• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿ: ಶಿರೂರು ಮಠಕ್ಕೆ ತಾತ್ಕಾಲಿಕ ಉಸ್ತುವಾರಿ ನೇಮಕ

|
   ಶಿರೂರು ಮಠಕ್ಕೆ ತಾತ್ಕಾಲಿಕ ಉಸ್ತುವಾರಿ ನೇಮಕ | Oneindia Kannada

   ಉಡುಪಿ, ಜುಲೈ 24:ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಅಸಹಜ ಸಾವಿನಿಂದಾಗಿ ತೆರವಾಗಿರುವ ಶಿರೂರು ಮಠದ ಹೊಣೆಗಾರಿಕೆ ನೋಡಿಕೊಳ್ಳಲು ಉಸ್ತುವಾರಿಯೊಬ್ಬರನ್ನು ನೇಮಿಸಲಾಗಿದೆ.

   ಶಿರೂರು ಮಠದ ಮಾಜಿ ಸಿಬ್ಬಂದಿಯಾದ ಸುಬ್ರಮಣ್ಯ ಭಟ್ ಅವರನ್ನು ಮಠದ ತಾತ್ಕಾಲಿಕ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

   ಶೀರೂರು ಶ್ರೀಗಳ ಅಸಹಜ ಸಾವು: ಉಡುಪಿ ಪೊಲೀಸರು ಮುಂಬೈಗೆ ತೆರಳಿದ್ದೇಕೆ?ಶೀರೂರು ಶ್ರೀಗಳ ಅಸಹಜ ಸಾವು: ಉಡುಪಿ ಪೊಲೀಸರು ಮುಂಬೈಗೆ ತೆರಳಿದ್ದೇಕೆ?

   ಸೋದೆ ಮಠದ ವಿಶ್ವವಲ್ಲಭ ತೀರ್ಥರು ಸುಬ್ರಮಣ್ಯ ಭಟ್ ಅವರನ್ನು ನೇಮಿಸಿದ್ದಾರೆ. ಅವರು ಮಠದದಲ್ಲಿರುವ ಚಿನ್ನಾಭರಣ, ಇತರೆ ಆಸ್ತಿಪಾಸ್ತಿಗಳ ರಕ್ಷಣೆ ಹಾಗೂ ನಿರ್ವಹಣೆಯ ಜವಾಬ್ದಾರಿ ನಿಭಾಯಿಸಲಿದ್ದಾರೆ.

   ಸದ್ಯ, ಶಿರೂರು ಸ್ವಾಮಿಗಳ ಸಾವಿನ ಕುರಿತ ತನಿಖೆ ನಡೆಯುತ್ತಿದ್ದು, ಮಠವು ಪೊಲೀಸರ ವಶದಲ್ಲಿದೆ. ಹೀಗಾಗಿ ತನಿಖೆ ಮುಗಿಯುವವರೆಗೂ ಯಾರೂ ಆಸ್ತಿಗಳನ್ನು ಮುಟ್ಟುವಂತಿಲ್ಲ.

   ಪೇಜಾವರ ಶ್ರೀಗಳಿಗೆ ಮಕ್ಕಳಿದ್ದಾರೆಯೇ? ಆರೋಪಕ್ಕೆ ಉತ್ತರ ಇಲ್ಲಿದೆಪೇಜಾವರ ಶ್ರೀಗಳಿಗೆ ಮಕ್ಕಳಿದ್ದಾರೆಯೇ? ಆರೋಪಕ್ಕೆ ಉತ್ತರ ಇಲ್ಲಿದೆ

   ಕೇಮಾರು ಸ್ವಾಮೀಜಿಗೆ ಬೆದರಿಕೆ

   ಶಿರೂರು ಸ್ವಾಮೀಜಿಗಳ ಅಸಹಜ ಸಾವಿನ ಹಿಂದೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಒತ್ತಾಯಿಸಿರುವ ಕೇಮಾರು ಸಾಂದೀಪಿನಿ ಮಠದ ಈಶ ವಿಠಲದಾಸ ಸ್ವಾಮೀಜಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಗೂ ನಿಂದನೆಗಳು ಎದುರಾಗಿವೆ.

   ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಈಶ ವಿಠಲದಾಸ ಸ್ವಾಮೀಜಿ ಅವರ ಕುರಿತು ನಿಂದನಾತ್ಮಕ ಬರಹಗಳನ್ನು ಪ್ರಕಟಿಸಲಾಗುತ್ತಿದೆ.

   ವಾಟ್ಸಾಪ್‌ನಲ್ಲಿ ಸಹ ಅವರಿಗೆ ಬೆದರಿಕೆ ಸಂದೇಶಗಳು ಬರುತ್ತಿದ್ದು, ಈ ಬಗ್ಗೆ ಪೊಲೀಸರನ್ನು ಸಂಪರ್ಕಿಸಲಾಗಿದೆ. ಶಿರೂರು ಸ್ವಾಮಿಗಳ ಸಾವಿನ ತನಿಖೆಯ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುವ ನಿಂದನೆಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿರುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.

   ಶಿರೂರು ಶ್ರೀ ನಿಧನ: ಆರು ಮಠಗಳ ವಿರುದ್ಧದ ಕೇವಿಯಟ್ ಅನೂರ್ಜಿತಶಿರೂರು ಶ್ರೀ ನಿಧನ: ಆರು ಮಠಗಳ ವಿರುದ್ಧದ ಕೇವಿಯಟ್ ಅನೂರ್ಜಿತ

   ಲಕ್ಷ್ಮೀವರ ತೀರ್ಥರ ದೇಹದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಈಶ ವಿಠಲದಾಸ ಸ್ವಾಮೀಜಿ ಒತ್ತಾಯಿಸಿದ್ದರು.

   ಮಠದಲ್ಲಿ ಎಲ್ಲರೂ ಊಟ ಮಾಡಿದ್ದಾರೆ. ಆದರೆ, ಸ್ವಾಮೀಜಿಗಳಿಗೆ ಮಾತ್ರ ಏಕೆ ಫುಡ್ ಪಾಯ್ಸನ್ ಆಗಿದೆ. ವ್ಯಕ್ತಿಗಿಂತ ಪೀಠ ಮುಖ್ಯ. ಅಷ್ಠಮಠಾಧೀಶರಲ್ಲಿ ಒಬ್ಬರಾಗಿದ್ದ ಶಿರೂರು ಶ್ರೀಗಳಿಗೆ ವಿಷ ನೀಡಿದ್ದು ಯಾರು ಎನ್ನುವುದು ತಿಳಿಯಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದರು.

   English summary
   Vishwa Vallabha Seer of Sode Mutt has appointed Subramanya Bhat as the temporary incharge of Shiruru Mutt.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X