ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳೆಯರಿಗಿದೆ ಸ್ಪೆಷಲ್ ವ್ಯವಸ್ಥೆ

|
Google Oneindia Kannada News

ಉಡುಪಿ ಆಗಸ್ಟ್ 21: ಸರಕಾರಿ ಕಚೇರಿ ಎಂದರೆ ಜನರ ಓಡಾಟ, ಫೈಲುಗಳು, ಗಡಿಬಿಡಿಯಾಗಿರುವ ಸಿಬ್ಬಂದಿ ದೃಶ್ಯ ಕಣ್ಣೆದುರು ಬರುತ್ತದೆ. ಎಷ್ಟೋ ಕಡೆ, ಬಂದವರಿಗೆ ಕುಳಿತು ಸುಧಾರಿಸಿಕೊಳ್ಳಲೂ ಸರಿಯಾದ ವ್ಯವಸ್ಥೆ ಇರುವುದಿಲ್ಲ. ಆದರೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಮತ್ತು ಕಚೇರಿಗೆ ಆಗಮಿಸುವ ಮಹಿಳೆಯರಿಗಾಗಿಯೇ ಸುಸಜ್ಜಿತ ವಿಶ್ರಾಂತಿ ಕೊಠಡಿಯನ್ನು ತೆರೆಯಲಾಗಿದೆ.

ಉಡುಪಿ ಜಿಲ್ಲಾಧಿಕಾರಿ ಎತ್ತಂಗಡಿ ಹಿಂದೆ ಮರಳು ಲಾಬಿ?ಉಡುಪಿ ಜಿಲ್ಲಾಧಿಕಾರಿ ಎತ್ತಂಗಡಿ ಹಿಂದೆ ಮರಳು ಲಾಬಿ?

ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ ಮತ್ತು ಕಚೇರಿಗೆ ಬರುವ ಮಹಿಳೆಯರ ಸಮಸ್ಯೆಗಳನ್ನು ಅರಿತು, ವಿಶೇಷ ಆಸಕ್ತಿ ವಹಿಸಿ ಇತ್ತೀಚೆಗೆ ವರ್ಗಾವಣೆಗೊಂಡು ತೆರಳಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಈ ಮಹಿಳಾ ವಿಶ್ರಾಂತಿ ಕೊಠಡಿ ಆರಂಭಿಸಿದ್ದರು. ಈ ಕೊಠಡಿಯಲ್ಲಿ ಮಹಿಳೆಯರ ಅಗತ್ಯ ಪೂರೈಸುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.

Rest Room For Women Employees In Udupi DC Office

ಊಟ ಮಾಡಲು ಡೈನಿಂಗ್ ಟೇಬಲ್, ವಿಶ್ರಾಂತಿ ವ್ಯವಸ್ಥೆ, ಪ್ರತ್ಯೇಕ ಶೌಚ ಗೃಹವಿದೆ. ತಾಯಿ ಜೊತೆಗೆ ಬರುವ ಮಕ್ಕಳನ್ನು ಮಲಗಿಸಲು ಮರದ ತೊಟ್ಟಿಲನ್ನು ಕೂಡ ಇಲ್ಲಿಡಲಾಗಿದೆ. ಉಡುಪು ಬದಲಿಸಲು ಪ್ರತ್ಯೇಕ ಕೊಠಡಿ, ಶೌಚಗೃಹದಲ್ಲಿ ನ್ಯಾಪ್ಕಿನ್ ಬರ್ನಿಂಗ್ ವ್ಯವಸ್ಥೆ ಕೂಡ ಇದ್ದು, ಮುಂದಿನ ದಿನಗಳಲ್ಲಿ ನ್ಯಾಪ್ಕಿನ್ ವೆಂಡಿಂಗ್ ಮೆಷಿನ್ ಬರಲಿದೆ.

Rest Room For Women Employees In Udupi DC Office

ಇಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯಿದ್ದು, ತಮ್ಮ ಮಾಸಿಕ ದಿನಗಳಲ್ಲಿ ಕೆಲಸ ಮಾಡಲು ಕಷ್ಟಪಡುವ ಮಹಿಳೆಯರು ಈ ಕೊಠಡಿಯಲ್ಲಿ ವಿಶ್ರಾಂತಿ ಪಡೆದು ಮತ್ತೆ ಕೆಲಸ ನಿರ್ವಹಿಸಬಹುದು. ಪ್ರಸೂತಿ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ನೌಕರರು, ಅಗತ್ಯವಿದ್ದಲ್ಲಿ ಮನೆಯಿಂದ ಮಗುವನ್ನು ಕರೆಸಿ, ಹಾಲುಣಿಸಿ ಮತ್ತೆ ಮನೆಗೆ ಕಳುಹಿಸಬಹುದು.

English summary
The facilities of resting room will be available for use by the women employees and visitors to DC office of Udupi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X