ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯ ಶಂಕರಪುರ ಮಲ್ಲಿಗೆ ಕೊಳ್ಳುವವರಿಗೆ ಇದು ಸುಭಿಕ್ಷಕಾಲ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಉಡುಪಿ, ಜನವರಿ 27: ಉಡುಪಿ ಸಮೀಪದ "ಶಂಕರ ಪುರ" ಮಲ್ಲಿಗೆ ಕೃಷಿಗೆ ಬಾರೀ ಹೆಸರು. ಶಂಕರಪುರ ಮಲ್ಲಿಗೆಗೆ ಚಳಿ ಇದ್ದಾಗ ಅತ್ಯಧಿಕವಿದ್ದ ದರ ಕಳೆದೆರಡು ದಿನಗಳಿಂದ ಸೆಖೆ ಆರಂಭವಾದ ಹಿನ್ನಲೆಯಲ್ಲಿ ಶೇ. 121ರಷ್ಟು ಕುಸಿದಿದೆ. ಹೀಗಾಗಿ ಮಲ್ಲಿಗೆಯನ್ನು ಕೊಳ್ಳುವವರಿಗೆ ಸುಭಿಕ್ಷ ಕಾಲದಂತೆ ಪರಿಣಮಿಸಿದೆ.

ನವೆಂಬರ್ ಅಂತ್ಯಕ್ಕೆ ಏರಿಕೆಯಾದ ಶಂಕರಪುರ ಮಲ್ಲಿಗೆ ದರ (ಪ್ರತಿ ಅಟ್ಟೆಗೆ) 820, 720, 630 ರೂ. ಆಸುಪಾಸಿನಿಂದ ಕೆಳಗಿಳಿದಿರಲಿಲ್ಲ. ಚಳಿ ಹೆಚ್ಚಿದಾಗ ಶುಭಸಮಾರಂಭಗಳೂ ಹೆಚ್ಚಿದ್ದವು ಆದ್ದರಿಂದ ಮಲ್ಲಿಗೆಗೆ ಬೇಡಿಕೆ ಇತ್ತು. ಹಾಗಾಗಿ ದರದಲ್ಲಿ ಏರಿಕೆಯಾಗಿತ್ತು . ಆದರೆ ಜನವರಿ 21 ರಿಂದ ಚಳಿ ಕಡಿಮೆಯಾಗಿದ್ದು ಸೆಖೆ ಶುರುವಾಗಿದೆ. ಶುಭ ಸಮಾರಂಭಗಳೂ ವಿರಳವಾಗಿವೆ.[ಉಡುಪಿ ಮಾರುಕಟ್ಟೆಯಲ್ಲಿ ಕುಸಿದ ಶಂಕರಪುರ ಮಲ್ಲಿಗೆ ದರ]

Shankarapura jasmine price goes down in udupi

ಶಂಕರಪುರ ಕಟ್ಟೆಯಲ್ಲಿ ನಿತ್ಯ ಬೆಳಿಗ್ಗೆ ೧೧ಕ್ಕೆ ದರ ಹರಾಜು ಹಾಕಿ ಮಲ್ಲಿಗೆ ಹೂ ಅಟ್ಟಿಯನ್ನು ಅಂಗಡಿಗಳಿಗೆ ಪೂರೈಸಲಾಗುತ್ತದೆ. ಆದರೆ ಇದೀಗ ಮಲ್ಲಿಗೆ ದರ ಕುಸಿತವಾಗಿದ್ದು , ಮಲ್ಲಿಗೆ ವ್ಯಾಪಾರಿಗಳು ಕಷ್ಟಕ್ಕೆ ಸಿಲುಕಿದ್ದಾರೆ. ಇದಲ್ಲದೆ ಚಳಿಯಿಂದಾಗಿ ಕಾಕಡ, ಗೊಂಡೆ, ಸೇವಂತಿಗೆ ಸಹಿತ ಹೂಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದು ದರ ಶೇ. ೫೦ ರಿಂದ ೮೦ರಷ್ಟು ಕುಸಿತ ಕಂಡಿದೆ.

Shankarapura jasmine price goes down in udupi

ಶಂಕರಪುರ ಮಲ್ಲಿಗೆ ದರ ವಿವರ:
ಜನವರಿ 20-820 ರು
ಜನವರಿ 21-820 ರು
ಜನವರಿ 22-820 ರು
ಜನವರಿ 23-370 ರು
ಜನವರಿ 24-370 ರು

English summary
The changing atmosphere has resulted in sudden price down of shankaraura jasmine flowers in udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X