ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಉಡುಪಿಯಲ್ಲಿ ದಿಢೀರ್ ಮಳೆ; ಕೊಚ್ಚಿ ಹೋದ ರಸ್ತೆ

|
Google Oneindia Kannada News

ಉಡುಪಿ, ಅಕ್ಟೋಬರ್ 16 : ದಿಢೀರ್ ಆಗಿ ಸುರಿದ ಭಾರಿ ಮಳೆಗೆ ರಸ್ತೆಯೇ ಕೊಚ್ಚಿ ಹೋದ ಘಟನೆ ಉಡುಪಿಯಲ್ಲಿ ನಡೆದಿದೆ. ಹರಿಖಂಡಿಗೆ-ಪೆರ್ಡೂರು ಸಂಪರ್ಕಿಸುವ ರಸ್ತೆಯ ನಡುವೆ ದೊಡ್ಡ ಕಂದಕ ನಿರ್ಮಾಣವಾಗಿದೆ.

ಮಂಗಳವಾರ ಮಧ್ಯಾಹ್ನ ಉಡುಪಿ ಜಿಲ್ಲೆಯಲ್ಲಿ ದಿಢೀರ್ ಎಂದು ಭಾರಿ ಮಳೆ ಸುರಿಯಿತು. ಬೈರಂಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂಪದಕಟ್ಟೆ ಎಂಬಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಮಳೆ ನೀರಿನಲ್ಲಿ ಕೊಚ್ಚಿ ಹೋಯಿತು.

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

4 ಗಂಟೆ ಸುಮಾರಿಗೆ ಮಳೆ ನೀರಿನಿಂದಾಗಿ ರಸ್ತೆ ಪಕದಲ್ಲಿದ್ದ ಗದ್ದೆಗಳು ಜಲಾವೃತವಾಯಿತು. ಗದ್ದೆಯಿಂದ ಇದ್ದ ಮೋರಿಯಲ್ಲಿ ನೀರು ಹೋಗಲು ಸಾಧ್ಯವಾಗದೇ ರಸ್ತೆಯೇ ಕೊಚ್ಚಿ ಹೋಗಿತು.ದೆ. ಇದರಿಂದಾಗಿ ಹರಿಖಂಡಿಗೆ, ದೊಂಡರಂಗಡಿ, ಅಜೆಕಾರು ಗ್ರಾಮದವರು ಪೆರ್ಡೂರಿನಿಂದ ಸಂಪರ್ಕ ಕಳೆದುಕೊಂಡಿದ್ದಾರೆ.

23 ವರ್ಷದ ವೈದ್ಯೆಯ ಬಲಿ ತೆಗೆದುಕೊಂಡ ರಸ್ತೆ ಹೊಂಡ23 ವರ್ಷದ ವೈದ್ಯೆಯ ಬಲಿ ತೆಗೆದುಕೊಂಡ ರಸ್ತೆ ಹೊಂಡ

ರಸ್ತೆ ಕೊಚ್ಚಿ ಹೋಗುವಾಗ ಜನರು ಮತ್ತು ವಾಹನಗಳ ಸಂಚಾರವಿತ್ತು. ಒಂದು ಭಾಗ ಕುಸಿಯುತ್ತಿದ್ದಂತೆ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು. ರಸ್ತೆಯ ಎರಡೂ ಬದಿ ಜನರು ನೋಡುತ್ತಿದ್ದಂತೆಯೇ ರಸ್ತೆ ಕೊಚ್ಚಿ ಹೋಗಿ ನೀರಿನ ಒಡಲು ಸೇರಿತು.

ರಸ್ತೆ ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ಹಣ ಗುಳುಂ ಸ್ವಾಹ! ರಸ್ತೆ ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ಹಣ ಗುಳುಂ ಸ್ವಾಹ!

ಕಳೆದ ವರ್ಷ ಮಾಡಿದ್ದ ರಸ್ತೆ

ಕಳೆದ ವರ್ಷ ಮಾಡಿದ್ದ ರಸ್ತೆ

ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯನ್ನು ಕಳೆದ ವರ್ಷ ಅಭಿವೃದ್ಧಿಗೊಳಿಸಿತ್ತು. ಈಗ ಹರಿಖಂಡಿಗೆ, ದೊಂಡರಂಗಡಿ, ಅಜೆಕಾರು ಗ್ರಾಮದವರು ಪೆರ್ಡೂರಿಗೆ ಹೋಗಲು ಸುಮಾರು 5 ಕಿ. ಮೀ. ಸುತ್ತು ಹಾಕಿ ತೆರಳಬೇಕಿದೆ.

ವಾಹನ ಸಂಚಾರ ಬಂದ್

ವಾಹನ ಸಂಚಾರ ಬಂದ್

ಹಿರಿಯಡ್ಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ಎರಡೂ ಕರೆ ಬ್ಯಾರಿಕೇಡ್ ಹಾಕಿ ರಸ್ತೆ ಕುಸಿದಿದೆ ಎಂದು ಜನರಿಗೆ ಮಾಹಿತಿ ನೀಡುತ್ತಿದ್ದಾರೆ. ದಿಢೀರ್ ಸುರಿದ ಮಳೆಯಿಂದಾಗಿ ರಸ್ತೆಯ ಅಕ್ಕಪಕ್ಕದಲ್ಲಿದ್ದ ಸುಮಾರು 25 ಎಕರೆ ಭತ್ತದ ಗದ್ದೆ ಜಲಾವೃತವಾಗಿತ್ತು.

ಭಾರಿ ಮಳೆ ಮುನ್ಸೂಚನೆ

ಭಾರಿ ಮಳೆ ಮುನ್ಸೂಚನೆ

ಉಡುಪಿ ತಹಶೀಲ್ದಾರ್ ಪ್ರದೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹವಾಮಾನ ಇಲಾಖೆ ಅಕ್ಟೋಬರ್ 15 ಮತ್ತು 16ರಂದು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಯೆಲ್ಲೊ ಅಲರ್ಟ್ ಘೋಷಣೆ ಮಾಡಿತ್ತು.

ಸ್ಥಳೀಯರ ಆತಂಕ

ಸ್ಥಳೀಯರ ಆತಂಕ

ದಿಢೀರ್ ಎಂದು ಸುರಿದ ಭಾರಿ ಮಳೆಯಿಂದಾಗಿ ಸ್ಫೋಟದ ಶಬ್ದವೂ ಕೇಳಿ ಬಂದಿತು. ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಜನರು ಸಹ ಆತಂಕಗೊಂಡರು. ರಸ್ತೆ ಅಕ್ಕ-ಪಕ್ಕ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೇ ದಿಢೀರ್ ಪ್ರವಾಹ ಕಾಣಿಸಿಕೊಂಡಿತು.

English summary
Road washed away at Byrampalli grama panchayat limits due to heavy rain in Udupi district. Road connecting Perdoor and Harikandige.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X