ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಸಂತೋಷ್ ಆತ್ಮಹತ್ಯೆ; ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆ ವರದಿ

|
Google Oneindia Kannada News

ಉಡುಪಿ, ಏಪ್ರಿಲ್ 20; ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಸಂತೋಷ್ ಶವದ ಮರಣೋತ್ತರ ಪರೀಕ್ಷೆ ವರದಿ ಪ್ರಕರಣದ ತನಿಖೆ ನಡೆಸುತ್ತಿರುವ ಉಡುಪಿ ನಗರ ಠಾಣೆ ಪೊಲೀಸರ ಕೈ ಸೇರಿದೆ.

ಏಪ್ರಿಲ್ 12ರಂದು ಸಂತೋಷ್ ಪಾಟೀಲ್ ಉಡುಪಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಏಪ್ರಿಲ್ 13ರಂದು ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿತ್ತು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಖಡಕ್ ಅಧಿಕಾರಿ ಎಂಟ್ರಿ!ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಖಡಕ್ ಅಧಿಕಾರಿ ಎಂಟ್ರಿ!

ಬುಧವಾರ ಕೆಎಂಸಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ವರದಿಯನ್ನು ಉಡುಪಿ ಪೊಲೀಸರಿಗೆ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಬಾಯಲ್ಲಿ ನೊರೆ ಹೊರಬಂದಿರುವುದು ಮತ್ತು ರೂಂನ ಕಸದಬುಟ್ಟಿಯಲ್ಲಿ ಜ್ಯೂಸ್ ಬಾಟಲ್ ಜೊತೆಗೆ ವಿಷದ ಬಾಟಲಿ ಇರುವುದು ಕೂಡಾ ಪತ್ತೆಯಾಗಿತ್ತು.

ಸಂತೋಷ್ ಆತ್ಮಹತ್ಯೆ; ಲಾಡ್ಜ್ ರೂಂನಲ್ಲಿ ಗಣಪತಿ ಹೋಮ ಸಂತೋಷ್ ಆತ್ಮಹತ್ಯೆ; ಲಾಡ್ಜ್ ರೂಂನಲ್ಲಿ ಗಣಪತಿ ಹೋಮ

Santhosh Patil Postmortem Report Submits To Udupi Police

ಈ ಹಿನ್ನಲೆಯಲ್ಲಿ ಸಂತೋಷ್ ಪಾಟೀಲ್ ಹೇಗೆ ಮೃತಪಟ್ಟಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ವೈದ್ಯರು ಈ ಕುರಿತು ವಿವರಗಳನ್ನು ಉಲ್ಲೇಖಿಸಿದ್ದಾರೆ. ಏಪ್ರಿಲ್ 12ರಂದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. 32 ಗಂಟೆಗಳ ಬಳಿಕ ಶವವನ್ನು ಉಡುಪಿಯಿಂದ ಬೆಳಗಾವಿಗೆ ಕಳಿಸಿಕೊಡಲಾಗಿತ್ತು.

ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಕಾಣದ ಕೈಗಳ ಕೈವಾಡ; ಎಚ್‌ಡಿಕೆಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಕಾಣದ ಕೈಗಳ ಕೈವಾಡ; ಎಚ್‌ಡಿಕೆ

ಉಡುಪಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದ ಶಾಂಭವಿ ಲಾಡ್ಜ್‌ನಿಂದ ಸಂತೋಷ್ ಮೃತದೇಹ ಹೊರತೆಗೆಯಲು ಬಿಡುವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದರು. ಕೆ. ಎಸ್. ಈಶ್ವರಪ್ಪ ಬಂಧಿಸಬೇಕು ಪಟ್ಟು ಹಿಡಿದಿದ್ದರು.

ಪೊಲೀಸರ ಸುಧೀರ್ಘ ಪಂಚನಾಮೆಯ ಬಳಿಕ ಸಂತೋಷ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳೂರಿನಿಂದ ಎರಡು ಎಫ್‌ಎಸ್‌ಎಲ್ಅಧಿಕಾರಿಗಳ ತಂಡ ಆಗಮಿಸಿ ಪಂಚನಾಮೆ ಮಾಡಿತ್ತು.

ಬುಧವಾರ ರಾತ್ರಿ ಸಂತೋಷ್ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡ ಬಳಿಕ ಪೊಲೀಸ್ ಭದ್ರತೆಯಲ್ಲಿ ಶವವನ್ನು ಬೆಳಗಾವಿಗೆ ಕಳಿಸಲಾಗಿತ್ತು. ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ. ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

English summary
KMC hospital doctors submitted contractor Santhosh Patil postmortem report to Udupi city police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X