ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೌಕ್ತೆ ಅಬ್ಬರ: ಹಾನಿಗೀಡಾದ ಪ್ರದೇಶಗಳಿಗೆ ಕಂದಾಯ ಸಚಿವರ ಭೇಟಿ, ಪರಿಶೀಲನೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 19: ಇತ್ತೀಚೆಗೆ ತೌಕ್ತೆ ಚಂಡಮಾರುತದಿಂದ ಹಾನಿಗೀಡಾದ ಉಡುಪಿ ಜಿಲ್ಲೆಯ ಮರವಂತೆ ಹಾಗೂ ಕಾಪು ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಜಿಲ್ಲೆಯ ಕುಂದಾಪುರ ತಾಲ್ಲೂಕು, ಬೈಂದೂರು ತಾಲ್ಲೂಕು‌ ಮತ್ತು ಕಾಪು ತಾಲ್ಲೂಕಿನಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಮಂಗಳವಾರ (ಮೇ 18)ದಂದುಖುದ್ದು ತೆರಳಿ, ಅಹವಾಲು ಸ್ವೀಕರಿಸಿದ ಸಚಿವರು, ಅಗತ್ಯ ಪರಿಹಾರ ನೀಡುವ ಭರವಸೆ ನೀಡಿದರು.

ಉಡುಪಿ: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಮೀನುಗಾರ ಕುಟುಂಬಗಳು ತತ್ತರಉಡುಪಿ: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಮೀನುಗಾರ ಕುಟುಂಬಗಳು ತತ್ತರ

ಮುಖ್ಯವಾಗಿ ಕಡಲ್ಕೊರೆತದಿಂದಾಗಿ ಸಾಕಷ್ಟು ಹಾನಿಯುಂಟಾಗಿದ್ದು, ಕಡಲತೀರದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವರು ತೆರಳಿ ಪರಿಶೀಲನೆ ನಡೆಸಿದರು.

Revenue Minister R Ashok Visited To The Cyclone Tauktae Affected Areas In Udupi

ಬಳಿಕ ಮಾತನಾಡಿದ ಆರ್.ಅಶೋಕ್, ಕಳೆದ ನಾಲ್ಕೈದು ತಿಂಗಳ‌ ಹಿಂದೆ‌ ಮಾಡಿದ್ದ ಕಾಂಕ್ರೀಟ್ ರಸ್ತೆ ಸಮುದ್ರ ಪಾಲಾಗಿದೆ. ಸುಮಾರು ಒಂದು ಕಿ.ಮೀ ರಸ್ತೆಗೆ ಹಾನಿಯಾಗಿದೆ. ಚಂಡಮಾರುತದಿಂದ ನೂರಾರು ಮನೆಗಳಿಗೆ ಹಾನಿಯಾಗಿದ್ದು, ತೆಂಗಿನ ಮರಗಳು ಕೊಚ್ಚಿ ಹೋಗಿವೆ.

ಸಾವರ್ಜನಿಕ ಕಟ್ಟಡಗಳಿಗೂ ಹಾನಿಯಾದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದರು.

Revenue Minister R Ashok Visited To The Cyclone Tauktae Affected Areas In Udupi

ಅಲ್ಲದೆ ಸದ್ಯ ತುರ್ತು ಕ್ರಮವಾಗಿ ನೀರು ನುಗ್ಗಿದ ಮನೆಗಳಿಗೆ ತಕ್ಷಣ 10 ಸಾವಿರ ಪರಿಹಾರ ನೀಡಲಾಗುವುದು. ಭಾಗಶಃ ಮನೆ ಹಾನಿಯಾದವರಿಗೆ ತಕ್ಷಣಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ. ಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ನೀಡುತ್ತೇವೆ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯ ಮರವಂತೆಯಲ್ಲಿ ಕಡಲ ತೀರ ಸಂಪೂರ್ಣ ಕೊಚ್ಚಿ ಹೋಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

Recommended Video

ಅಮೇರಿಕಾ ಅಧ್ಯಕ್ಷ Biden ಮಾತಿಗೆ ಬೆಲೆ ಕೊಡುತ್ತಾ ಇಸ್ರೇಲ್ | Oneindia Kannada

English summary
Revenue Minister R. Ashok visited and inspected Maravante and Kaup areas in the Udupi district, which was recently affected by the Cyclone Tauktae.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X