ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮ್ಮ ಜೀವಿತಾವಧಿಯಲ್ಲೇ ಉತ್ತರಾಧಿಕಾರಿ ಆಯ್ಕೆ ಮಾಡಿದ್ದ ಶೀರೂರು ಶ್ರೀ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ.20: ಶೀರೂರು ಶ್ರೀ ಲಕ್ಷ್ಮೀವರ ತೀರ್ಥರ ಶ್ರೀಪಾದರು ಸಾವನ್ನಪ್ಪಿದ ಬಳಿಕ ಉದ್ಭವಿಸಿದ ಪ್ರಮುಖ ಪ್ರಶ್ನೆ ಅಂದರೆ ಅವರ ಉತ್ತರಾಧಿಕಾರಿ ಯಾರು ಎಂಬುದು. ಶೀರೂರು ಶ್ರೀಗಳು ತಮ್ಮ ಜೀವಿತಾವಧಿಯಲ್ಲೇ ಉತ್ತರಾಧಿಕಾರಿ ಆಯ್ಕೆ ಮಾಡಿದ್ದರು ಎಂಬ ಅಂಶ ಇದೀಗ ಬಯಲಾಗತೊಡಗಿದೆ.

ಸೋದೆ ಮಠದ ವಿಶ್ವವಲ್ಲಭ ತೀರ್ಥರ ಸೋದರ ಸಂಬಂಧಿಯೊಬ್ಬರನ್ನು ಶಿಷ್ಯನನ್ನಾಗಿ ಸ್ವೀಕಾರ ಮಾಡಲು ಶೀರೂರು ಶ್ರೀಗಳು ಬಯಸಿದ್ದರು ಎನ್ನಲಾಗುತ್ತಿದೆ. ಕಳೆದ ಜುಲೈ 14ರಂದೇ ಘೋಷಣೆ ಮಾಡಲು ನಿರ್ಧರಿಸಿದ್ದ ಶೀರೂರು ಶ್ರೀ ಕಾರಣಾಂತರಗಳಿಂದ ಉತ್ತರಾಧಿಕಾರಿ ಘೋಷಣೆ ಮುಂದಕ್ಕೆ ಹಾಕಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.

ಮಗನಿಗೆ ಯತಿ ದೀಕ್ಷೆಯಿಂದ ಮಾಲ್ ನಿರ್ಮಾಣ ತನಕ ಶೀರೂರು ಶ್ರೀ ವಿವಾದಗಳುಮಗನಿಗೆ ಯತಿ ದೀಕ್ಷೆಯಿಂದ ಮಾಲ್ ನಿರ್ಮಾಣ ತನಕ ಶೀರೂರು ಶ್ರೀ ವಿವಾದಗಳು

ಇದೀಗ ಅವರ ನಿಧನದ ಬಳಿಕ ಸಂಪ್ರದಾಯದಂತೆ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಶ್ರೀಗಳ ಹೆಗಲಿಗೆ ಈ ಜವಾಬ್ದಾರಿ ಬಿದ್ದಿದೆ. ಮಾಧ್ಯಮದ ಜೊತೆ ಮಾತಾಡಿದ ಸೋದೆ ವಿಶ್ವವಲ್ಲಭ ಶ್ರೀಗಳು, ಶೀರೂರು ಮಠದ ಸೊತ್ತುಗಳ ಸ್ವಾಧೀಕರಣ ಆಗಬೇಕು. ಈಗ ಎಲ್ಲವೂ ಪೊಲೀಸರ ಸುಪರ್ದಿಯಲ್ಲಿದೆ.

Shiruru Shri has already chosen the heritor to the Udupi shiroor mutt

ಉಡುಪಿ ಅಷ್ಟಮಠಗಳ ಭಿನ್ನಾಭಿಪ್ರಾಯ ಮತ್ತೊಂದು ಮಜಲಿಗೆ ಉಡುಪಿ ಅಷ್ಟಮಠಗಳ ಭಿನ್ನಾಭಿಪ್ರಾಯ ಮತ್ತೊಂದು ಮಜಲಿಗೆ

ಪೊಲೀಸರ ಮೂಲಕ ಕಾನೂನು ಪ್ರಕಾರ ಮಾಡುತ್ತಿದ್ದೇವೆ. ಯೋಗ್ಯ ವಟುವನ್ನು ನೋಡಿ ಉತ್ತರಾಧಿಕಾರಿಯನ್ನಾಗಿ ಮಾಡಲಾಗುವುದು. ಹಿರಿಯ ಯತಿಗಳ ಅಭಿಪ್ರಾಯವನ್ನು ಪಡೆದೇ ತೀರ್ಮಾನಿಸುತ್ತೇವೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಮೂಲಗಳ ಪ್ರಕಾರ ಈಗ ಆಷಾಢ ಮಾಸವಾದ ಕಾರಣ ಆಷಾಢ ಕಳೆದ ಬಳಿಕವಷ್ಟೇ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ಪ್ರಾರಂಭವಾಗಲಿದೆ.

English summary
Shiruru Shri has already chosen the heritor to the Udupi shiroor mutt. According to sources swamiji decided to announce heritor on July 14
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X