ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ ವೈರಲ್; ಉಡುಪಿಯಲ್ಲಿ ಹುಲಿ ಕುಣಿತಕ್ಕೆ ಸ್ಟೆಪ್ ಹಾಕಿದ ರಕ್ಷಿತ್ ಶೆಟ್ಟಿ

|
Google Oneindia Kannada News

Recommended Video

ಉಡುಪಿಯಲ್ಲಿ ಹುಲಿ ಕುಣಿತಕ್ಕೆ ಸ್ಟೆಪ್ ಹಾಕಿದ ರಕ್ಷಿತ್ ಶೆಟ್ಟಿ | Oneindia Kannada

ಉಡುಪಿ, ಆಗಸ್ಟ್ 23: ಶ್ರೀ ಕೃಷ್ಣನ ಊರು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ವೈಭವದಿಂದ ನಡೆಯುತ್ತಿದೆ. ಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ವಿಶೇಷ ಪೂಜೆ ಪುನಸ್ಕಾರಗಳೊಂದಿಗೆ 9 ರಂಧ್ರದ ನವಗ್ರಹ ಕಿಟಕಿಯ ಮೂಲಕ ಭಕ್ತರು ಕೃಷ್ಣನ ದರ್ಶನ ಪಡೆಯುತ್ತಿದ್ದಾರೆ.

ಚಿತ್ರದ ಯಶಸ್ಸಿಗೆ ಶ್ರೀ ಕ್ಷೇತ್ರ ಕೊಲ್ಲೂರಿನಲ್ಲಿ ರಕ್ಷಿತ್ ಶೆಟ್ಟಿ ವಿಶೇಷ ಪೂಜೆಚಿತ್ರದ ಯಶಸ್ಸಿಗೆ ಶ್ರೀ ಕ್ಷೇತ್ರ ಕೊಲ್ಲೂರಿನಲ್ಲಿ ರಕ್ಷಿತ್ ಶೆಟ್ಟಿ ವಿಶೇಷ ಪೂಜೆ

ಮೊಸರು ಗಡಿಗೆ ಒಡೆವ ವಿಟ್ಲಪಿಂಡಿ ಹಾಗೂ ಕೃಷ್ಣನ ಬದುಕಿನ ಚಿತ್ರಣ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ಇನ್ನೊಂದೆಡೆ ತಾಸೆಯ ಬಡಿತಕ್ಕೆ ಹೆಜ್ಜೆಹಾಕುವ ಹುಲಿವೇಷಧಾರಿಗಳ ಕುಣಿತವನ್ನು ನೋಡುವುದೇ ಕಣ್ಣಿಗೆ ಹಬ್ಬವೆನಿಸಿದೆ. ಹುಲಿಕುಣಿತಕ್ಕೆ ಈ ಬಾರಿ ಮತ್ತೂ ಒಂದು ಆಕರ್ಷಣೆ ಸೇರ್ಪಡೆಯಾಗಿದೆ.

Rakshith Shetty Pilinalike Video Viral

ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಹುಲಿ ನೃತ್ಯಕ್ಕೆ ಸ್ಟೆಪ್ ಹಾಕಿರುವುದೇ ಆ ವಿಶೇಷ. ಅಷ್ಟಮಿಯ ಸಂದರ್ಭದಲ್ಲಿ ಜೂನಿಯರ್ ಫ್ರೆಂಡ್ಸ್ ಕೊರಂಗ್ರಪಾಡಿ ಉಡುಪಿ ತಂಡದ ಜೊತೆ ರಕ್ಷಿತ್ 'ಪಿಲಿ ನಲಿಕೆ' ಮಾಡಿದರು.

Rakshith Shetty Pilinalike Video Viral

ತಾಸೆಯ ಬಡಿತಕ್ಕೆ ಹೆಜ್ಜೆ ಹಾಕಿದ ರಕ್ಷಿತ್ ಶೆಟ್ಟಿ ತಮ್ಮ "ಉಳಿದವರು ಕಂಡಂತೆ" ಚಿತ್ರದ ಹುಲಿಕುಣಿತದ ಸನ್ನಿವೇಷವನ್ನು ನೆನೆದರು. ಚಿತ್ರದಲ್ಲಿ ತಾನು ಹುಲಿವೇಷ ಹಾಕಿ ಕುಣಿದ ಪರಿಯನ್ನು ನೆನೆಯುತ್ತಲೇ ತಂಡದ ಜೊತೆ ಹೆಜ್ಜೆ ಹಾಕಿದರು.

ರಕ್ಷಿತ್ ಹೆಜ್ಜೆ ಹಾಕಿದ ಸಂದರ್ಭ ಸ್ಥಳೀಯ ಯುವಕ, ಯುವತಿಯರು ಅವರಿಗೆ ಸಾಥ್ ನೀಡಿದರು. ರಕ್ಷಿತ್ ಶೆಟ್ಟಿ ಅವರ ಪಿಲಿ ನಲಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
Sandalwood star Rakshith Shetty put steps to Pilinalike in Udupi . Video of this movement viral in social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X