ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಮಠದ ಉತ್ತರಾಧಿಕಾರಿ ವಿವಾದ: ಮಾಧ್ವಪೀಠದ ಇತಿಹಾಸ ಏನು ಹೇಳುತ್ತೆ- ಸರಣಿ 1

|
Google Oneindia Kannada News

ನಾಡಿನ ಮಾಧ್ವಪೀಠದ ಪ್ರಮುಖ ಮಠಗಳಲ್ಲಿ ಉಡುಪಿಯ ಅಷ್ಟಮಠಗಳೂ ಕೂಡಾ ಒಂದು. ದ್ವೈತ ಸಂಪ್ರದಾಯದ ಈ ಎಂಟು ಮಠಗಳನ್ನು ಆಚಾರ್ಯ ಮಧ್ವರು ಸ್ಥಾಪಿಸಿ, ಪ್ರತೀ ಮಠಕ್ಕೆ ಒಬ್ಬೊಬ್ಬರು ಪೀಠಾಧಿಪತಿಗಳನ್ನು ನೇಮಿಸಿದ್ದರು.

ಉಡುಪಿ ಶ್ರೀಕೃಷ್ಣನ ಪೂಜೆಗೆ ಮಧ್ವಾಚಾರ್ಯರು ಪ್ರತೀ ಮಠಕ್ಕೆ ಎರಡು ತಿಂಗಳಿಗೊಮ್ಮೆಇದರ ಜವಾಬ್ದಾರಿಯನ್ನು ನೀಡಿದ್ದರು. ಇದಾದ ನಂತರ ವಾದಿರಾಜ ಗುರುಗಳು ಇದನ್ನು ಎರಡು ವರ್ಷಕ್ಕೆ ಬದಲಾಯಿಸಿದರು. ಪ್ರತೀ ಮಠಕ್ಕೆ ದ್ವಂದ್ವ/ಜೋಡಿ ಮಠವನ್ನು ನೇಮಿಸಲಾಗಿತ್ತು.

 ಉಡುಪಿ ಶಿರೂರು ಮಠಕ್ಕೆ ಬಾಲ ಪೀಠಾಧಿಪತಿ: ಹೈಕೋರ್ಟ್ ಅಸಮಾಧಾನ ಉಡುಪಿ ಶಿರೂರು ಮಠಕ್ಕೆ ಬಾಲ ಪೀಠಾಧಿಪತಿ: ಹೈಕೋರ್ಟ್ ಅಸಮಾಧಾನ

ಮಠದ ಸಂಪ್ರದಾಯದ ಪ್ರಕಾರ, ಎಂಟು ಮಠಾಧೀಶರ ಪೈಕಿ (ಉತ್ತರಾಧಿಕಾರಿ ನೇಮಕವಾಗಿಲ್ಲದಿದ್ದರೆ), ಯಾರಾದರೂ ಕೃಷ್ಣೈಕ್ಯರಾದರೆ, ಆ ಮಠದ ಸಂಪೂರ್ಣ ಜವಾಬ್ದಾರಿ ದ್ವಂದ್ವ ಮಠಕ್ಕೆ ಹೋಗುತ್ತೆ. ಅದರಂತೇ, ಶಿರೂರು ಮಠದ ಲಕ್ಷ್ಮೀವರ ತೀರ್ಥರು ಎರಡು ವರ್ಷದ ಹಿಂದೆ ಹರಿಪಾದ ಸೇರಿದಾಗ ಆ ಮಠದ ಜವಾಬ್ದಾರಿ ಸೋದೆ ಮಠಕ್ಕೆ ಹೋಗಿತ್ತು.

ಸೋದೆ ಮಠದ ಶ್ರೀಗಳು ಅಳೆದು ತೂಗಿ, ಇದೇ ಕಳೆದ ಮೇ ಹದಿನಾಲ್ಕರಂದು ವೇದವರ್ಥನ ತೀರ್ಥರನ್ನು ಶಿರೂರು ಮಠದ ನೂತನ ಪೀಠಾಧಿಪತಿಯಾಗಿ ನೇಮಿಸಿದ್ದರು. ನೂತನ ಶ್ರೀಗಳು ಅಪ್ರಾಪ್ತರು ಎನ್ನುವ ಕಾರಣಕ್ಕಾಗಿ ಈ ವಿಚಾರ ಈಗ ಹೈಕೋರ್ಟ್ ಮೆಟ್ಟಲೇರಿದೆ. ಹಾಗಾದರೆ, ಉಡುಪಿಯ ಅಷ್ಟಮಠದ ಇದುವರೆಗಿನ ಸಂಪ್ರದಾಯದಲ್ಲಿ ಅಪ್ರಾಪ್ತರನ್ನು ನೇಮಿಸಿದ ಉದಾಹರಣೆ ಇಲ್ಲವಾ?

ಶಿರೂರು ಮಠದಲ್ಲಿ ಪಟ್ಟಾಭಿಷೇಕ; ಧಾರ್ಮಿಕ ಕಾರ್ಯಕ್ರಮ ಆರಂಭ ಶಿರೂರು ಮಠದಲ್ಲಿ ಪಟ್ಟಾಭಿಷೇಕ; ಧಾರ್ಮಿಕ ಕಾರ್ಯಕ್ರಮ ಆರಂಭ

 ಧರ್ಮಸ್ಥಳದ ನಿಡ್ಲೆ ಮೂಲದ, ತುಳು ಶಿವಳ್ಳಿ ಮಾಧ್ವ ಅನಿರುದ್ಧ ಸರಳತ್ತಾಯ

ಧರ್ಮಸ್ಥಳದ ನಿಡ್ಲೆ ಮೂಲದ, ತುಳು ಶಿವಳ್ಳಿ ಮಾಧ್ವ ಅನಿರುದ್ಧ ಸರಳತ್ತಾಯ

ದಕ್ಷಿಣ ಕನ್ನಡ ಜಿಲ್ಲೆ, ಧರ್ಮಸ್ಥಳದ ನಿಡ್ಲೆ ಮೂಲದ, ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ವಟು ಅನಿರುದ್ಧ ಸರಳತ್ತಾಯ ಅವರನ್ನು ಸೋದೆ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಶಿರೂರು ಮಠಕ್ಕೆ ನೂತನ ಪೀಠಾಧಿಕಾರಿಯಾಗಿ ಘೋಷಣೆ ಮಾಡಿದ್ದರು. ಹದಿನಾರು ವರ್ಷದ ವಟು ಅನಿರುದ್ಧ್ ಸರಳತ್ತಾಯ ಅಪ್ರಾಪ್ತ ವಯಸ್ಕ, ಬಲವಂತದಿಂದ ಪೀಠಾಧಿಪತಿ ಮಾಡಲಾಗಿದೆ ಎಂದು ಕೆಲವರು ಹೈಕೋರ್ಟ್ ಮೆಟ್ಟಲೇರಿದ್ದಾರೆ.

 ಶಿರೂರು ಮಠದ ಹಿಂದಿನ ಶ್ರೀಗಳಾದ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರ

ಶಿರೂರು ಮಠದ ಹಿಂದಿನ ಶ್ರೀಗಳಾದ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರ

800 ವರ್ಷಗಳ ಇತಿಹಾಸವಿರುವ ಉಡುಪಿ ಅಷ್ಟಮಠಗಳಲ್ಲೊಂದಾದ ಶಿರೂರು ಮಠಕ್ಕೆ ನೂತನ ಶ್ರೀಗಳ ನೇಮಕ ವಿಚಾರ, ಹೈಕೋರ್ಟ್ ನಲ್ಲಿ ಮತ್ತೆ ಜೂನ್ ಎರಡಕ್ಕೆ ವಿಚಾರಣೆಗೆ ಬರಲಿದೆ. ಶಿರೂರು ಮಠದ ಹಿಂದಿನ ಶ್ರೀಗಳಾದ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರ ಮತ್ತಿಬ್ಬರು ಮಠಕ್ಕೆ ಉತ್ತರಾಧಿಕಾರಿ ನೇಮಕ ಕಾನೂನುಬಾಹಿರ, ಅಪ್ರಾಪ್ತ ವಯಸ್ಕ ಎಂದು ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದರು.

 ಬಾಲ ಸನ್ಯಾಸಿ ನೇಮಕವಾದರೂ ಯಾರೂ ಈ ಬಗ್ಗೆ ತಕರಾರು ಎತ್ತಿದ ಉದಾಹರಣೆಗಳು ಕಮ್ಮಿ

ಬಾಲ ಸನ್ಯಾಸಿ ನೇಮಕವಾದರೂ ಯಾರೂ ಈ ಬಗ್ಗೆ ತಕರಾರು ಎತ್ತಿದ ಉದಾಹರಣೆಗಳು ಕಮ್ಮಿ

ನಾಡಲ್ಲಿ ಮಾಧ್ವಪೀಠದ ಹಲವು ಮಠಗಳಿದ್ದರೂ, ಉಡುಪಿಯ ಮಠಗಳು ತಮ್ಮದೇ ಸಂಪ್ರದಾಯಗಳನ್ನು ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬರುತ್ತಿವೆ. ಈ ಮಠಗಳು ಮತ್ತು ಉಡುಪಿ ಕೃಷ್ಣ ದೇವಾಲಯ ಮುಜರಾಯಿ ವ್ಯಾಪ್ತಿಗೆ ಬರದಿರುವ ಹಿನ್ನಲೆಯಲ್ಲಿ ಬಾಲ ಸನ್ಯಾಸಿ ನೇಮಕವಾದರೂ ಯಾರೂ ಈ ಬಗ್ಗೆ ತಕರಾರು ಎತ್ತಿದ ಉದಾಹರಣೆಗಳು ಕಮ್ಮಿ. ಯಾಕೆಂದರೆ, ಸನ್ಯಾಸತ್ವ ಸ್ವೀಕರಿಸುವ ಮುನ್ನ ಅವರ ಮತ್ತು ಅವರ ಕುಟುಂಬದ ಅನುಮತಿಯನ್ನು ಪಡೆದೇ ಸನ್ಯಾಸತ್ವ ಪ್ರಕ್ರಿಯೆಗಳು ನಡೆಯುವುದು.

Recommended Video

AK Ashraf ಕನ್ನಡಾಭಿಮಾನ ಮೆರೆದ ಕೇರಳದ ಶಾಸಕ | Oneindia Kannada
 ಉತ್ತರಾಧಿಕಾರಿಗಳು ಮಠದ ಜೊತೆ ನಿಕಟ ಸಂಬಂಧ ಇಟ್ಟುಕೊಂಡುವರು

ಉತ್ತರಾಧಿಕಾರಿಗಳು ಮಠದ ಜೊತೆ ನಿಕಟ ಸಂಬಂಧ ಇಟ್ಟುಕೊಂಡುವರು

ಜೊತೆಗೆ, ಇದುವರೆಗೆ ನೇಮಕವಾದ ಉತ್ತರಾಧಿಕಾರಿಗಳು ಮಠದ ಜೊತೆ ನಿಕಟ ಸಂಬಂಧ ಇಟ್ಟುಕೊಂಡುವರು. ಅಥವಾ ಮಠದ ಶೈಕ್ಷಣಿಕ ಸಂಸ್ಥೆ/ಗುರುಕುಲದಲ್ಲಿ ವಿದ್ಯಾರ್ಜನೆ ಮಾಡಿದವರನ್ನೇ ನೇಮಕ ಮಾಡುತ್ತಿರುವುದರಿಂದ ಎಲ್ಲೂ ಅಪ್ರಾಪ್ತ ವಯಸ್ಕರು ಎನ್ನುವ ಗೊಂದಲ ಎದುರಾಗಿರಲಿಲ್ಲ. ಜೊತೆಗೆ, ಅಪ್ರಾಪ್ತರು ಉತ್ತರಾಧಿಕಾರಿಯಾಗಿ ನೇಮಕವಾಗಿರುವುದು ಮಠದ ಇತಿಹಾಸದಲ್ಲಿ ಇದೇ ಮೊದಲಲ್ಲ. ಹಾಗಾದರೆ, ಶಿರೂರು ಮಠದ ಉತ್ತರಾಧಿಕಾರಿ ವಿವಾದ ಯಾಕೆ ವಿವಾದವಾಗಿ ಕೂತಿದೆ? ಮುಂದಿನ ಸರಣಿಯಲ್ಲಿ ನಿರೀಕ್ಷಿಸಿ..

English summary
Udupi Shiroor mutt successor controversary : What the History of Madhva Peetha Says - Series 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X