ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್, ತೌಕ್ತೆ ನಿರ್ವಹಣೆ ಕುರಿತು ಸಂಸದರ ಸಭೆ; ಹಾನಿಯ ಅವಲೋಕನ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 16; ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಖಾಯಿಲೆಯ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕಳೆದ 8 ದಿನಗಳಲ್ಲಿ ಇದೀಗ ಎರಡನೇ ಬಾರಿಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೋವಿಡ್ ನಿರ್ವಹಣೆಯ ಕುರಿತು ಪರಿಶೀಲನೆ ನಡೆಸಿದರು.

ಕೋವಿಡ್ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲೆಯ ನಾಗರೀಕರಿಗೆ ಬೆಡ್ ಹಂಚಿಕೆ, ಆಕ್ಸಿಜನ್ ಪೂರೈಕೆ, ರೆಮಿಡಿಸಿವರ್ ಸರಬರಾಜು, ವ್ಯಾಕ್ಸಿನ್ ನೀಡುವಿಕೆ ಮೊದಲಾದ ವಿಚಾರಗಳ ಬಗ್ಗೆ ಮಾಹಿತಿಯನ್ನು ಶೋಭಾ ಕರಂದ್ಲಾಜೆ ಪಡೆದುಕೊಂಡರು.

ತೌಕ್ತೆ ಅಬ್ಬರ; ಮುರುಡೇಶ್ವರದಲ್ಲಿ ಗೂಡಂಗಡಿಗಳು ನೀರುಪಾಲುತೌಕ್ತೆ ಅಬ್ಬರ; ಮುರುಡೇಶ್ವರದಲ್ಲಿ ಗೂಡಂಗಡಿಗಳು ನೀರುಪಾಲು

ಆಸ್ಪತ್ರೆಗಳಿಗೆ ದಾಖಲಾಗುವ ಜಿಲ್ಲೆಯ ಯಾವುದೇ ಕೋವಿಡ್ ಸೋಂಕಿತರಿಗೆ ಯಾವುದೇ ಕೊರತೆಯಾಗದಂತೆ ಹೇಗೆ ಸನ್ನದ್ಧರಾಗಿರಬೇಕೆಂಬ ಕುರಿತು ಜಿಲ್ಲಾಡಳಿತದ ಕೋವಿಡ್ ನಿರ್ವಹಣಾ ತಂಡಕ್ಕೆ ಮಾರ್ಗದರ್ಶನ ನೀಡಿದರು. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ಉಲ್ಲೇಖಿಸಿದ ಅವರು ಗ್ರಾಮ ಪಂಚಾಯಿತಿ ಮಟ್ಟದ ಕೋವಿಡ್ ಕಾರ್ಯಪಡೆಯು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡಲು ಸೂಚಿಸಿದರು.

ಉಡುಪಿ: ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯಿಂದ ವೃದ್ಧರಿಗೆ ಕೊರೊನಾ ಹೆಲ್ಪ್ ಲೈನ್ ಉಡುಪಿ: ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯಿಂದ ವೃದ್ಧರಿಗೆ ಕೊರೊನಾ ಹೆಲ್ಪ್ ಲೈನ್

 Shobha Karandlaje Inspected COVID And Tauktae Cyclone Relief Works

ಸಭೆಯಲ್ಲಿ ಪ್ರತಿಯೊಬ್ಬ ಅಧಿಕಾರಿಯಿಂದ ವಿವರವಾಗಿ ವರದಿ ಪಡೆದ ಸಂಸದೆ ಶೋಭಾರವರು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಸಭೆ ನಡೆಯುತ್ತಿದ್ದಾಗಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಿ, ಉಡುಪಿ ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್, ರೆಮಿಡಿಸಿವರ್, ಇತರ ಅಗತ್ಯದ ಔಷಧಿಗಳು, ಆಸ್ಪತ್ರೆ ಸಲಕರಣೆಗಳು ಮೊದಲಾದುವುಗಳ ಪೂರೈಕೆ ಬಗ್ಗೆ ಚರ್ಚಿಸಿ, ಶೀಘ್ರ ಪೂರೈಕೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಬಸ್ಸಿನಿಂದ ಕೆಳಗಿಳಿಸಿದ ಉಡುಪಿ ಡಿಸಿ: ವಿದ್ಯಾರ್ಥಿನಿಯ ಆಕ್ರೋಶ; ವಿಡಿಯೋ ವೈರಲ್ಬಸ್ಸಿನಿಂದ ಕೆಳಗಿಳಿಸಿದ ಉಡುಪಿ ಡಿಸಿ: ವಿದ್ಯಾರ್ಥಿನಿಯ ಆಕ್ರೋಶ; ವಿಡಿಯೋ ವೈರಲ್

ಸಭೆಯ ಬಳಿಕ ಮಾತನಾಡಿದ ಸಂಸದರು, "ಒಟ್ಟಾರೆಯಾಗಿ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕೋವಿಡ್‌ನ ಎರಡನೇ ಅಲೆ ಹಿಮ್ಮೆಟ್ಟುತ್ತಿರುವ ಲಕ್ಷಣಗಳು ಗೋಚರಿಸುತ್ತಿದೆ. ಉಡುಪಿ ಜಿಲ್ಲೆಯ ಜನತೆ ಅದರಲ್ಲೂ ಮುಖ್ಯವಾಗಿ ಸೋಂಕಿತರು ಮತ್ತವರ ಕುಟುಂಬಗಳ ಸದಸ್ಯರು ಯಾವುದೇ ರೀತಿಯ ಒತ್ತಡ, ಆತಂಕಕ್ಕೊಳಗಾಗಬಾರದು" ಎಂದು ಮನವಿ ಮಾಡಿದರು.

Recommended Video

3ನೇ ಮಹಾಯುದ್ಧ ತಡೆಯಲು ವಿಶ್ವಸಂಸ್ಥೆ ಎಂಟ್ರಿ, ಇಸ್ರೇಲ್ ನಿರ್ಧಾರವೇನು? | Oneindia Kannada

ಬಳಿಕ ಅವರು ತೌಕ್ತೆ ಚಂಡಮಾರುತದ ಪರಿಣಾಮಗಳನ್ನು ಎದುರಿಸಲಯ ಜಿಲ್ಲೆಯ ಉಡುಪಿ, ಮಲ್ಪೆ, ಕಾಪು, ಪಡುಬಿದ್ರಿ, ಬೇಂಗ್ರೆ, ಕುಂದಾಪುರ, ಬೈಂದೂರು ಮೊದಲಾದ ಪ್ರದೇಶಗಳ ಕರಾವಳಿ ಭಾಗಗಳಲ್ಲಿ ಕೈಗೊಳ್ಳಲಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅವಲೋಕಿಸಿದರು. ಅಗತ್ಯವಿರುವೆಡೆಗಳಲ್ಲಿ ತೀರ ಪ್ರದೇಶಗಳ ನಿವಾಸಿಗಳನ್ನು ಸಾಕಷ್ಟು ಮುಂಚಿತವಾಗಿಯೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದರು.

English summary
Udupi-Chikkamagaluru BJP MP chaired the meeting and inspected COVID and Tauktae cyclone relief works in Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X