ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಪೆಯಲ್ಲಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಲು ಕಾರಣವೇನು?

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 04: ಕಾಪು, ಪಡುಬಿದ್ರಿ, ಮಲ್ಪೆ ಕಡಲ ತೀರ ಭಾಗದಲ್ಲಿ ಸಮುದ್ರದ ನೀರು ಕಳೆದ ಮೂರ್ನಾಲ್ಕು ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ್ದು, ಮೀನುಗಾರರಲ್ಲಿ ಆತಂಕ ಮೂಡಿಸಿದೆ. ಉಚ್ಚಿಲ, ಎರ್ಮಾಳು, ಪಡುಬಿದ್ರಿ ಪರಿಸರದಲ್ಲೂ ಸಮುದ್ರದ ನೀರುಹಸಿರು ಬಣ್ಣಕ್ಕೆ ತಿರುಗಿದ್ದು, ದುರ್ವಾಸನೆ ಬರುತ್ತಿದೆ.

ವಾರಾಂತ್ಯದ ವಿಶೇಷ ಲೇಖನ: ಮಾಯವಾದ ಸಮುದ್ರದಲ್ಲೀಗ ಹಡಗುಗಳ ಶವಯಾತ್ರೆ!!ವಾರಾಂತ್ಯದ ವಿಶೇಷ ಲೇಖನ: ಮಾಯವಾದ ಸಮುದ್ರದಲ್ಲೀಗ ಹಡಗುಗಳ ಶವಯಾತ್ರೆ!!

Sea water in Malpe turned green colour

ಇದು ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಗಿದ್ದರೆ, ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ. ಸಮುದ್ರದ ನೀರು ಪಾಚಿಗಟ್ಟಿದ ಹಸಿರು ಬಣ್ಣದಂತೆ ಇರುವುದರಿಂದ ಕಡಲ ಕಿನಾರೆಗೆ ಬರುವ ಪ್ರವಾಸಿಗರು ನೀರಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಸಮುದ್ರ ನೀರು ಹಸಿರಾಗಿರುವ ವೀಡಿಯೋ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ.

 ವಿಸ್ಮಯ ಕಡಲು : ನೀಲಿ ಬಣ್ಣ ತುಂಬಿಕೊಂಡು ಹೊಳೆಯುತ್ತಿರಲು ಕಾರಣವೇನು? ವಿಸ್ಮಯ ಕಡಲು : ನೀಲಿ ಬಣ್ಣ ತುಂಬಿಕೊಂಡು ಹೊಳೆಯುತ್ತಿರಲು ಕಾರಣವೇನು?

Sea water in Malpe turned green colour

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಿಸರ ತಜ್ಞ ಎನ್ ಎ ಮಧ್ಯಸ್ಥ ಅವರು ,ಇದೊಂದು ಅಪರೂಪದ ಪ್ರಕ್ರಿಯೆ. ಇದರಿಂದ ಮೀನುಗಳಿಗೂ ಹಾನಿ ಇದೆ. ಜೊತೆಗೆ ಜಲಚರಗಳೂ ಕೂಡ ಈ ವಿಷದಿಂದ ಹಾನಿಗೊಳಗಾಗುತ್ತವೆ. ಮನುಷ್ಯರಿಗೂ ಇದರಿಂದ ಹೊರಬರುವ ರಾಸಾಯನಿಕ ಹಾನಿಕಾರಕ ಎಂದಿದ್ದಾರೆ.

English summary
Sea water in Malpe, Kapu, Padubidri turned green colour. It is interesting to tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X