ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಗೂ ನಡೆಯಿತು ಶೀರೂರು ಶ್ರೀಗಳ ಆರಾಧನೆ!

By ಉಡುಪಿ ಪ್ರತಿನಿಧಿ
|
Google Oneindia Kannada News

Recommended Video

Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳ ಆರಾಧನಾ ಮಹೋತ್ಸವ ಕೊನೆಗೂ ನಡೀತು | Oneindia Kannada

ಉಡುಪಿ, ಸೆಪ್ಟೆಂಬರ್.05: ಜುಲೈ 19 ರಂದು ಮೃತಪಟ್ಡಿದ್ದ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳ ಆರಾಧನಾ ಮಹೋತ್ಸವ ಕೊನೆಗೂ ನಡೆಯಿತು. ಹದಿಮೂರನೇ ದಿನ ನಡೆಯಬೇಕಿದ್ದ ಆರಾಧನಾ ಕ್ರಿಯೆ ಹಲವು ಅಡೆತಡೆ ದಾಟಿ ಇಂದು ಸ್ವಾಮೀಜಿ ಸಮಾಧಿ ಸ್ಥಳ ಇರುವ ಹಿರಿಯಡ್ಕ ಸಮೀಪದ ಶೀರೂರು ಮೂಲ ಮಠದಲ್ಲಿ ಸಂಪನ್ನಗೊಂಡಿತು.

ಈ ಮೂಲಕ ಅಭಿಮಾನಿಗಳ, ಭಕ್ತರ ಅಭಿಲಾಷೆಯಂತೆ ಶ್ರೀಗಳಿಗೆ ಮರಣೋತ್ತರದಲ್ಲಿ ಲಭಿಸಬೇಕಾದ ಗೌರವ ಅರ್ಪಿಸಿದಂತಾಗಿದೆ.

ಶೀರೂರು ಶ್ರೀ ಅಗಲಿಕೆ, ಅನುಮಾನ, ನಿಗೂಢತೆ, ತನಿಖೆ... ಟೈಮ್ ಲೈನ್ಶೀರೂರು ಶ್ರೀ ಅಗಲಿಕೆ, ಅನುಮಾನ, ನಿಗೂಢತೆ, ತನಿಖೆ... ಟೈಮ್ ಲೈನ್

ಮುಂಜಾನೆಯಿಂದಲೇ ಈ ಸಂಬಂಧ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಆರಂಭಗೊಂಡವು. ಬೆಳಗ್ಗೆ ಶುದ್ಧ ಪುಣ್ಯಾಹವಾಚನ, ಶೀರೂರು ಮಠದಲ್ಲಿರುವ 500ಕ್ಕೂ ಅಧಿಕ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ, ದೇವರಿಗೆ 108 ಸೀಯಾಳಾಭಿಷೇಕ, ಸ್ವರ್ಣಾ ನದಿಯಲ್ಲಿ ಉಧ್ವಾರ್ಚನೆ ನೆರವೇರಿತು.

Shiruru Shri Lakshmivara Theertha Aradhana Mahotsava was finally held

ಐದು ಕಲಶ ಹೋಮ‌, ಪವಮಾನ ಹೋಮ, ನಚಕ ಪ್ರಧಾನ ಹೋಮ, ವಿರಜಾ ಹೋಮದ ಕಲಶ, ತೀರ್ಥ ಪ್ರಸಾದವನ್ನು ವೃಂದಾವನಕ್ಕೆ ಅರ್ಪಿಸಿ ಪೂಜೆ ನೆರವೇರಿಸಲಾಯಿತು.

ಪ್ರಾಣ ದೇವರು, ಚಿಕ್ಕಪಟ್ಟದ ದೇವರು, ಪಟ್ಟಾಭಿರಾಮಚಂದ್ರ ದೇವರಿಗೆ ಪೂಜೆ ನೆರವೇರಿದ ಬಳಿಕ ಅರ್ಚಕರಿಂದ ವೃಂದಾವನದ ಬಳಿ ಸಮರ್ಪಣೆ ಮಹಾಪೂಜೆ ನಡೆಯಿತು. ಶೀರೂರು ದ್ವಂದ್ವ ಮಠವಾದ ಸೊದೆ ಮಠದ ದಿವಾನರು ಈ ಧಾರ್ಮಿಕ ವಿಧಿಗಳ ಪೌರೋಹಿತ್ಯ ವಹಿಸಿದ್ದರು. ಮಹಿಳೆಯರಿಂದ ಲಕ್ಷ್ಮೀ ಶೋಭಾನೆ ನಡೆಯಿತು.

ವೈದ್ಯರ ಕೈ ಸೇರಿದ ಎಫ್ಎಸ್ಎಲ್ ವರದಿ: ಶೀರೂರು ಶ್ರೀಗಳದ್ದು ಸಹಜ ಸಾವುವೈದ್ಯರ ಕೈ ಸೇರಿದ ಎಫ್ಎಸ್ಎಲ್ ವರದಿ: ಶೀರೂರು ಶ್ರೀಗಳದ್ದು ಸಹಜ ಸಾವು

ಸ್ವಾಮಿಗಳ ವೃಂದಾವನಕ್ಕೆ ಎರಡು ಬಾಳೆ ಗಿಡ, ಮಾವಿನ ತೋರಣ ಕಟ್ಡಿ ಹೂ ಹಾಕಲಾಗಿತ್ತು. ಶ್ರೀಗಳ ಭಾವಚಿತ್ರಕ್ಕೆ ಸಾರ್ವಜನಿಕರು ಗೌರವ ಸಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು. ಕೊನೆಗೆ
ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಭಕ್ತರಿಗೆ ಸಸಿಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆರಾಧನೆ ನಡೆಯಿತು. ಸುಬ್ರಹ್ಮಣ್ಯ ಭಟ್ ಈ ಎಲ್ಲದರ ಉಸ್ತುವಾರಿ ವಹಿಸಿದ್ದರು.

Shiruru Shri Lakshmivara Theertha Aradhana Mahotsava was finally held

ಜುಲೈ.19 ರಂದು ಶೀರೂರು ಶ್ರೀಪಾದರು ಕೀರ್ತಿಶೇಷರಾಗಿದ್ದು, ತನಿಖೆ ಕಾರಣಕ್ಕಾಗಿ ಪೋಲಿಸರು ಉಡುಪಿ ಶೀರೂರು ಮಠ ಬಿಟ್ಟು ಕೊಟ್ಟರೂ ಹಿರಿಯಡ್ಕ ಮೂಲಮಠವನ್ನು ಬಿಟ್ಡುಕೊಟ್ಡಿರಲಿಲ್ಲ. ವಾರದ ಹಿಂದೆ ಒಂದು ಹಂತದ ತನಿಖೆ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಸುಪರ್ದಿಯಿಂದ ಬಿಟ್ಡು ಕೊಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಜುಲೈ 31ಕ್ಕೆ ನಡೆಯಬೇಕಿದ್ದ ಆರಾಧನೆ ಮೂರು ಬಾರಿ ಮುಂದೂಡಲ್ಪಡುತ್ತಾ ಹೋಗಿ 47ನೇ ದಿನ ಆರಾಧನೆ ನಡೆದಿದೆ. ಶೀರೂರು ಮಠದ ಮೂರು ಯತಿಗಳ ಪರಂಪರೆಯಲ್ಲಿ ಶ್ರೀಕೃಷ್ಣಮಠಕ್ಕೆ ಬಹಳಷ್ಟು ಕೊಡುಗೆ ಸಂದಿದೆ ಎಂಬುದನ್ನು ಮರೆಯುವಂತೆಯೇ ಇಲ್ಲ.

ಶ್ರೀಪಾದರ ಆರಾಧನೆ ಅವರ ಸಹಸ್ರ ಸಹಸ್ರ ಅಭಿಮಾನಿಗಳಿಗೆ ಹಾಗೂ ಭಕ್ತ ವೃಂದಕ್ಕೆ ಕೊನೆಗೂ ತೃಪ್ತಿ, ಸಮಾಧಾನ ನೀಡಿದೆ ಎಂದೇ ಹೇಳಬೇಕು.

English summary
Shiruru Shri Lakshmivara Theertha Aradhana Mahotsava was finally held. Aradhana took place at the Shiroor Mutt near Hiriyadka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X