ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಸೇರುವವರ ಪಟ್ಟಿ ರೆಡಿ ಇದೆ: ಆರ್.ಅಶೋಕ್ ಸ್ಪೋಟಕ ಹೇಳಿಕೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 25: ಬಿಜೆಪಿಗೆ ಸೇರುವವರ ದೊಡ್ಡ ಪಟ್ಟಿ ರೆಡಿ ಇದೆ. ಹೈಕಮಾಂಡ್ ನಿಂದ ಸೂಕ್ತ ನಿರ್ಧಾರ ಕಾಯುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪೋಟಕ ಹೇಳಿಕೆ ನೀಡಿದರು.

ಉಡುಪಿಯಲ್ಲಿ ಮಾತನಾಡಿದ ಆರ್.ಅಶೋಕ್, ನಾಳೆ ಬೆಂಗಳೂರಿನಲ್ಲಿ ರೈತ ಚಳುವಳಿ ತಯಾರಿ ವಿಚಾರವಾಗಿ, ಬೆಂಗಳೂರಿನಲ್ಲಿ ಯಾವುದೇ ಚಳುವಳಿ ಇರಲಿಕ್ಕಿಲ್ಲ. ಚಳುವಳಿ ಮಾಡುವ ಹೇಳಿಕೆಗಳು ಮಾತ್ರ ಬರುತ್ತಿದೆ. ಪ್ರತಿಭಟನೆಗೆ ಯಾರೂ ಬೆಂಬಲ ವ್ಯಕ್ತಪಡಿಸಿಲ್ಲ ಎಂದರು.

ಉಡುಪಿ; ತುರ್ತು ಸೇವೆಗೆ ಸಿದ್ಧಗೊಂಡಿವೆ 12 ERSS ವಾಹನಗಳು ಉಡುಪಿ; ತುರ್ತು ಸೇವೆಗೆ ಸಿದ್ಧಗೊಂಡಿವೆ 12 ERSS ವಾಹನಗಳು

ಪಂಜಾಬ್, ಹರಿಯಾಣ ಬಿಟ್ಟರೆ ದೇಶದಲ್ಲಿ ಯಾರೂ ಬೆಂಬಲ ಕೊಟ್ಟಿಲ್ಲ, ನಾಳೆ ಬೆಂಗಳೂರಿನಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು ನಡೆಯುವುದಿಲ್ಲ ಎಂದು ತಿಳಿಸಿದರು.

Udupi: Revenue Minister R Ashok Reacted About Farmers Protest

ಬಿಜೆಪಿಗೆ ಸೇರುವವರ ದೊಡ್ಡ ಪಟ್ಟಿಯೇ ರೆಡಿ ಇದೆ. ಯಾವ ಕಾಲಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಬಿಜೆಪಿ ಸೇರುವವರಪಟ್ಟಿ ಇರುವುದು ನಿಜ ಎಂದು ಉಡುಪಿಯಲ್ಲಿ ಸಚಿವ ಆರ್.ಅಶೋಕ್ ಹೇಳಿದರು.

ಪೇಜಾವರ ಶ್ರೀಗಳಿಂದ ರಾಮಮಂದಿರ ದೇಣಿಗೆಗಾಗಿ ಸಂಚಾರ

ಉಡುಪಿಯ ಪೇಜಾವರ ಶ್ರೀಗಳು ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರಾಗಿದ್ದು, ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆ ಸಂಗ್ರಹಿಸಲು ಊರೂರು ಸಂಚಾರ ಮಾಡುತ್ತಿದ್ದಾರೆ.

ದಿನ ಪೂರ್ತಿ ಅಯೋಧ್ಯೆ ರಾಮ ಮಂದಿರ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡ ಅವರು, ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ಬೆಂಗಳೂರು, ನಂತರ ತುಮಕೂರಿನಲ್ಲಿ ಕೃಷ್ಣ ಮಠ ಹಾಗೂ ತುಮಕೂರಿನ ವಿವಿಧ ಬಡಾವಣೆಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ಕೊಟ್ಟು ದೇಣಿಗೆ ಸ್ವೀಕರಿಸಿದರು.

Recommended Video

ಗಣರಾಜ್ಯೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಬ್ರೇಕ್- ರಾಜಧಾನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ | Oneinda Kannada

ತುಮಕೂರಿನ ಸಿದ್ದಗಂಗಾ ಶ್ರೀಗಳ ಆಹ್ವಾನದ ಮೇರೆಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಗೌರವ ಸ್ವೀಕರಿಸಿದ ಅವರು, ಅಲ್ಲಿನ ವಿದ್ಯಾರ್ಥಿಗಳಿಗೆ ಧರ್ಮ ಸಂದೇಶ ನೀಡಿದರು. ಕಳೆದ ಕೆಲವು ದಿನಗಳಿಂದ ಅವರು ಅಯೋಧ್ಯೆ ರಾಮ‌ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನ ಕೈಗೊಂಡಿದ್ದಾರೆ.

English summary
The BJP has a large list of those who join. Revenue Minister R. Ashok said that we are waiting for the right decision from the High Command.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X