ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಷ್ಟದಲ್ಲಿದ್ದರೂ 140 ಮನೆಗೆ ಅಕ್ಕಿ ಹಂಚಿದ ಉಡುಪಿಯ ಶಾರದಕ್ಕ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 21: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮಾಡಲಾಗಿರುವ ಲಾಕ್ ಡೌನ್ ಸಂದರ್ಭದಲ್ಲಿ ಮಧ್ಯಮ ವರ್ಗ ಮತ್ತು ಬಡವರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ.

Recommended Video

ಪಾದರಾಯನಪುರದಲ್ಲಿ ಹಲ್ಲೆ‌ಮಾಡಿದ 54 ಮಂದಿ ಅರೆಸ್ಟ್.ಇವರೇ ಆ ಕಿಡಿಗೇಡಿಗಳು | Padrayanapura vandalism | Arrested

ದುಡಿಮೆ ಇಲ್ಲದ ಈ ವರ್ಗದ ಜನರಿಗೆ ಆಹಾರ ಸಾಮಗ್ರಿಗಳನ್ನು ದಾನಿಗಳು ವಿತರಿಸುವ ಮೂಲಕ ಮಾನವೀಯ ಕಾರ್ಯಗಳು ಅಲ್ಲಲ್ಲಿ ನಡೀತಾ ಇವೆ. ಆದರೆ ಈ ವಯೋವೃದ್ಧ ಬಡ ಮಹಿಳೆಯ ಮಾನವೀಯ ಕಾರ್ಯ ಎಂಥವರಿಗೂ ಒಂದು ಮಾದರಿಯಾಗಿದೆ. ಇವರೇ ಉಡುಪಿಯ ಮಲ್ಪೆ ಶಾರದಕ್ಕ.

ತಾನೇ ಕಷ್ಟದಲ್ಲಿದ್ದರೂ ಈ ಕಷ್ಟದ ಸಂದರ್ಭ ಯಾವುದೇ ಪ್ರಚಾರವಿಲ್ಲದೆ ತಾನು ಕೂಡಿಟ್ಟ ಹಣದಿಂದ 140 ಮನೆಗೆ ಅಕ್ಕಿ ಹಂಚಿ ಶಾರದಕ್ಕ ಮಾನವೀಯತೆ ಮೆರೆದಿದ್ದಾರೆ.

Rice Distribute From Sharadakka In Udupi

ಶಾರದಕ್ಕ ಸದ್ಯ ಉಡುಪಿಯಲ್ಲಿ ಮನೆ ಮಾತಾಗಿದ್ದಾರೆ. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಅಲ್ಲೋ ಇಲ್ಲೋ ಸಿಕ್ಕಿದ ಮೀನು ಮಾರಿ ಪುಟ್ಟ ಗುಡಿಸಲಲ್ಲಿ ಜೀವನ ಸಾಗಿಸುತ್ತಿರುವ ಇವರು, ಮಲ್ಪೆ ವಡಬಾಂಡೇಶ್ವರ ವಾರ್ಡ್ ನೆರ್ಗಿ ಯಲ್ಲಿ ಒಟ್ಟು 140 ಮನೆಗಳಿಗೆ ತಲಾ 5 ಕೆ.ಜಿ ಯಂತೆ 700 ಕೆ.ಜಿ ಅಕ್ಕಿ ಹಂಚಿ ಯಾವುದೇ ಪ್ರಚಾರವಿಲ್ಲದೆ ಸೇವೆಯೇ ನನ್ನ ಧರ್ಮ ಎಂದು ನಂಬಿ ಬದುಕುತ್ತಿದ್ದಾರೆ.

ಈಕೆ ತನಗೆ ನ್ಯಾಯಬೆಲೆ ಅಂಗಡಿಯಲ್ಲಿ ದೊರೆತ ಅಕ್ಕಿಯನ್ನೂ ಕೂಡ ತನ್ನ ಮನೆ ವಠಾರದ ಕೂಲಿ ಕಾರ್ಮಿಕರಿಗೆ ಹಂಚಿ ಸೇವೆ ಪದಕ್ಕೆ ಅರ್ಥ ತಂದು ಕೊಟ್ಟಿದ್ದು, ಅನೇಕರಿಂದ ಶಾರದಕ್ಕನಿಗೆ ಶ್ಲಾಘನೆ ವ್ಯಕ್ತವಾಗಿದೆ.

English summary
Sharadakka has donated 140 Houses of rice with the money she has accumulated without any publicity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X