ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರೂರು ಟೋಲ್ ಅಪಘಾತ: ಚಾಲಕ ಮಾತ್ರ ಹೇಗೆ ಹೊಣೆ?

By ಕೆ.ರಾಧಾಕೃಷ್ಣ ಹೊಳ್ಳ
|
Google Oneindia Kannada News

ಎರಡು ದಿನಗಳ ಹಿಂದೆ ಉತ್ತರ ಕನ್ನಡದಿಂದ ಹೆಚ್ಚಿನ ಚಿಕಿತ್ಸೆಯ ಉದ್ದೇಶದಿಂದ ರೋಗಿಯೊಬ್ಬರನ್ನು ಹೊತ್ತೊಯ್ಯುತ್ತಿದ್ದ ವಾಹನ, ಚಾಲಕನ ನಿಯಂತ್ರಣ ತಪ್ಪಿ, ಉಡುಪಿ ಜಿಲ್ಲೆಯ ಶಿರೂರು ಟೋಲ್ ಪ್ಲಾಜಾದ ಬಳಿ ಭೀಕರ ಅಪಘಾತಕ್ಕೆ ಈಡಾಗಿ 4 ಜನ ದುರ್ಮರಣಕ್ಕೀಡಾಗಿದ್ದರು.

ಟೋಲ್ ನಲ್ಲಿ ಆಂಬ್ಯುಲೆನ್ಸ್ ಹೋಗಬೇಕಾದ ಮಿಡಿಯನ್ ಸುಸಜ್ಜಿತವಾಗಿ ಇರದೇ ಇದ್ದದ್ದು ಒಂದು ಕಡೆ, ಇನ್ನೊಂದು ಕಡೆ ರಸ್ತೆಯಲ್ಲಿ ಹಸು ಮಲಗಿಕೊಂಡಿದ್ದು. ಇದು ಸ್ಪಷ್ಟವಾಗಿ ಪ್ಲಾಜಾದ ಮಾರ್ಗಸೂಚಿ ಉಲ್ಲಂಘನೆ. ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾದಲ್ಲಿ ನಿಯಮಗಳನ್ನು ಕಿಂಚಿತ್ತೂ ಪಾಲಿಸಲಿಲ್ಲ ಎನ್ನುವುದು ಇದರಿಂದ ಖಚಿತವಾಗುತ್ತದೆ.

 ಶಿರೂರು ಆಂಬುಲೆನ್ಸ್ ಅಪಘಾತ: ಆಧಾರ ಸ್ತಂಭವನ್ನೇ ಕಳೆದುಕೊಂಡ 3 ಕುಟುಂಬ,ತಬ್ಬಲಿಗಳಾದ ಮಕ್ಕಳು ಶಿರೂರು ಆಂಬುಲೆನ್ಸ್ ಅಪಘಾತ: ಆಧಾರ ಸ್ತಂಭವನ್ನೇ ಕಳೆದುಕೊಂಡ 3 ಕುಟುಂಬ,ತಬ್ಬಲಿಗಳಾದ ಮಕ್ಕಳು

ಇದು ಮಾತ್ರವಲ್ಲದೇ ರಸ್ತೆಯಲ್ಲಿ ಬುಗುರಿಯಂತೆ ಗಿರಕಿ ಹೊಡೆದ ವಾಹನ ಸಾಮಾನ್ಯವಾದ ಫೋರ್ಸ್ ಸಂಸ್ಥೆಯ ವಾಹನ ಆಗಿರಲಿಲ್ಲ. ಇದು, ಟಾಟಾ ಸಂಸ್ಥೆಯ ಚಿಕ್ಕ ವಾಹನ. ಈ ಘಟನೆಗೆ ಸಂಬಂಧಿಸಿದಂತೆ ಆಂಬ್ಯುಲೆನ್ಸ್ ಚಾಲಕನ ವಿರುದ್ಧ ಕೇಸ್ ದಾಖಲಾಗಿದೆ.

ಆಂಬ್ಯುಲೆನ್ಸ್ ಚಾಲಕ ರೋಶನ್ ವಿರುದ್ಧ ಐಪಿಸಿ ಸೆಕ್ಷನ್ 304(ಎ) ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗಿದ್ದಕ್ಕೆ ಮತ್ತು 279 ( ವೇಗದ ಚಾಲನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 304 (ಎ) ಪ್ರಕಾರ ಒಂದು ವೇಳೆ ಕೋರ್ಟ್ ನಿಂದ ಆರೋಪಿ ತಪಿತಸ್ಥ ಎಂದು ಸಾಬೀತಾದರೆ, ಕನಿಷ್ಠ ಮೂರು ತಿಂಗಳು, ಗರಿಷ್ಠ ಆರು ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Breaking: ಶಿರೂರು ಟೋಲ್ ಗೇಟ್‌ಗೆ ಆಂಬುಲೆನ್ಸ್‌ ಡಿಕ್ಕಿ, ನಾಲ್ವರ ಸಾವು, ನಾಲ್ವರು ಗಂಭೀರBreaking: ಶಿರೂರು ಟೋಲ್ ಗೇಟ್‌ಗೆ ಆಂಬುಲೆನ್ಸ್‌ ಡಿಕ್ಕಿ, ನಾಲ್ವರ ಸಾವು, ನಾಲ್ವರು ಗಂಭೀರ

 ದುರಂತದ ವಿಡಿಯೋ ನೋಡಿದರೆ ಎಲ್ಲರಿಗೂ ಅರಿಯುತ್ತದೆ

ದುರಂತದ ವಿಡಿಯೋ ನೋಡಿದರೆ ಎಲ್ಲರಿಗೂ ಅರಿಯುತ್ತದೆ

ರಸ್ತೆ ನಿರ್ಮಾಣ ಸಂಸ್ಥೆಯಿಂದ ಟೋಲ್ ಪ್ಲಾಜಾದ ನಿರ್ಮಾಣ ಸಂದರ್ಭದಲ್ಲಿ ಕೇಂದ್ರ ರಾಷ್ಟ್ರೀಯ ಹೆದ್ದಾರಿಯ ಮಾರ್ಗಸೂಚಿ ಉಲ್ಲಂಘಿಸಿದೆ ಎಂಬುವುದು ಪ್ರತ್ಯಕ್ಷವಾಗಿ ಇಲ್ಲಿ ಕಾಣುತ್ತದೆ. ರಾಜ್ಯ ಆರೋಗ್ಯ ಇಲಾಖೆಯಿಂದ ಬಳಸಿದ ಆಂಬ್ಯುಲೆನ್ಸ್ ಪೂರ್ಣ ಪ್ರಮಾಣದ ರಸ್ತೆ ಹಿಡಿತವಿಲ್ಲದೇ ಇರುವುದು ದುರಂತದ ವಿಡಿಯೋ ನೋಡಿದರೆ ಎಲ್ಲರಿಗೂ ಅರಿಯುತ್ತದೆ.

 ನಮ್ಮ ರಾಜ್ಯದ ಆಂಬ್ಯುಲೆನ್ಸ್ ಗಳು ಎಷ್ಟು ಸುರಕ್ಷಿತ

ನಮ್ಮ ರಾಜ್ಯದ ಆಂಬ್ಯುಲೆನ್ಸ್ ಗಳು ಎಷ್ಟು ಸುರಕ್ಷಿತ

ನಮ್ಮ ರಾಜ್ಯದ ಆಂಬ್ಯುಲೆನ್ಸ್ ಗಳು ಎಷ್ಟು ಸುರಕ್ಷಿತ ಎನ್ನುವುದು ಈ ಘಟನೆಯಿಂದ ಆಲೋಚಿಸಬೇಕಾದ ವಿಚಾರ. ಟೋಲ್ ಪ್ಲಾಜಾದ ಪಕ್ಕದಲ್ಲಿ ಆಂಬ್ಯುಲೆನ್ಸ್ ಲೈನ್ ಅಗಲವಾಗಿ ಹಾಗೂ ಸರ್ವಿಸ್ ರಸ್ತೆಗೆ ಸೇರುವ ವ್ಯವಸ್ಥೆ ಇಲ್ಲದೆ ಕೃತಕವಾಗಿ ರಸ್ತೆಯನ್ನು ಬ್ಯಾರಿಕೇಡ್‌ ಮೂಲಕ ಮುಚ್ಚಲಾಗಿತ್ತು. ಚಾಲಕ ಟೋಲ್ ಹತ್ತಿರ ಬಂದಾಗ ಬ್ರೇಕ್ ಹಾಕುವಂತಹ ಸನ್ನಿವೇಶಕ್ಕೆ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆ ಹೊಣೆ ಹೊತ್ತಿರುವ ಸಂಸ್ಥೆಯ ಪೂರ್ಣ ಜವಾಬ್ದಾರಿಯಾಗಿರುತ್ತದೆ.

 ರಸ್ತೆ ದುರಂತ ಹಾಗೂ ಸಾವುನೋವಿಗೆ ಚಾಲಕನು ಮಾತ್ರ ಹೊಣೆ ಆಗುವುದಿಲ್ಲ

ರಸ್ತೆ ದುರಂತ ಹಾಗೂ ಸಾವುನೋವಿಗೆ ಚಾಲಕನು ಮಾತ್ರ ಹೊಣೆ ಆಗುವುದಿಲ್ಲ

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಸ್ತೆ ನಿರ್ಮಾಣ ಸಂಸ್ಥೆಯಿಂದ ಟೋಲ್ ನಿರ್ಮಾಣ ನಿರ್ವಹಣೆಯ ಎಡವಟ್ಟು ಮತ್ತು ರಸ್ತೆ ಹಿಡಿತ ಇಲ್ಲದ ವಾಹನವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ರೋಗಿಯನ್ನು ಸ್ಥಳಂತರ ಮಾಡಲು ಅವಕಾಶ ಕೊಟ್ಟು ತಪ್ಪು ಮಾಡಿದೆ. ಇದರಿಂದ ರಸ್ತೆ ದುರಂತ ಹಾಗೂ ಸಾವುನೋವಿಗೆ ಚಾಲಕನು ಮಾತ್ರ ಹೊಣೆ ಆಗುವುದಿಲ್ಲ.

 ಯಾವುದೋ ನೋಂದಾಯಿತ ವಾಹನಗಳು ಆಂಬ್ಯುಲೆನ್ಸ್

ಯಾವುದೋ ನೋಂದಾಯಿತ ವಾಹನಗಳು ಆಂಬ್ಯುಲೆನ್ಸ್

ಹಾಗಾಗಿ, ಇಲ್ಲಿ ಸೆಕ್ಷನ್ 304 (A) ಹೇಗೆ ಅನ್ವಯಿಸುತ್ತದೆ ಎನ್ನುವುದು ಪ್ರಶ್ನೆ. ಈ ಅಪಘಾತ ಹಲವಾರು ಇಲಾಖೆಗಳ ಉದಾಸೀನವಾದ ಕಾರ್ಯನಿರ್ವಹಣೆಯೂ ಆಗಿರುತ್ತದೆ. ಆಂಬ್ಯುಲೆನ್ಸ್ ವಾಹನಕ್ಕೆ ಒಂದು ಸರಿಯಾದ ಕಟ್ಟುನಿಟ್ಟಿನ ಮಾರ್ಗ ಸೂಚಿಯ ಅವಶ್ಯಕತೆ ಇಲ್ಲಿ ಎದ್ದು ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ ಯಾವುದೋ ನೋಂದಾಯಿತ ವಾಹನಗಳು ಆಂಬ್ಯುಲೆನ್ಸ್ ಸೇವೆಯನ್ನು ಕೊಡುತ್ತಿವೆ. ವಾಹನದಲ್ಲಿ ABS ಇತ್ತಾ ಎನ್ನುವ ಸಂಶಯವೂ ಈ ಘಟನೆಯಿಂದ ಕಾಡುತ್ತದೆ.

English summary
Shiruru Toll Tragedy: Is Only Ambulance Driver Responsible. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X