ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಮೋದಿಗಾಗಿ ನಡೆದ ರಥೋತ್ಸವ ಸೇವೆ

|
Google Oneindia Kannada News

ಉಡುಪಿ ಫೆಬ್ರವರಿ 02: ನರೇಂದ್ರ ಮೋದಿ ಮತ್ತೇ ಪ್ರಧಾನಿ ಆಗಬೇಕೆಂಬ ನಿಟ್ಟಿನಲ್ಲಿ ಚಟುವಟಿಕೆಗಳು ದೇಶಾದ್ಯಂತ ಆರಂಭಗೊಡಿವೆ. ದೇವಾಲಯಗಳಲ್ಲಿ ವಿಶೇಷ ಪೂಜೆ, ಹರಕೆ ಯಕ್ಷಗಾನ ಪ್ರದರ್ಶನ ನಡೆಸಲಾಗುತ್ತಿದೆ . ಹೋಮ ಹವನಗಳು ನಡೆದಿದೆ. ಈ ನಡುವೆ ನರೇಂದ್ರ ಮೋದಿ ಅವರ ಗೆಲುವಿಗೆ ಉಡುಪಿಯಲ್ಲಿ ವಿಶೇಷ ರಥೋತ್ಸವವನ್ನು ನೆರವೇರಿಸಲಾಗಿದೆ.

ಶ್ರೀಕೃಷ್ಣನ ಊರು ಉಡುಪಿಯಲ್ಲಿ ಉತ್ಸವಗಳಿಗೇನೂ ಕೊರತೆ ಇಲ್ಲ. ಪೊಡವಿಗೊಡೆಯ ಕೃಷ್ಣನ ನಾಡಿನಲ್ಲಿ ವಿಶೇಷ ಸೇವೆಯೊಂದು ಸಂಪನ್ನಗೊಂಡಿದೆ. ಮುಂಬರುವ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗಿ ಆಯ್ಕೆ ಆಗಲಿ ಎಂದು ಉಡುಪಿಯಲ್ಲಿ ಒಂದಷ್ಟು ಯುವಕರು ಶ್ರೀ ಕೃಷ್ಣನಿಗೆ ಬ್ರಹ್ಮ ರಥೋತ್ಸವ ಸೇವೆ ಸಲ್ಲಿಸಿದ್ದಾರೆ. ಇದು ಮೋದಿಯ ಗೆಲುವಿಗಾಗಿ ನಡೆದ ರಥೋತ್ಸವ ಎಂಬುದೇ ವಿಶೇಷ.

ಲೋಕಸಭಾ ಚುನಾವಣೆಗ ಹತ್ತಿರ ವಾಗುತ್ತಿದ್ದಂತೆ ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ಚುರುಕು ಗೊಂಡಿವೆ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ. ಗೆಲುವಿಗಾಗಿ ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ಸಕಲ ಸಿದ್ಧತೆಗಳನ್ನು ನಡೆಸುತ್ತಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅದರಲ್ಲೂ ಪ್ರಧಾನಿ ಮೋದಿ ಅವರನ್ನು ಹಣಿಯಲು ಪ್ರತಿಪಕ್ಷಗಳು ಮಹಾ ಘಟಬಂಧನ ಸೃಷ್ಠಿಸಿವೆ. ಬಿಜೆಪಿಯನ್ನು ಅದರಲ್ಲೂ ಪ್ರಮುಖವಾಗಿ ಮೋದಿ ಅವರನ್ನು ಅಧಿಕಾರದಿಂದ ದೂರ ಇಡಲು ಎಲ್ಲಾ ರೀತಿಯ ಕಸರತ್ತುಗಳನ್ನು ಪ್ರತಿಪಕ್ಷಗಳು ಒಟ್ಟಾಗಿ ಮಾಡುತ್ತಿವೆ.

Rathosthsava for Narendra Modi

ಈ ನಡುವೆ ತಮ್ಮ ನೆಚ್ಚಿನ ನಾಯಕ ನರೇಂದ್ರ ಮೋದಿ ಅವರ ನ ಗೆಲುವಿಗಾಗಿ ಅವರ ಅಭಿಮಾನಿಗಳು ಪೂಜೆ ಪುನಸ್ಕಾರಗಳು ನಡೆಸುತ್ತಿದ್ದಾರೆ. ಉಡುಪಿಯ ಕೃಷ್ಣನ ಸನ್ನಿಧಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆದ್ದು ಮತ್ತೆ ಪ್ರಧಾನಿ ಆಗಲಿ ಎಂದು ರಥೋತ್ಸವ ನಡೆದಿದೆ. ಒಂದಷ್ಟು ಮೋದಿ ಅಭಿಮಾನಿ ಯುವಕರು ಸೇರಿಕೊಂಡು ಕೃಷ್ಣ ಮುಖ್ಯಪ್ರಾಣ ದೇವರಿಗೆ ಬ್ರಹ್ಮ ರಥೋತ್ಸವ ಸೇವೆ ಸಲ್ಲಿಸಿದ್ದಾರೆ.

ಬಜೆಟ್ ನಲ್ಲಿ ಮಧ್ಯಮ ವರ್ಗದ ಜನರಿಗೆ ಮತ್ತು ಬಡವರಿಗೆ ಉತ್ತಮ ಯೋಜನೆಗಳನ್ನು ರೂಪಿಸಿದ ಮೋದಿ ಮತ್ತೆ ಪ್ರಧಾನಿಯಾಗಬೇಕು. ಮುಂದಿನ ಪೀಳಿಗೆಯ ಭವಿಷ್ಯ ಉತ್ತಮವಾಗಿರಬೇಕು ಎಂಬುದು ನಮ್ಮ ಉದ್ದೇಶ ಎಂದು ಸೇವಾ ಕರ್ತರು ತಿಳಿಸಿದ್ದಾರೆ.

ಈ ಬಾರಿಯ ಚುನಾವಣೆ ಬಹಳಷ್ಟು ಜಿದ್ದಾಜಿದ್ದಿನಿಂದ ಇರೋದು ಅಂತೂ ಗ್ಯಾರೆಂಟಿ. ಮೋದಿಯ ವಿರುದ್ಧ ಉಳಿದೆಲ್ಲಾ ಪಕ್ಷಗಳು ಒಟ್ಟಾಗಿ ರಣ ತಂತ್ರ ರೂಪಿಸುತ್ತಿದೆ. ಆದರೆ ದೇಶದ ಯುವ ಜನತೆ ಮೋದಿ ಆಡಳಿತವನ್ನು ಬಹುವಾಗಿ ಬೆಂಬಲಿಸುತ್ತಿವೆ.

English summary
Youths of Udupi performed Special pooja to sri Krishana and Rathosthsava to make Narandra Modi prime minister for another time
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X