ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸತತವಾಗಿ ಸುರಿದ ಮಳೆಗೆ ಮುಳೂರು ಬಳಿ ರಸ್ತೆ ಕುಸಿತ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ. 11: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಅದೆಷ್ಟೋ ಜೀವಗಳ ಬಲಿದಾನವಾಗಿದೆ. ಇದೀಗ ಕಳೆದ ಒಂದು ವಾರದಿಂದ ಸುರಿದ ಸತತ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಮುಳೂರು ಬಳಿ ರಸ್ತೆ ಕುಸಿತ ಕಾಣಿಸಿಕೊಂಡಿದೆ.

ಕಾಮಗಾರಿಯನ್ನು ಎರಡು ವರ್ಷ ಮೊದಲೇ ಆರಂಭಿಸಿದ್ದು, ಕಾಮಗಾರಿಗೂ ಮುನ್ನ ಸ್ಥಳೀಯ ಬಾವಿಗಳನ್ನು ಮಣ್ಣು ಹಾಕಿ ಮುಚ್ಚಲಾಗಿತ್ತು. ಆದರೆ ಇದೀಗ ಮಳೆಯ ಪ್ರಭಾವದಿಂದ ಮಣ್ಣು ಹೂತು ಹೋಗಿದ್ದು, ರಸ್ತೆಯ 5 ಅಡಿಯಷ್ಟು ಕುಸಿತ ಕಂಡಿದೆ.

ಬಂಟ್ವಾಳ: ಭಾರಿ ಮಳೆಗೆ ಮುರಿದು ಬಿದ್ದ ಹೆದ್ದಾರಿ ಸೇತುವೆಬಂಟ್ವಾಳ: ಭಾರಿ ಮಳೆಗೆ ಮುರಿದು ಬಿದ್ದ ಹೆದ್ದಾರಿ ಸೇತುವೆ

ವಾಹನ ಸವಾರರು ಸಂಚರಿಸುವ ವೇಳೆ ಈ ಮಾಹಿತಿ ಗಮನಕ್ಕೆ ಬಂದಿದ್ದು, ಆತಂಕಗೊಂಡ ನಾಗರಿಕರು, ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ಬ್ಯಾರಿ ಗೇಟ್ ಅಳವಡಿಸುವ ಮೂಲಕ ಸಂಚಾರಕ್ಕೆ ದಾರಿ ಮಾಡಿಕೊಟ್ಟರು.

Road crash on National Highway 66 near Muloor

ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಮುಳೂರು ಬಳಿ ಟ್ರಕ್ ಹಾಗೂ ಈಚರ್ ಢಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ರಸ್ತೆ ಕುಸಿತ ಕಂಡ ಭಾಗದಲ್ಲೇ ಘಟನೆ ಸಂಭವಿಸಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಕಾಪು ಪೊಲೀಸ್ ಠಾಣೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Road crash on National Highway 66 near Muloor, Udupi District. Due to continuous rainfall affected this incident occurred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X