ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಸುಳ್ಳು:ಶೋಭಾ ಕರಂದ್ಲಾಜೆ

|
Google Oneindia Kannada News

Recommended Video

ಬಿಜೆಪಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ | Oneindia Kannada
Shobha karandlaje Said BJPs Sate president change is false news

ಉಡುಪಿ, ನವೆಂಬರ್.16: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು. ದೇಶದ ಜನರು ರಾಮಮಂದಿರ ಅಪೇಕ್ಷೆ ಪಟ್ಟಿದ್ದು, ಮೋದಿ ನೇತೃತ್ವದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ವಿಶ್ವಾಸ ಇದೆ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿದರು.

ಇಂದು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಆರ್ ಎಸ್ಎಸ್ ದೇಶಾದ್ಯಂತ ಬೃಹತ್ ಸಮಾವೇಷ ಆಯೋಜಿಸಿದೆ. ಕೇಂದ್ರ ಸರ್ಕಾರ ಸೂಕ್ತ ತಿರ್ಮಾನ ತೆಗೆದುಕೊಳ್ಳಲಿದ್ದು, ಸುಪ್ರೀಂ ಕೋರ್ಟ್ ನಿಧಾನಗತಿ ಮಾಡಬಾರದು.

'ಶ್ರೀರಾಮುಲು ಮುಂದಿನ ಸಿಎಂ' ಹೇಳಿಕೆ ಸರಿ ಅಲ್ಲ ಎಂದ ಶೋಭಾ ಕರಂದ್ಲಾಜೆ'ಶ್ರೀರಾಮುಲು ಮುಂದಿನ ಸಿಎಂ' ಹೇಳಿಕೆ ಸರಿ ಅಲ್ಲ ಎಂದ ಶೋಭಾ ಕರಂದ್ಲಾಜೆ

ಪುರಾತನ ಕೇಸುಗಳೆಲ್ಲ ಸುಪ್ರೀಂ ನಲ್ಲಿ ನಿರ್ಧಾರವಾಗಿದೆ. ಭಕ್ತರ ಭಾವನೆಗೆ ಕೋರ್ಟ್ ಸ್ಪಂದಿಸಬೇಕು. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಸುಳ್ಳು. ಈ ಬಗ್ಗೆ ಮಂಗಳೂರು ಬೈಠಕ್ ನಲ್ಲಿ ಚರ್ಚೆಯಾಗಿಲ್ಲ. ಇದು ಎಲ್ಲವೂ ಊಹಾಪೋಹ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದರು.

 ಮಾಧ್ಯಮಗಳಲ್ಲಿ ಬರುವ ಚರ್ಚೆ ಸುಳ್ಳು

ಮಾಧ್ಯಮಗಳಲ್ಲಿ ಬರುವ ಚರ್ಚೆ ಸುಳ್ಳು

ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಇವತ್ತಿನ ತನಕ ಚರ್ಚೆಯಾಗಿಲ್ಲ. ಮಾಧ್ಯಮಗಳಲ್ಲಿ ಬರುವ ಚರ್ಚೆ ಸುಳ್ಳು ಮಾಹಿತಿಯಿಂದಾಗಿದೆ. ಬಿಜೆಪಿಯನ್ನು ಅಭದ್ರಗೊಳಿಸಲು ಯತ್ನ ಷಡ್ಯಂತ್ರ ನಡೀತಿದೆ. ಇಂತಹ ಸುದ್ದಿ ಹಬ್ಬಿಸಿದವರು ಯಾರು ಎಂಬುದು ಗೊತ್ತಾಗುತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ಸಿಟ್ಟಾದರು.

 ಕಾಂಗ್ರೆಸ್ಸಿಗರಿಗೆ ಕೊನೆಗೂ ಜ್ಞಾನೋದಯ: ಶೋಭಾ ಕರಂದ್ಲಾಜೆ ವಾಗ್ದಾಳಿ ಕಾಂಗ್ರೆಸ್ಸಿಗರಿಗೆ ಕೊನೆಗೂ ಜ್ಞಾನೋದಯ: ಶೋಭಾ ಕರಂದ್ಲಾಜೆ ವಾಗ್ದಾಳಿ

 ಸ್ತ್ರೀವಾದಿಯ ಸೋಗಿನಲ್ಲಿ ಬಂದಿದ್ದಾರೆ

ಸ್ತ್ರೀವಾದಿಯ ಸೋಗಿನಲ್ಲಿ ಬಂದಿದ್ದಾರೆ

ಶಬರಿ ಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಪ್ರತಿಕ್ರಯಿಸಿದ ಶೋಭಾ ಕರಂದ್ಲಾಜೆ ಕೊಚ್ಚಿನ್ ಏರ್ ಪೋರ್ಟ್ ಗೆ ತೃಪ್ತಿ ದೇಸಾಯಿ ಬಂದಿಳಿದಿದ್ದಾರೆ. ತೃಪ್ತಿ ದೇಸಾಯಿ ಬಂದ ಸ್ಟೈಲ್ ಅಯ್ಯಪ್ಪ ಭಕ್ತೆಯಂತಿಲ್ಲ ಸ್ತ್ರೀವಾದಿಯ ಸೋಗಿನಲ್ಲಿ ಬಂದಿದ್ದಾರೆ ಎಂದರು.

ಶೋಭಾ ಕರಂದ್ಲಾಜೆಯವರನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

 ಪ್ರಚಾರ ಗಿಟ್ಟಿಸಲು ಕೇರಳಕ್ಕೆ ಬಂದಿದ್ದಾರೆ

ಪ್ರಚಾರ ಗಿಟ್ಟಿಸಲು ಕೇರಳಕ್ಕೆ ಬಂದಿದ್ದಾರೆ

ತೃಪ್ತಿ ದೇಸಾಯಿ ದೇಶದಲ್ಲಿ ಪ್ರಚಾರ ಗಿಟ್ಟಿಸಲು ಕೇರಳಕ್ಕೆ ಬಂದಿದ್ದಾರೆ. ಅಯ್ಯಪ್ಪನ ಭಕ್ತರಾಗಿ ಕೇರಳಕ್ಕೆ ಬಂದಿಲ್ಲ. ಇರುಮುಡಿ ಇಲ್ಲದೆ, ಉಪವಾಸ ವೃತ ಇಲ್ಲದೆ ಬಂದಿದ್ದಾರೆ.

ಸುಪ್ರೀಂ ಕೋರ್ಟ್ ಇರುಮುಡಿ ಇಲ್ಲದೆ, 41 ದಿನ ಉಪವಾಸ ಮಾಡದೆ ಬರಬಹುದು ಎಂದು ಹೇಳಿಲ್ಲ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
 ಅಯ್ಯಪ್ಪ ಭಕ್ತರ ಭಾವನೆಗೆ ಬೆಲೆ ಕೊಡಬೇಕು

ಅಯ್ಯಪ್ಪ ಭಕ್ತರ ಭಾವನೆಗೆ ಬೆಲೆ ಕೊಡಬೇಕು

ಹಿಂದೂ ಧರ್ಮ ಅವಹೇಳನ ಮಾಡುವವರು ದೇಶದಲ್ಲಿ ಇದ್ದಾರೆ. ಇಷ್ಟು ವರ್ಷ ಸಹಿಸಿಕೊಂಡು ಬಂದಿದ್ದೇವೆ. ದೇವಸ್ಥಾನದ ವಿಚಾರದ ಭಕ್ತರಿಗೆ, ಪಂದಳ ರಾಜ, ಅರ್ಚಕರಿಗೆ ಬಿಡಬೇಕುಸುಪ್ರೀಂ ಕೋರ್ಟ್ ಅಯ್ಯಪ್ಪ ಭಕ್ತರ ಭಾವನೆಗೆ ಬೆಲೆ ಕೊಡಬೇಕು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

English summary
BJP leader Shobha karandlaje Said that BJP's Sate president change is false news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X