ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರಕ್ಕೆ ಪ್ರತ್ಯುತ್ತರ ಕೊಡುವ ಸಿಂಹದ ಮರಿ‌ ಮೋದಿ:ಶೋಭಾ ಕರಂದ್ಲಾಜೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 01: ಏರ್ ಸರ್ಜಿಕಲ್ ಸ್ಟೈಕ್ ನಿಂದ ಬಿಜೆಪಿಗೆ ಲಾಭ ಎಂದು ಯಡಿಯೂರಪ್ಪ ವಿವಾದಾತ್ಮಕ ಹೇಳಿಕೆ ನೀಡಿರುವುದರ ಕುರಿತು ಶೋಭಾ ಕರಂದ್ಲಾಜೆ ಸ್ಪಷ್ಟನೆ ಕೊಟ್ಟಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಹೆಚ್ಚು ಮಾತಾಡೋಕೆ ಹೋಗಲ್ಲ. ಈ ಘಟನೆ ಅಥವಾ ಯುದ್ದದ ಕಾರಣಕ್ಕೆ ಅವರು ಹೇಳಿದ್ದಲ್ಲ.ಪದೇ ಪದೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ ಎಂದು ಸಿಟ್ಟಾದರು.

ಕರ್ನಾಟಕ ಬಿಜೆಪಿ ಆಂತರಿಕ ಸಮೀಕ್ಷೆ: ಬೆಚ್ಚಿಬಿದ್ದ ಅಮಿತ್ ಶಾ!ಕರ್ನಾಟಕ ಬಿಜೆಪಿ ಆಂತರಿಕ ಸಮೀಕ್ಷೆ: ಬೆಚ್ಚಿಬಿದ್ದ ಅಮಿತ್ ಶಾ!

ಯಡಿಯೂರಪ್ಪ 22 ಸೀಟು ಗೆಲ್ಲುವ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ. ಇದು ಪ್ರತೀ ಸಂದರ್ಭ ಅವರ ಬಾಯಲ್ಲಿ ಬರುವ ಮಾತು ಅಷ್ಟೇ. ಅವರ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ. ಈಗಾಗಲೇ ಯಡ್ಯೂರಪ್ಪ ಸ್ಪಷ್ಟನೆ ಕೊಟ್ಡಿದ್ದಾರೆ ಎಂದು ಯಡಿಯೂರಪ್ಪ ಪರ ಶೋಭಾ ಕರಂದ್ಲಾಜೆ ಮಾತನಾಡಿದರು.

Shobha Karandlaje praised Prime Minister Modi in Udupi

ದೇವೇಗೌಡರ ಕಾಲದಲ್ಲಿ ಶಾಂತಿ ನೆಲೆಸಿತ್ತು ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಶೋಭಾ, ದೇವೇಗೌಡರ ಬಗ್ಗೆ ನಂಗೆ ತುಂಬಾ ಗೌರವ ಇದೆ. ಆದರೆ ಅವರು ಪಿಎಂ ಆಗಿದ್ದದ್ದು ಅಲ್ಪಾವಧಿಗೆ. ಹಿಂದಿನ ಎಲ್ಲಾ ಪ್ರಧಾನಿಗಳು ಮೋದಿ ತರಹ ಯೋಚನೆ ಮಾಡಿದ್ರೆ ಈ ಸಮಸ್ಯೆ ಬರ್ತಿರ್ಲಿಲ್ಲ. ಭಯೋತ್ಪಾದಕರು ನಮ್ಮ ಊರುಗಳಿಗೂ ಹೊಕ್ಕುತ್ತಿರಲಿಲ್ಲ, ಹಿಂದಿನ ಪ್ರಧಾನಿಗಳು ಗಡಿ ಸಮಸ್ಯೆಯನ್ನು ಸಹಿಸಿದ್ದೇ ತಪ್ಪು ಎಂದು ಶೋಭಾ ಕರಂದ್ಲಾಜೆ ಹೇಳಿದರು.

 ಇಂಥ ಅಪ್ರಬುದ್ಧ ಮಾತು ಆಡುವ ಅಗತ್ಯವಿತ್ತೆ ಯಡಿಯೂರಪ್ಪನವರೆ? ಇಂಥ ಅಪ್ರಬುದ್ಧ ಮಾತು ಆಡುವ ಅಗತ್ಯವಿತ್ತೆ ಯಡಿಯೂರಪ್ಪನವರೆ?

ಇದೇ ಸಂದರ್ಭದಲ್ಲಿ ಮೋದಿ ಅವರನ್ನು ಪ್ರಶಂಸಿಸಿದ ಶೋಭಾ ಕರಂದ್ಲಾಜೆ, ಇವತ್ತಿನ ಪ್ರಧಾನಿ ಸಹಿಸುವಂತವರಲ್ಲ, ಉತ್ತರಕ್ಕೆ ಪ್ರತ್ಯುತ್ತರ ಕೊಡುವ ಸಿಂಹದ ಮರಿ‌ ಮೋದಿ. ಕುಮಾರಸ್ವಾಮಿ ಹಗುರವಾದ ಮಾತನಾಡೋದು ಸರಿಯಲ್ಲ ಎಂದರು.

 ಲೋಕಸಭೆಯಲ್ಲಿ ಬಿಜೆಪಿ 22 ಸೀಟು ಗೆಲ್ಲಲು ಏರ್‌ಸ್ಟ್ರೈಕ್ ಸಹಾಯ ಮಾಡಲಿದೆ: ಯಡಿಯೂರಪ್ಪ ಲೋಕಸಭೆಯಲ್ಲಿ ಬಿಜೆಪಿ 22 ಸೀಟು ಗೆಲ್ಲಲು ಏರ್‌ಸ್ಟ್ರೈಕ್ ಸಹಾಯ ಮಾಡಲಿದೆ: ಯಡಿಯೂರಪ್ಪ

ನಾವು ಪುಲ್ವಾಮಾ ಘಟನೆಯನ್ನು ಸಹಿಸಬೇಕಿತ್ತಾ ಎಂದು ಪ್ರಶ್ನಿಸಿದ ಶೋಭಾ, ಓಲೈಕೆ ರಾಜಕಾರಣಕ್ಕೆ ಏನೇನೋ ಮಾತನಾಡಬೇಡಿ, ಈಗ ಓಲೈಕೆ ರಾಜಕಾರಣ ಇಲ್ಲ, ಈಗ ಇರುವುದು ಸಿಂಹದ ಮರಿಯ ಅಧಿಕಾರ ಎಂದು ತಿಳಿಸಿದರು.

English summary
MP Shobha Karandlaje praised Prime Minister Modi in Udupi. She also clarified Yeddyurappa's statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X