• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಣ್ಣೆದುರು ಮೋಸ ನಡೆಯುತ್ತಿದ್ದರೂ ಕಣ್ಮುಚ್ಚಿ ಕೂತಿದ್ದೀಯಲ್ಲಾ ತಾಯಿ ಕೊಲ್ಲೂರು ಮೂಕಾಂಬಿಕೆ!

|

ಅವ್ಯವಹಾರ, ಭ್ರಷ್ಟಾಚಾರ ನಡೆಸುವವರಿಗೆ ದೇವರು ದುಡ್ಡಾದರೇನು, ಬ್ಯಾಂಕ್ ದುಡ್ಡಾದರೇನು. ಆದರೆ, ಹೊಲವನ್ನು ಕಾಯಬೇಕಾದ ಬೇಲಿಯೇ ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರೂ, ರಕ್ಷಿಸ ಬೇಕಾದ ಶಕ್ತಿದೇವತೆ ಮಾತ್ರ ಕಣ್ಮುಚ್ಚಿ ಕೂತಿದ್ದಾಳೆ.

ಕರ್ನಾಟಕದ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಸರಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ತಂದು ಕೊಡುವುದರಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಾಲಯ ಎರಡನೇ ಸ್ಥಾನದಲ್ಲಿದೆ.

ಕೊಲ್ಲೂರು ದೇವಾಲಯದಲ್ಲಿ ಕೋಟಿ-ಕೋಟಿ ಲೂಟಿ?ಕೊಲ್ಲೂರು ದೇವಾಲಯದಲ್ಲಿ ಕೋಟಿ-ಕೋಟಿ ಲೂಟಿ?

ಕೊರೊನಾಗಿಂತ ಮೊದಲು ಅಂದರೆ, ಕಳೆದ ವರ್ಷದ ಆದಿಯಲ್ಲಿ ಕೊಲ್ಲೂರು ದೇವಾಲಯದಲ್ಲಿ ವಾರ್ಷಿಕ 90-92 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಇದೆಲ್ಲಾ ರಾಮನ ಲೆಕ್ಕ, ಇನ್ನು ಕೃಷ್ಣ ಲೆಕ್ಕದಲ್ಲಿ ಭಾರೀ ಗೋಲ್ಮಾಲ್ ನಡೆಯುತ್ತಿದೆ ಎನ್ನುವ ಆರೋಪಕ್ಕೆ ಇತಿಹಾಸವೇ ಇದೆ.

ಕೊಲ್ಲೂರು ದೇವಾಲಯ ಸದಾ ಒಂದಲ್ಲಾ ಒಂದು ವಿವಾದದಲ್ಲಿ ಇರುವುದು ಎರಡು ಕಾರಣಕ್ಕೆ. ಒಂದು, ದೇವಾಲಯದ ಮೂರ್ತಿ ಧಾರಕ ವಿಚಾರ, ಇನ್ನೊಂದು ದೇವಾಲಯದಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ. ಇದರಲ್ಲಿ ಮೂರ್ತಿ ಧಾರಕ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶಿಸಿ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವಂತೆ ಆದೇಶಿಸಿತ್ತು. ಈಗ, ಎರಡು ದಿನಗಳ ಹಿಂದೆ, ಕೊಲ್ಲೂರು ದೇವಾಲಯದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಕೂಗು ಮತ್ತೆ ಮಾರ್ದನಿಸುತ್ತಿದೆ.

 ಕೊಲ್ಲೂರು: ರೋಪ್ ವೇ ಯೋಜನೆ ಡಿಪಿಆರ್ ತಯಾರಿಗೆ ಚಾಲನೆ ಕೊಲ್ಲೂರು: ರೋಪ್ ವೇ ಯೋಜನೆ ಡಿಪಿಆರ್ ತಯಾರಿಗೆ ಚಾಲನೆ

 ದೇವಸ್ಥಾನದ ಮಹಾಸಂಘದ ಗೋಷ್ಠಿ

ದೇವಸ್ಥಾನದ ಮಹಾಸಂಘದ ಗೋಷ್ಠಿ

ಇತ್ತೀಚೆಗೆ ಕೊಲ್ಲೂರು ದೇವಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರ ಬಗ್ಗೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ದೇವಸ್ಥಾನದ ಮಹಾಸಂಘವು ಗೋಷ್ಠಿಯೊಂದನ್ನು ನಡೆಸಿತ್ತು. ಸಂಘದ ಸಮನ್ವಯ ಸಮಿತಿಯ ಮೋಹನ್ ಗೌಡ ಮಾತನಾಡಿ 2005-2018ರ ಅವಧಿಯಲ್ಲಿ ಅವ್ಯವಹಾರ ನಡೆದಿರುವುದನ್ನು ವಿವರಿಸಿದ್ದರು. "RTI ನಲ್ಲಿ ಅರ್ಜಿ ಹಾಕಿ, ಆಡಿಟ್ ರಿಪೋರ್ಟ್ ಅನ್ನು ಪಡೆದಿದ್ದೇವೆ. ಅದರಲ್ಲಿ ಭಕ್ತರು ನೀಡುವ ಚಿನ್ನಾಭರಣದ ಲೆಕ್ಕವಿಲ್ಲ"ಎಂದು ಮೋಹನ್ ಗೌಡ ದೂರಿದ್ದರು.

 ಮುಜರಾಯಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ

ಮುಜರಾಯಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ

ಹದಿನೈದು ವರ್ಷಗಳ ಹಿಂದೆ ಕೂಡಾ ದೇವಾಲಯದ ಸುಮಾರು ನಾಲ್ಕೂವರೆ ಕೆಜಿಯಷ್ಟು ಚಿನ್ನಾಭರಣ ಕಳ್ಳತನವಾಗಿದ್ದ ಬಗ್ಗೆ ಸುದ್ದಿಯಾಗಿತ್ತು. ಮುಜರಾಯಿ ಇಲಾಖೆಯ ಅಧಿಕಾರಿಗಳೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದಾದ ನಂತರ ಕೂಡಾ, ಅಧಿಕಾರಿಗಳು ಯಾವುದೇ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುತ್ತಿಲ್ಲ ಎನ್ನುವ ದೂರು ಬರುತ್ತಲೇ ಇದ್ದವು. ಮುಜರಾಯಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದರು.

 ಶಾಲಾಮಕ್ಕಳ ಸಮವಸ್ತ್ರಕ್ಕೆ ಖರ್ಚಾಗಿರುವ ವಿಚಾರಕ್ಕೂ ಸರಿಯಾದ ದಾಖಲೆಗಳು ಇಲ್ಲ

ಶಾಲಾಮಕ್ಕಳ ಸಮವಸ್ತ್ರಕ್ಕೆ ಖರ್ಚಾಗಿರುವ ವಿಚಾರಕ್ಕೂ ಸರಿಯಾದ ದಾಖಲೆಗಳು ಇಲ್ಲ

ಇನ್ನು, ದೇವಾಲಯದ ವತಿಯಿಂದ ಶಾಲಾಮಕ್ಕಳಿಗೆ ನೀಡುವ ಸಮವಸ್ತ್ರಕ್ಕೆ ಖರ್ಚಾಗಿರುವ ವಿಚಾರಕ್ಕೂ ಸರಿಯಾದ ದಾಖಲೆಗಳು ಇಲ್ಲ ಎನ್ನುವ ದೂರು ಕೂಡಾ ಇದೆ. ಇದಲ್ಲದೇ, ಮಾರ್ಚ್ 2016ರಲ್ಲಿ ದೇವಾಲಯದ ಲಾಕರ್ ನಿಂದ ಮೂರು ಕೆಜಿ ಚಿನ್ನಾಭರಣಗಳನ್ನು ಸಿಬ್ಬಂದಿಗಳು ಲಪಟಾಯಿಸಿ ಸಿಕ್ಕಿಬಿದ್ದಿದ್ದರು. ಕದ್ದಿದ್ದ ಚಿನ್ನದಲ್ಲಿ ಅರ್ಥ ಕೆಜಿಯಷ್ಟು ವಾಪಸ್ ಕೂಡಾ ಬಂದಿರಲಿಲ್ಲ.

 ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಅಣ್ಣಾಮಲೈ

ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಅಣ್ಣಾಮಲೈ

ಲಕ್ಷಾಂತರ ಭಕ್ತರ ಆರಾಧ್ಯ ದೇವತೆ ಮೂಕಾಂಬಿಕೆಗೆ ಹರಕೆ ರೂಪದಲ್ಲಿ ಹುಂಡಿಗೆ ಬೀಳುವ ಚಿನ್ನಾಭರಣಗಳಿಗೆ ಸೂಕ್ತ ದಾಖಲೆಗಳೇ ಇಲ್ಲ ಎನ್ನುವ ಕೂಗು ಹಿಂದಿನಿಂದಲೂ ಇದೆ. ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಅಣ್ಣಾಮಲೈ ಈ ವಿಚಾರದಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದರು. ಇವರ ಕಾರ್ಯವೈಖರಿಯನ್ನು ಜಿಲ್ಲೆಯ ಮತ್ತು ಮೂಕಾಂಬಿಕೆಯ ಭಕ್ತರು ಶ್ಲಾಘಿಸಿದ್ದರು.

  ಗವಿ ಗಂಗಾಧರೇಶ್ವರನ ದರ್ಶನ ಪಡೆದ ಡಿಕೆಶಿ..! | Oneindia Kannada
   ಕಣ್ಣೆದೆರು ಮೋಸ ನಡೆಯುತ್ತಿದ್ದರೂ, ಯಾಕೆ ಕಣ್ಮುಚ್ಚಿ ಕೂತಿದ್ದೀಯಾ ತಾಯಿ ಮೂಕಾಂಬಿಕೆ

  ಕಣ್ಣೆದೆರು ಮೋಸ ನಡೆಯುತ್ತಿದ್ದರೂ, ಯಾಕೆ ಕಣ್ಮುಚ್ಚಿ ಕೂತಿದ್ದೀಯಾ ತಾಯಿ ಮೂಕಾಂಬಿಕೆ

  ಹೀಗೆ.. ಈ ದೇವಾಲಯದಲ್ಲಿ ಅಲ್ಲಿನ ಸಿಬ್ಬಂದಿಗಳು ಮತ್ತು ಮುಜರಾಯಿ ಅಧಿಕಾರಿಗಳೇ ಅವ್ಯವಹಾರ ನಡೆಸುತ್ತಿರುವುದು ಹಲವು ಬಾರಿ ಸಾಬೀತಾಗಿ ಹೋಗಿದೆ. ಇನ್ನಾದರೂ, ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿ ಎನ್ನುವುದು ಸ್ಥಳೀಯರ ಮತ್ತು ಭಕ್ತರ ಆಗ್ರಹ. ಆದರೂ ಕೊನೆಗೂ ಕಾಡುವ ಪ್ರಶ್ನೆ, 'ಕಣ್ಣೆದೆರು ಮೋಸ/ ಅವ್ಯವಹಾರ ನಡೆಯುತ್ತಿದ್ದರೂ, ಯಾಕೆ ಕಣ್ಮುಚ್ಚಿ ಕೂತಿದ್ದೀಯಾ ತಾಯಿ ಮೂಕಾಂಬಿಕೆ' ಎನ್ನುವುದು.

  English summary
  Repeated Fraud And Irreregularities Incident In Kollur Mookambika Temple In Udupi District
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X