ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯ ಪುತ್ತಿಗೆ ಶ್ರೀ, ನ್ಯಾಯಾಧೀಶರಿಗೆ ಕೊರೊನಾ ಸೋಂಕು: ಆಸ್ಪತ್ರೆಗೆ ದಾಖಲು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 21: ಉಡುಪಿಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಇಂದು ಕೇರಳದ ಯುವಕನೊಬ್ಬ ಕೋವಿಡ್ ಗೆ ಬಲಿಯಾದ ಬೆನ್ನಿಗೇ ಮತ್ತೊಂದು ಸುದ್ದಿ ಬಂದಿದೆ. ಉಡುಪಿಯ ಪುತ್ತಿಗೆ ಮಠದ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Recommended Video

Drone Prathap in Police Custody, what next..? | Oneindia Kannada

ಈ ಹಿನ್ನೆಲೆಯಲ್ಲಿ ಶ್ರೀಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಸದ್ಯ ಶ್ರೀಗಳು ಆರೋಗ್ಯವಾಗಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ. ಸ್ವಾಮೀಜಿ ಶೀಘ್ರ ಗುಣಮುಖರಾಗುವಂತೆ ಭಕ್ತರು ಪ್ರಾರ್ಥನೆ ಮಾಡುತ್ತಿದ್ದಾರೆ.

ಉಡುಪಿಯಲ್ಲಿ 134, ಚಿತ್ರದುರ್ಗದಲ್ಲಿ 17 ಕೊರೊನಾ ಸೋಂಕು ಪ್ರಕರಣ ಪತ್ತೆಉಡುಪಿಯಲ್ಲಿ 134, ಚಿತ್ರದುರ್ಗದಲ್ಲಿ 17 ಕೊರೊನಾ ಸೋಂಕು ಪ್ರಕರಣ ಪತ್ತೆ

ಉಡುಪಿ ನಗರದಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯ ಆವರಣವನ್ನು ಎರಡು ದಿನಗಳ‌ ಕಾಲ‌ ಸೀಲ್ ಡೌನ್ ಮಾಡಲಾಗಿದೆ.

Puttige Mutt Seer Sugunendra Theertha Swamiji and District Court Judge Tests Positive For Covid-19

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಸಾವು ಸಂಭವಿಸಿದ್ದು, ಇದರೊಂದಿಗೆ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ 12 ಕ್ಕೇರಿದೆ. ಕೇರಳದ ಕಣ್ಣೂರು ನಿವಾಸಿ ಮಣಿಪಾಲದ ಕೆಎಂಸಿಯಲ್ಲಿ ಸಾವನ್ನಪ್ಪಿದ್ದು, ಇವರು ಜೂನ್ ತಿಂಗಳಿನಿಂದ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕೊರೊನಾ ವೈರಸ್ ನಿಯಂತ್ರಣಕ್ಕೆ ಜನಜಾಗೃತಿಯೊಂದೇ ಉಳಿದಿರುವ ದಾರಿ: ಕೋಟ ಶ್ರೀನಿವಾಸ್ ಪೂಜಾರಿಕೊರೊನಾ ವೈರಸ್ ನಿಯಂತ್ರಣಕ್ಕೆ ಜನಜಾಗೃತಿಯೊಂದೇ ಉಳಿದಿರುವ ದಾರಿ: ಕೋಟ ಶ್ರೀನಿವಾಸ್ ಪೂಜಾರಿ

ಶಮೀರ್ (35) ಎಂಬಾತ ಕೊರೊನಾ ವೈರಸ್ ನಿಂದ ಮೃತಪಟ್ಟ ಯುವಕನಾಗಿದ್ದಾನೆ. ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದ ಈ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಉಡುಪಿಯ ಮೀನೂಟ ಹೋಟೆಲಿನ 18 ಮಂದಿ ನೌಕರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹೋಟೆಲ್ ನ ಮಾಲೀಕರಿಗೆ ಈ ಹಿಂದೆಯೇ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಹೋಟೆಲ್ ನ 20 ಮಂದಿ ನೌಕರರು ಹೋಮ್ ಕ್ವಾರಂಟೈನ್ ನಲ್ಲಿದ್ದರು.ಇದೀಗ ಹೋಮ್ ಕ್ವಾರಂಟೈನ್ ನಲ್ಲಿದ್ದ ಹದಿನೆಂಟು ಮಂದಿಗೆ ಕೊರೊನಾ ಪಾಸಿಟಿವ್ ದೃಢಗೊಂಡಿದೆ.

English summary
Puttige Mutt Seer Sugunendra Theertha Swamiji Tests Positive For Coronavirus and admitted to KMC Hospital in Manipal for treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X