ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೋಭಾ ಕರಂದ್ಲಾಜೆ-ಪ್ರಮೋದ್ ಮಧ್ವರಾಜ್ ಜಿದ್ದಾಜಿದ್ದಿಗೆ ವೇದಿಕೆ ಸಿದ್ಧ

|
Google Oneindia Kannada News

Recommended Video

ಚಿಕ್ಕಮಗಳೂರಿನಲ್ಲಿ ರೆಡಿಯಾಯ್ತು ದೇವೇಗೌಡರ ಚಕ್ರವ್ಯೂಹ..! | Oneindia Kannada

ಉಡುಪಿ, ಮಾರ್ಚ್ 22:ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡ ಸಿದ್ಧಗೊಂಡಿದೆ. ಭಾರೀ ವಿರೋಧದ ನಡುವೆ ಸಂಸದೆ ಶೋಭಾ ಕರಂದ್ಲಾಜೆ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ . ಈ ನಡುವೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಬಿಫಾರಂ ನೀಡಿದ್ದು, ಬರುವ ಸೋಮವಾರದಂದು ಮಧ್ವರಾಜ್ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ನಾಮಪತ್ರವನ್ನು ಸಲ್ಲಿಸಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ.

ಉಡುಪಿ-ಚಿಕ್ಕಮಗಳೂರು : ಪ್ರಮೋದ್ ಮಧ್ವರಾಜ್‌ಗೆ ಜೆಡಿಎಸ್ ಬಿಫಾರಂಉಡುಪಿ-ಚಿಕ್ಕಮಗಳೂರು : ಪ್ರಮೋದ್ ಮಧ್ವರಾಜ್‌ಗೆ ಜೆಡಿಎಸ್ ಬಿಫಾರಂ

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಜೆಡಿಎಸ್ ನಿಂದ ಸ್ಪರ್ಧಿಸಲಿದ್ದಾರೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟು ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಮೋದ್ ಮಧ್ವರಾಜ್ ಚುನಾವಣೆಗೆ ಸ್ಪರ್ಧಿಸುವುದೇ ಆದರೆ ಅವರು ಜೆಡಿಎಸ್ ಸದಸ್ಯರಾಗಿ ಸ್ಪರ್ಧಿಸುವರೇ ಅಥವಾ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯುವರೇ ಎಂಬ ಪ್ರಶ್ನೆ ಈಗ ಉದ್ಬವಿಸಿದೆ.

Shobha Karandlaje and Pramodmadwaraj contest from Udupi Loksabha constituency

ಗೋ ಬ್ಯಾಕ್ ಶೋಭಾ ಅಭಿಯಾನ ಸೇರಿದಂತೆ ಜಯಪ್ರಕಾಶ್ ಹೆಗ್ಡೆ ಅವರ ತೀವ್ರ ಪೈಪೋಟಿಯ ನಡುವೆ ಶೋಭಾ ಕರಂದ್ಲಾಜೆ ಉಡುಪಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಸಂಸದೆಯಾಗಿ ಶೋಭಾ ಅವರ ಸಾಧನೆಯ ಬಗ್ಗೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಅಸಮಧಾನ ಭುಗಿಲೆದ್ದಿದ್ದು, ಈ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ 'ಗೋ ಬ್ಯಾಕ್ ಶೋಭಾ' ಅಭಿಯಾನವನ್ನು ಬಿಜೆಪಿ ಕಾರ್ತಯಕರ್ತರು ನಡೆಸಿದ್ದರು.

English summary
After day of suspense MP Shobah karandlaje get the BJP ticket to contest from Udupi chikkamanagluru Loksabha constituency.Mean while former minister Pramodh Madwaraj going to contest from JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X