ ರಾದ್ರೆ ಅವರು ಬಿಜೆಪಿಯನ್ನು ಬೆಂಬಲಿಸೋದಿಲ್ಲ" ಎಂದು ಜೆಡಿಎಸ್ ಅನ್ನು ಕುಟುಕಿದರು.

English summary
"Congress has not backed down by Supreme Court. The Supreme Court has said it will review the audio" said Former CM Siddaramaiah
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X