ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ಯದ ಚಾಕೊಲೇಟ್ ತಯಾರಿಸಿ ಉಡುಪಿಯಲ್ಲಿ ಮನೆಮಾತಾದ ಶುಭಾ ರವೀಂದ್ರ

|
Google Oneindia Kannada News

ಉಡುಪಿ, ನವೆಂಬರ್.07: "ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು..." ಹಾಡು ಕೇಳದವರಿಲ್ಲ. ಗುಂಡು ಹಾಕದೇನೇ ಈ ಹಾಡೇ ಅಷ್ಟು ಅಮಲೇರಿಸುತ್ತದೆಯೆಂದರೆ ಇನ್ನು ಗುಂಡು ಹಾಕಿದರೆ ಹೇಗಿರುತ್ತದೆ. ಈಗ ಗುಂಡು ಹಾಕುವ ಮಾತು ಹಾಗಿರಲಿ, ಗುಂಡಿನಿಂದ ಚಾಕೊಲೇಟ್ ತಯಾರಾದರೆ ಹೇಗಿರುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ...

ಹೌದು, ಇಂತಹದೊಂದು ಹೊಸ ಪ್ರಯತ್ನಕ್ಕೆ ಉಡುಪಿ ಬೈಲಕೆರೆಯ ನಿವಾಸಿ ಶುಭಾ ರವೀಂದ್ರ ಕೈ ಹಾಕಿದ್ದಾರೆ. ಆದರೆ ಇವರು ತಯಾರಿಸುವ ಮದ್ಯದ ಚಾಕೊಲೇಟ್ ತಿಂದರೆ ಅಮಲು ಮಾತ್ರ ಏರೋದಿಲ್ಲ.

ದೀಪಾವಳಿ ವಿಶೇಷ ಪುರವಣಿ

ವೈನ್‌, ರಮ್ ಮಿಶ್ರಣ ಮಾಡಿರುವ ಈ ಚಾಕೊಲೇಟ್ ಗಳಿಗೆ ಈಗ ಭಾರೀ ಬೇಡಿಕೆ ಹೆಚ್ಚಿದ್ದು, ಮಣಿಪಾಲದ ಎಂಜೆಸಿ ಮೈದಾನದಲ್ಲಿ ಪವರ್‌ ವತಿಯಿಂದ ಮಣಿಪಾಲ್‌ ಪ್ಲೀ ಮಳಿಗೆಯಲ್ಲಿ ಇತ್ತೀಚೆಗೆ ನಡೆದ ಚಾಕೊಲೆಟ್‌ ವೈವಿಧ್ಯಗಳ ಪ್ರದರ್ಶನದಲ್ಲಿ ಈ ಚಾಕೊಲೇಟ್ ಗಳನ್ನು ಪ್ರದರ್ಶಿಸಲಾಗಿತ್ತು.

ಭಾರತದಲ್ಲಿ 'ಕಿಸಸ್' ಪರಿಚಯಿಸಿದ ಅಮೆರಿಕದ ಹರ್ಷೆ ಚಾಕೊಲೆಟ್ಭಾರತದಲ್ಲಿ 'ಕಿಸಸ್' ಪರಿಚಯಿಸಿದ ಅಮೆರಿಕದ ಹರ್ಷೆ ಚಾಕೊಲೆಟ್

ಮದ್ಯ ಸುವಾಸನೆಯಿರುವ ಈ ಚಾಕೊಲೇಟ್ ಗಳನ್ನು ಖರೀದಿಸಿ ಬೈಟ್ ಸವಿಯಲು ಜನರು ಮುಗಿಬಿದ್ದಿದ್ದರು. ಗಂಡು ಹೆಣ್ಣೆನ ಬೇಧವಿಲ್ಲದೇ ಎಲ್ಲರನ್ನು ಚಾಕೊಲೇಟ್ ತನ್ನತ್ತ ಸೆಳೆದಿತ್ತು. ಅಂದಹಾಗೆ ಮದ್ಯ ಸುವಾಸನೆ ಬೀರುವ ಎಂಟು ಬಗೆಯ ಚಾಕೊಲೇಟ್ ಗಳನ್ನು ಶುಭಾ ರವೀಂದ್ರ ತಯಾರಿಸುತ್ತಾರೆ.

ಅಂದರೆ ಇದುವರೆಗೂ ರೆಡ್‌ ವೈನ್‌, ಓಡ್ಕಾ ವೆನಿಲ್ಲ, ಓಡ್ಕಾ ಆರೆಂಜ್‌, ಜಿನ್, ಓಡ್ಕಾ ಲೆಮೆಂಗ್ರಾಸ್, ವಿಸ್ಕಿ, ರಮ್ ರೈಸಿನ್ ಚಾಕೊಲೇಟ್ ಗಳನ್ನ ಶುಭಾ ತಯಾರಿಸಿದ್ದಾರೆ.

 2 ಮಾದರಿಯ ಚಾಕೊಲೇಟ್

2 ಮಾದರಿಯ ಚಾಕೊಲೇಟ್

ಈ ಮದ್ಯದ ಚಾಕೊಲೇಟ್ ತಯಾರಿಕೆಯ ಬಗ್ಗೆ ಕುರಿತು ಒನ್ ಇಂಡಿಯಾ ಜೊತೆ ಮಾತನಾಡಿದ ಶುಭಾ ರವೀಂದ್ರ, ಈವರೆಗೆ 2 ಮಾದರಿಯ ಚಾಕೊಲೇಟ್ ಗಳನ್ನು ತಯಾರಿಸುತ್ತಿರುವುದಾಗಿ ತಿಳಿಸಿದ್ದಾರೆ. ಒಂದು ಸಾಫ್ಟ್ ಚಾಕೊಲೇಟ್, ಇನ್ನೊಂದು ಫಿಲ್ಲಿಂಗ್ ಚಾಕೊಲೇಟ್ .

 ಫಿಲ್ಲಿಂಗ್ ಚಾಕೊಲೇಟ್

ಫಿಲ್ಲಿಂಗ್ ಚಾಕೊಲೇಟ್

ಶುಭಾ ಸಾಫ್ಟ್ ಚಾಕೊಲೇಟ್ ಗಳನ್ನು ಸಾಮಾನ್ಯವಾಗಿ ಹಣ್ಣುಗಳನ್ನು ಬಳಸಿ ತಯಾರಿಸುತ್ತಾರಂತೆ. ಇದರಲ್ಲಿ ಮದ್ಯದ ಸಾರ ಇರುವುದಿಲ್ಲ. ಆದರೆ ಮದ್ಯದ ಘಮ ಮಾತ್ರ ಭಾರೀ ಜೋರಾಗಿರುತ್ತದೆ. ಇನ್ನೊಂದು ಫಿಲ್ಲಿಂಗ್ ಚಾಕೊಲೇಟ್. ಇದರಲ್ಲಿ ರಮ್ ಹಾಗು ವೈನ್ ಅನ್ನು ಚಾಕೊಲೇಟ್ ನಲ್ಲಿ ಫಿಲ್ ಮಾಡಲಾಗುತ್ತದೆ.

ಈ ಪುಟಾಣಿ ಗ್ಲೋರಿಯಸ್ ಚಾಕಲೇಟ್ ಬೆಲೆ ಎಷ್ಟು ಗೊತ್ತಾ?ಈ ಪುಟಾಣಿ ಗ್ಲೋರಿಯಸ್ ಚಾಕಲೇಟ್ ಬೆಲೆ ಎಷ್ಟು ಗೊತ್ತಾ?

 ಬೇರೆ ಬೇರೆ ಟೇಸ್ಟ್

ಬೇರೆ ಬೇರೆ ಟೇಸ್ಟ್

ಫಿಲ್ಲಿಂಗ್ ಚಾಕೊಲೇಟ್ ಭಾರತದಲ್ಲಿ ಸಿಗೋದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಸಿಗುತ್ತದೆ. ಅಲ್ಲಿಂದ ಬರುವವರು ಅದನ್ನು ನಮ್ಮ ಭಾರತಕ್ಕೆ ತರುತ್ತಾರೆ. ಆದರೆ ಅವರು ಈ ಚಾಕೊಲೇಟ್ ತಯಾರಿಸುವ ಬಗೆ ಬೇರೆ. ಆದರೆ ನಾನು ತಯಾರಿಸುವ ಬಗೆ ಬೇರೆಯಾದರೂ ಟೇಸ್ಟ್ ಮಾತ್ರ ಒಂದೇ ರೀತಿಯಲ್ಲಿ ಇರುತ್ತದೆ ಎನ್ನುತ್ತಾರೆ ಶುಭಾ ರವೀಂದ್ರ.

 0.50ಎಂ. ಎಲ್‌. ಮದ್ಯ ಸಾರ

0.50ಎಂ. ಎಲ್‌. ಮದ್ಯ ಸಾರ

ವೈನ್‌, ರಮ್ ಬೆರೆಸಿದ ಬ್ಲೂ ಬೆರಿ, ಲಿಚಿ, ರಮ್ ಬೆರೆಸಿದ ಸ್ಟ್ರಾ ಬೆರಿ, ಬ್ಲ್ಯಾಕ್‌ ಕರೆಂಟ್‌ ಚಾಕೊಲೇಟ್ ನಲ್ಲಿ 0.50ಎಂ. ಎಲ್‌. ಮದ್ಯ ಸಾರವಿರುತ್ತದೆ ಅಷ್ಟೇ. ಆದರೆ ಮದ್ಯದ ಘಮ ಮಾತ್ರ ಜೋರಾಗಿರುತ್ತದೆ. ಆದರೆ ಮದ್ಯದ ಸಾರ, ಹನಿ ಪ್ರಮಾಣದಲ್ಲಿ ಬಳಕೆಯಾದ ಹಿನ್ನೆಲೆಯಲ್ಲಿ ಅಮಲಿನ ಪ್ರಶ್ನೆಯಿಲ್ಲ ಎನ್ನುತ್ತಾರೆ ಶುಭಾ ರವೀಂದ್ರ.

ಈ ಕಳ್ಳರು ತುಂಬಾ ಚೂಸಿ: ಬರೀ ಚಾಕೊಲೇಟ್‌, ಡ್ರೈ ಫ್ರೂಟ್ಸ್‌ ಕದೀತಾರೆಈ ಕಳ್ಳರು ತುಂಬಾ ಚೂಸಿ: ಬರೀ ಚಾಕೊಲೇಟ್‌, ಡ್ರೈ ಫ್ರೂಟ್ಸ್‌ ಕದೀತಾರೆ

 40 ರೂಪಾಯಿ ದರ ನಿಗದಿ

40 ರೂಪಾಯಿ ದರ ನಿಗದಿ

ಹಣ್ಣು ಹಾಗೂ ಒಣ ಖರ್ಜುರ, ದ್ರಾಕ್ಷಿ ಉಪಯೋಗಿಸಿ ಶುಭಾ ರವೀಂದ್ರ ಚಾಕೊಲೇಟ್ ತಯಾರಿಸುತ್ತಾರಂತೆ. ಒಣ ಹಣ್ಣುಗಳ ಚಾಕೊಲೇಟ್ ಗಳ ನಡುವೆ ಘಮ ಘಮಿಸುವ ಮದ್ಯ ಸುವಾಸನೆಯ ರುಚಿ ಬಲ್ಲವರು ಚಾಕೊಲೇಟ್ ಖರೀದಿಸುತ್ತಾರೆ. ಆದರೆ 18ಕ್ಕಿಂತ ಕೆಳಗಿನ ವಯಸ್ಸಿನವರಿಗೆ ಮದ್ಯ ಸುವಾಸನೆಯ ಚಾಕೊಲೇಟ್ ಮಾರೋದಿಲ್ಲ ಎನ್ನುತ್ತಾರೆ ಶುಭಾ ರವೀಂದ್ರ. ಒಂದು ಚಾಕೊಲೇಟ್ ಗೆ 40 ರೂಪಾಯಿ ದರ ನಿಗದಿ ಮಾಡಲಾಗಿದೆ.

English summary
Shubha Ravindra A woman entrepreneur of Bailakere from Udupi has launched a unique brand of chocolates with alcohol content.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X