ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾತ್ರೋ ರಾತ್ರಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜು.4: ಬೆಳ್ಳಂಪಳ್ಳಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳುವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ದೇವಸ್ಥಾನದ ಮುಖ್ಯದ್ವಾರದ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿರುವ ಕಳ್ಳರು, ಬಳಿಕ ಗರ್ಭ ಗುಡಿಯ ಬಾಗಿಲನ್ನು ತೆರೆದು ದೇವರ ಪಾಣಿಪೀಠದ ಮೇಲೆ ಅಳವಡಿಸಿದ ಬೆಳ್ಳಿಯ ಪ್ರಭಾವಳಿ, ದೇವರ ಬೆಳ್ಳಿಯ ಕವಚ, ಬೆಳ್ಳಿಯ ಸಣ್ಣ ಕವಳಿಗೆ, ಬೆಳ್ಳಿಯ ಸಣ್ಣ ಚೆಂಬು ಹಾಗೂ ಬೆಳ್ಳಿಯ ಸಣ್ಣ ತಟ್ಟೆಗಳನ್ನು ಕಳುವು ಮಾಡಿದ್ದಾರೆ.

ನೇಗಿನಹಾಳ ಗ್ರಾಮದಲ್ಲಿ ಬನಶಂಕರಿ ದೇವಿಯ ಚಿನ್ನಾಭರಣ ಕದ್ದ ಖದೀಮರು ನೇಗಿನಹಾಳ ಗ್ರಾಮದಲ್ಲಿ ಬನಶಂಕರಿ ದೇವಿಯ ಚಿನ್ನಾಭರಣ ಕದ್ದ ಖದೀಮರು

ಒಟ್ಟು 70,000 ರೂ.ಮೌಲ್ಯದ ಆಭರಣಗಳು ಕಳುವಾಗಿದೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರನ್ನು ಹಿಡಿಯಲು ಬಲೆ ಬೀಸಿದ್ದಾರೆ.

Robbers have stolen godess jewellery in Sri Durga Parameshwari temple

ನೀರಿಗೆ ಬಿದ್ದು ವ್ಯಕ್ತಿ ಸಾವು: ಬೇಳೂರು ಗ್ರಾಮದ ದೇಲಟ್ಟು ಸಮೀಪದ ಸೇತುವೆಯನ್ನು ದಾಟುವ ವೇಳೆ ಸೋಮ ಪೂಜಾರಿ (70) ಎಂಬುವವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
Robbers have stolen godess jewellery in Sri Durga Parameshwari temple

ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಮೃತದೇಹ ಬೆಳಗ್ಗೆ ಪತ್ತೆಯಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Robbers have stolen godess jewellery in Sri Durga Parameshwari temple at Bellampalli, Udupi. 70,000 Rs worth jewelery has been stolen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X