ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಪೆ ಮೀನುಗಾರರ ಬಲೆಗೆ ಬಿತ್ತು ಅಪರೂಪದ "ದೆವ್ವ ಮೀನು"

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ 15: ಮೀನು ಹಿಡಿಯಲು ಬಲೆ ಬೀಸಿದ್ದ ಮಲ್ಪೆ ಮೀನುಗಾರರಿಗೆ ಅಪರೂಪದ ದೊಡ್ಡ ಗಾತ್ರದ ದೆವ್ವ ಮೀನು ಸಿಕ್ಕಿಬಿದ್ದಿದೆ. ಸುಮಾರು ಐದು ಅಡಿ ಉದ್ದವಿರುವ ಈ ಮೀನು ಆರು ಕೆ.ಜಿ ತೂಕವಿದೆ.

ಒಮ್ಮೆಗೆ ನೋಡಿದರೆ ದೆವ್ವದಂತೆ ಕಾಣುವ ಇದು ಒಂದು ಜಾತಿಯ ಅಕ್ಟೋಪಸ್. ಇದರ ವೈಜ್ಞಾನಿಕ ಹೆಸರು ಬಿಗ್ ಬ್ಲೂ ಅಕ್ಟೋಪಸ್. "ಡೆವಿಲ್ ಫಿಶ್" ಎಂದೇ ಇದು ಖ್ಯಾತಿ ಪಡೆದಿದೆ.

ಮಂಗಳೂರಿನಲ್ಲಿ ಕಂಡಿತು ಅಪರೂಪದ ವೇಲ್ ಶಾರ್ಕ್ಮಂಗಳೂರಿನಲ್ಲಿ ಕಂಡಿತು ಅಪರೂಪದ ವೇಲ್ ಶಾರ್ಕ್

Rare Devil Fish Found In Malpe

ಅರಬ್ಬೀ ಸಮುದ್ರ ಮತ್ತು ಹಿಂದೂ ಮಹಾ ಸಾಗರದ ಕಲ್ಲು ಬಂಡೆಗಳ ಅಡಿಯಲ್ಲಿ 150 ಮೀಟರ್ ಆಳದಲ್ಲಿ‌ ಈ ಅಕ್ಟೋಪಸ್ ಜೀವಿಸುತ್ತದೆ. ಚೀನಾ, ಸಿಂಗಾಪುರ, ಹಾಂಗ್ ಕಾಂಗ್ ನಲ್ಲಿ ಈ ಮೀನಿಗೆ ಬೇಡಿಕೆ ಹೆಚ್ಚು. ಸಂತಾನೋತ್ಪತ್ತಿ ಬಳಿಕ ಗಂಡು ಮೀನು ಸತ್ತರೆ, ಹೆಣ್ಣು ಮೀನು ಮರಿ ಹಾಕಿ ಅಸುನೀಗುತ್ತದೆ. ಇದೇ ಈ ತಳಿಯ ವಿಶೇಷತೆ. ಗುರುವಾರ ಮಲ್ಪೆಯ ಮೀನುಗಾರರ ಬಲೆಗೆ ಅಪರೂಪದ ಈ ಮೀನು ಸಿಲುಕಿಕೊಂಡಿತ್ತು.

English summary
Malpe fishermen caught rare devil fish. The fish is about five feet long and weighs six kg,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X