ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದುವರೆದ ನಾಪತ್ತೆಯಾದ ಮೀನುಗಾರರ ಪತ್ತೆ ಕಾರ್ಯ:ಇನ್ನೆರೆಡು ದಿನಗಳಲ್ಲಿ ಸ್ಪಷ್ಟ ಚಿತ್ರಣ

|
Google Oneindia Kannada News

ಉಡುಪಿ, ಜನವರಿ 25:ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮಲ್ಪೆಯ 7 ಮಂದಿ ಮೀನುಗಾರರರು ಹಾಗೂ ಅವರು ತೆರಳಿದ್ದ ಸುವರ್ಣ ತ್ರಿಭುಜ ಹೆಸರಿನ ಬೋಟ್ ಕಣ್ಮರೆಯಾಗಿ ಸರಿಸುಮಾರು 41 ದಿನ ಕಳೆದಿದೆ. ಆದರೆ ನಾಪತ್ತೆಯಾಗಿರುವ ಮೀನುಗಾರರ ಬಗ್ಗೆ ಅಥವಾ ಕಣ್ಮರೆಯಾಗಿರುವ ಬೋಟ್ ಬಗ್ಗೆ ಚಿಕ್ಕ ಸುಳಿವೂ ಪತ್ತೆಯಾಗಿಲ್ಲ.

ಈ ನಡುವೆ ಮೀನುಗಾರರ ಶೋಧಕಾರ್ಯ ಮುಂದುವರೆದಿದೆ. ಸೋನಾರ್‌ ತಂತ್ರಜ್ಞಾನದ ಮೂಲಕ ಶೋಧ ನಡೆಸುತ್ತಿರುವ ನೌಕಾಪಡೆಯ ಹಡಗಿಗೆ ಸುಮಾರು 22 ಮೀಟರ್‌ ಉದ್ದದ ವಸ್ತು ಇರುವುದು ಕಂಡು ಬಂದಿತ್ತು. ಆದರೆ ಅದು ಕಣ್ಮರೆಯಾಗಿರುವ ಸುವರ್ಣ ತ್ರಿಭುಜ ಬೋಟ್ ನದ್ದಲ್ಲ ಎಂದು ಮೂಲಗಳು ತಿಳಿಸಿವೆ.

ದಟ್ಟವಾಗುತ್ತಿವೆ ಅನುಮಾನಗಳು:ನಾಪತ್ತೆಯಾದ ಮೀನುಗಾರರು ಅಪಾಯಕ್ಕೆ ಸಿಲುಕಿರಬಹುದೇ?ದಟ್ಟವಾಗುತ್ತಿವೆ ಅನುಮಾನಗಳು:ನಾಪತ್ತೆಯಾದ ಮೀನುಗಾರರು ಅಪಾಯಕ್ಕೆ ಸಿಲುಕಿರಬಹುದೇ?

ಆ ವಸ್ತುವಿನ ಪೂರ್ಣ ಮಾಹಿತಿಗೆ ಸೋನಾರ್‌ನಿಂದ ಸಾಧ್ಯವಾಗದ ಕಾರಣ ಹೆಚ್ಚಿನ ಕಾರ್ಯಾಚರಣೆಗೆ ನೌಕಾಪಡೆಯ ಮತ್ತೊಂದು ಹಡಗನ್ನು ತರಿಸಲಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ. ಎರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಲಾಗಿದೆ.

ಈ ನಡುವೆ ನಾಪತ್ತೆಯಾಗಿರುವ 7 ಮೀನುಗಾರರಿದ್ದ ದೋಣಿ ಅವಘಡಕ್ಕೀಡಾದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ನೌಕಾಪಡೆಯ ಹಡಗೊಂದಕ್ಕೆ ಸುವರ್ಣ ತ್ರಿಭುಜ ಬೋಟ್ ಸಹಿತ ಇತರ ಬೋಟ್ ಗಳು ಡಿಕ್ಕಿಯಾಗಿರಬಹುದು ಎಂಬ ಸಾಧ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ.

 ಹಾನಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ

ಹಾನಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ

ನೌಕಾಪಡೆಯ ಹಡಗೊಂದರ ತಳ ಭಾಗದಲ್ಲಿ ಹಾನಿಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ನೌಕಾಪಡೆಯ ಹಡಗಿಗೆ ಆದ ಹಾನಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಾನಿಗೊಂಡಿರುವ ಹಡಗು ಡಿ 15 ರಂದು ಮುಂಜಾನೆ 2 ರಿಂದ 6 ಗಂಟೆ ಸುಮಾರಿಗೆ ಮಾಲ್ವಾನ್ ಸಮುದ್ರ ಪ್ರದೇಶದಲ್ಲಿ ಸಂಚರಿಸಿತ್ತು ಎಂದು ಹೇಳಲಾಗಿದೆ. ಡಿ 15 ರಿಂದಲೇ ಮಲ್ಪೆಯ 7 ಮಂದಿ ಮೀನುಗಾರರ ಮಾಲ್ವಾನ್ ಸಮುದ್ರ ಪ್ರದೇಶದಿಂದ ನಾಪತ್ತೆಯಾಗಿದ್ದು.

 ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು? ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?

ಅಲ್ಲಿ ಶೋಧ ನಿರತವಾಗಿವೆ

ಅಲ್ಲಿ ಶೋಧ ನಿರತವಾಗಿವೆ

ಗೋವಾದ ಪಣಜಿ ಬೈತುಲ್ ಸಮೀಪ ಸಮುದ್ರದಲ್ಲಿ ಡೀಸೆಲ್ ಅಂಶ ಪತ್ತೆಯಾಗಿದೆ ಎಂಬ ವದಂತಿಯ ಬೆನ್ನುಹತ್ತಿ ಹೋದ ಉಡುಪಿ ಪೊಲೀಸರ ತಂಡ ಮತ್ತು ಕೋಸ್ಟ್ ಗಾರ್ಡ್‌ ಯಾವುದೇ ಕುರುಹುಗಳು ಸಿಗದೆ ವಾಪಸಾಗಿದೆಯಾದರೂ ಮಲ್ಪೆಯ 8 ಆಳಸಮುದ್ರ ಟ್ರಾಲ್ ಬೋಟ್‌ಗಳಿಂದ ಅಲ್ಲಿ ಶೋಧ ನಿರತವಾಗಿವೆ.

 ನಾಪತ್ತೆಯಾದ ಮೀನುಗಾರರ ಶೋಧಕಾರ್ಯಕ್ಕೆ ಇಳಿದ ಭಾರತೀಯ ನೌಕಾಪಡೆಯ ಹಡಗು ನಾಪತ್ತೆಯಾದ ಮೀನುಗಾರರ ಶೋಧಕಾರ್ಯಕ್ಕೆ ಇಳಿದ ಭಾರತೀಯ ನೌಕಾಪಡೆಯ ಹಡಗು

ಇಂತಹ ಘಟನೆ ಸಂಭವಿಸಿಲ್ಲ

ಇಂತಹ ಘಟನೆ ಸಂಭವಿಸಿಲ್ಲ

ಸುವರ್ಣ ತ್ರಿಭುಜ ಬೋಟ್ ದುರಂತಕ್ಕೆ ಈಡಾಗಿ ಮುಳುಗಿದೆ ಎಂಬುದನ್ನು ಒಪ್ಪಲು ಮೀನುಗಾರರು ಸಿದ್ಧರಿಲ್ಲ. ದಶಕಗಳಿಂದ ಆಳಸಮುದ್ರ ಮೀನುಗಾರಿಕೆಯಲ್ಲಿ ಇಂತಹ ಘಟನೆ ಸಂಭವಿಸಿಲ್ಲ. ಬೋಟ್ ದುರಂತ ಸಂಭವಿಸಿದರೂ ತತ್‌ಕ್ಷಣದಲ್ಲಿ ಮುಳುಗಡೆಯಾಗುವುದಿಲ್ಲ.

ಬೋಟ್ ಮುಳುಗಿರುವ ಸಾಧ್ಯತೆ ಇಲ್ಲ

ಬೋಟ್ ಮುಳುಗಿರುವ ಸಾಧ್ಯತೆ ಇಲ್ಲ

ಒಂದು ವೇಳೆ ಬೋಟ್ ಮುಳುಗಿದರೂ ನಿಧಾನವಾಗಿ ನೀರಿನಡಿ ಹೋಗುತ್ತದೆ. ರಕ್ಷಣೆಗೆ ಬೇಕಾದ ಉಪಕರಣಗಳು ಬೋಟ್‌ನಲ್ಲಿ ಇರುತ್ತವೆ. ಆದ್ದರಿಂದ ಮುಳುಗಿರುವ ಸಾಧ್ಯತೆ ಇಲ್ಲ ಎಂಬುದು ಮೀನುಗಾರರ ದೃಢವಾದ ನಂಬಿಕೆ.

English summary
State police, coastguard team search operation to trace missing boat Suvarna Thribhuja . All possible efforts are on to trace missing boat and 7 Fisherman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X