ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಸಂರಕ್ಷಣೆಯ ಸಂಕಲ್ಪ ಮಾಡಿದ ಉಡುಪಿಯ ಜೋಸೆಫ್

ಪ್ರಕೃತಿಯ ಬಗ್ಗೆ ತುಂಬು ಕಾಳಜಿ ಹೊಂದಿದ ಉಡುಪಿಯ ಕಲ್ಯಾಣಪುರದ ಜೋಸೆಫ್ ಕಳೆದ 5 ವರುಷಗಳಿಂದ ಪರಿಸರ ಜಾಗೃತಿಯ ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.

By ಐಸಾಕ್ ರಿಚರ್ಡ್ಸ್
|
Google Oneindia Kannada News

ಉಡುಪಿ, ಮಾರ್ಚ್ 30: 'ಭೂಮಿಯ ಒಡಲೊಳಗೆ ಅಪರಿಮಿತ ದಾಹ, ಒಂದು ಹನಿ ನೀರಿಲ್ಲ ತಂಪಾಗಲು' ಎಂಬ ಭೂಮಾತೆಯ ಅಳಲಿಗೆ ಸ್ಪಂದಿಸುವ ಪಣತೊಟ್ಟವರು ಜೋಸೆಫ್ ಜಿ.ಎಂ.ರೆಬೆಲ್ಲೊ.

ಪ್ರಕೃತಿಯ ಬಗ್ಗೆ ತುಂಬು ಕಾಳಜಿ ಹೊಂದಿದ ಉಡುಪಿಯ ಕಲ್ಯಾಣಪುರದ ಜೋಸೆಫ್ ಕಳೆದ 5 ವರುಷಗಳಿಂದ ಪರಿಸರ ಜಾಗೃತಿಯ ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಇತರೆಡೆ ಕೂಡಾ ವನಮಹೋತ್ಸವ ಕಾರ್ಯಕ್ರಮ, ಜಲ ಸಂರಕ್ಷಣಾ ಕಾರ್ಯಕ್ರಮ, ಘನ ತ್ಯಾಜ್ಯ, ದ್ರವ ತ್ಯಾಜ್ಯ ಮತ್ತು ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯದ ವಿಲೆವಾರಿ ಕುರಿತಂತೆ ಹಲವಾರು ವಿನೂತನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.[ತಮಿಳುನಾಡು ರೈತರ ಜಂತರ್ ಮಂತರ್ ಪ್ರತಿಭಟನೆಗೆ ಪ್ರಕಾಶ್ ರೈ ಬೆಂಬಲ]

ಜಲಸಂರಕ್ಷಣೆಯತ್ತ ಹೆಜ್ಜೆ

ಜಲಸಂರಕ್ಷಣೆಯತ್ತ ಹೆಜ್ಜೆ

ತೆರೆದ ಬಾವಿಗೆ, ನಿರ್ಜೀವ ಹಾಗೂ ನೀರಿರುವ ಕೊಳವೆ ಬಾವಿಗೆ ಮಳೆ ನೀರನ್ನು ಇಳಿಸುವ ವಿಧಾನಗಳನ್ನು ತಿಳಿಸುತ್ತಿದ್ದಾರೆ. ಜಲ ಜಾಗೃತಿ ಎಂಬ ಶೀರ್ಷಿಕೆಯಡಿಯಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 150ಕ್ಕೂ ಹೆಚ್ಚು ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡಿದ್ದಾರೆ.[ಬೇಸಿಗೆ 2017: ದಾವಣಗೆರೆ 'ಜಲ ಸಿರಿ' ಕಾಣದ ಶ್ರೀಮಂತ ಜಿಲ್ಲೆ]

ಪಿಪಿಟಿ ಮೂಲಕ ಜಾಗೃತಿ

ಪಿಪಿಟಿ ಮೂಲಕ ಜಾಗೃತಿ

ಶಾಲಾ ಮತ್ತು ಕಾಲೇಜು ಪದವಿ, ಎಮ್.ಎಸ್.ಡಬ್ಲ್ಯೂ, ನರ್ಸಿಂಗ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ, ಸ್ವಸಹಾಯ ಸಂಘಗಳಿಗೆ, ಗ್ರಾಮ ಪಂಚಾಯತ್ ಗಳಿಗೆ, ಪೊಲೀಸ್ ಸಿಬ್ಬಂದಿಗಳಿಗೆ, ವಸತಿ ಸಮುಚ್ಛಯ ಇನ್ನಿತರ ಕಡೆಗಳಲ್ಲಿ ಪವರ್ ಪಾಯಿಂಟ್ ಪ್ರಸಂಟೇಶನ್ ಮೂಲಕ ಮಳೆ ನೀರಿನ ಸಂರಕ್ಷಣೆಯ ಕುರಿತು ಅರಿವು ಮೂಡಿಸುತ್ತಿದ್ದಾರೆ.[ಬರ ಬಂದು ಬಾಗಿಲಲಿ ನಿಂತಿಹುದು ಬದುಕು ಹೇಗೆ ಪ್ರಭುವೆ?]

ಮಾರ್ಗದರ್ಶಕರೂ ಹೌದು

ಮಾರ್ಗದರ್ಶಕರೂ ಹೌದು

ತೆರೆದ ಬಾವಿ ಮತ್ತು ಕೊಳವೆ ಬಾವಿಗೆ ಮಳೆನೀರನ್ನು ಇಂಗಿಸುವ ಘಟಕಗಳನ್ನು ಇವರು ಖುದ್ದಾಗಿ ನಿರ್ಮಿಸಿದ್ದಾರೆ ಹಾಗೂ ಹೊಸದಾಗಿ ನಿರ್ಮಿಸುವವರಿಗೆ ಮಾರ್ಗದರ್ಶನ ಮಾಡುತ್ತಾರೆ. ಹಾಗೆಯೆ ಭೂಮಿಯ ದಾಹವನ್ನು ನೀಗಿಸುವ ಸಲುವಾಗಿ ಭೂಗರ್ಭ ಶಾಸ್ತ್ರಜ್ಞ , ಜಲ ತಜ್ಞರೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಹೊಸದಾಗಿ ಎದುರಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸುತ್ತಾರೆ.[ಅಗ್ನಿ ಅನಾಹುತ ಮತ್ತು ಬರ: ಕಂಗಾಲಾದ ಬಂಡೀಪುರದ ಪ್ರಾಣಿಗಳು]

ಪೋಲಾಗಬಾರದು ಜೀವಜಲ

ಪೋಲಾಗಬಾರದು ಜೀವಜಲ

ನಮ್ಮ ಹಿತ್ತಲಲ್ಲಿ, ಮನೆಯ ಛಾವಣಿಯಲ್ಲಿ ಮಳೆಗಾಲದಲ್ಲಿ ಬಿದ್ದ ಮಳೆನೀರು, ನಮ್ಮ ಹಿತ್ತಲ ಆವರಣದಿಂದ ಚರಂಡಿಗೆ, ನಂತರ ತೋಡು, ಹಳ್ಳ, ನದಿಯ ಮೂಲಕ ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ ಈ ರೀತಿಯ ನೀರು ಪೋಲಾಗುವುದನ್ನು ತಡೆಯಬೇಕಾದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಳಕಳಿಯಲ್ಲಿ ಹೇಳುತ್ತಾರೆ ಜೋಸೆಫ್.[ಪ್ರತಾಪ್ ವೃಥಾ ಕಾಲಹರಣ ಮಾಡುತ್ತಿದ್ದಾರೆ : ಬ್ರಿಜೇಶ್ ಕಾಳಪ್ಪ]

ನಿರ್ಲಕ್ಷ್ಯಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ

ನಿರ್ಲಕ್ಷ್ಯಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ

ಹನಿ ಹನಿ ಸೇರಿದರೆ ಹಳ್ಳ ಹಾಗೆಯೇ ನಮ್ಮ ಕೈಲಾದಷ್ಟು ನೀರಿನ ಮಿತವ್ಯಯ ಮಾಡಬೇಕು. ನೀರಿನ ಸಂರಕ್ಷಣೆಯ ಕುರಿತು ಪ್ರತಿಯೊಬ್ಬರೂ ಗಂಭೀರವಾಗಿ ಯೋಚಿಸಿ, ಪಣತೊಡದೇ ಇದ್ದಲ್ಲಿ ಬಹು ದೊಡ್ಡ ಅಪಾಯವನ್ನೇ ನಾವು ಎದುರಿಸಬೇಕಾದೀತು ಎಂಬ ಆತಂಕ ಜೋಸೆಫ್ ಅವರದು.[ನೀರಿನ ವಿಷ್ಯದಲ್ಲಿ ಒಗ್ಗಟ್ಟು ಮುಖ್ಯ: ಶಿವರಾಜ್ ಕುಮಾರ್]

English summary
Joseph a man from Udupi, is seriously trying to save water and he is encouraging others to do so. A success story of a rural man is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X