ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ದುರ್ಗಾ ಗ್ರಾಮದಲ್ಲಿ ಗುಂಡು ಹಾರಿಸಿಕೊಂಡು ಪ್ರಗತಿಪರ ಕೃಷಿಕ ಆತ್ಮಹತ್ಯೆ

|
Google Oneindia Kannada News

ಉಡುಪಿ, ಸೆಪ್ಟೆಂಬರ್, 14: ಪ್ರಗತಿಪರ ಕೃಷಿಕ 63 ವರ್ಷದ ತೆಳ್ಳಾರು ನಿಲೆಬೆಟ್ಟು ಭಾಸ್ಕರ್‌ ಹೆಗ್ಡೆ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಂಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಯವ ಕೃಷಿಕರಾಗಿ ಪ್ರಸಿದ್ಧರಾಗಿದ್ದ ಇವರು ಮೂರು ಎಕರೆ ಜಮೀನಿನಲ್ಲಿ ಸಾವಾಯವ ತರಕಾರಿ ಬೆಳೆದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು.

ಬೆಂಗಳೂರು: ತಾಯಿಯಿಂದಲೇ ಮಗನ ಕೊಲೆ- ತಾನೂ ಆತ್ಮಹತ್ಯೆ!ಬೆಂಗಳೂರು: ತಾಯಿಯಿಂದಲೇ ಮಗನ ಕೊಲೆ- ತಾನೂ ಆತ್ಮಹತ್ಯೆ!

ಆತ್ಮಹತ್ಯೆಗೆ ಶರಣಾದ ಪ್ರಗತಿಪರ ಕೃಷಿಕ:
ನಿಲೆಬೆಟ್ಟು ಗುತ್ತು ಮನೆ ಭಾಸ್ಕರ್ ಹೆಗ್ಡೆ ಅವರು ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಕರ್ತವ್ಯವನ್ನು ನಿಭಾಯಿಸುತ್ತಿದ್ದರು. ಮೂಲಗಳ ಪ್ರಕಾರ ಸಾಲ ಮಾಡಿದ್ದರಿಂದ ಅವರು ಮನನೊಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಸಾವಯವ ಕೃಷಿಕರಾಗಿಯೂ ಹೆಸರು ಮಾಡಿದವರಾಗಿದ್ದರು. ಆರ್ಥಿಕ ಸಮಸ್ಯೆ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

Udupi: progressive farmer committed suicide in Durga village

ಬೆಳಗ್ಗೆ ಡಿಪೋಗೆ ಹಾಲು ನೀಡಿ ಬಂದವರಿಗೆ ಮನೆಯಲ್ಲಿ ಭಾಸ್ಕರ್‌ ಹೆಗ್ಡೆ ಅವರ ಹೆಂಡತಿ ಅಡುಗೆ ತಯಾರು ಮಾಡಿಟ್ಟಿದ್ದರು. ತಿಂಡಿಯನ್ನು ಸೇವಿಸಿದೆ ಮನೆಯ ಇನ್ನೊಂದು ಬದಿಯಲ್ಲಿದ್ದ ಮಂಚದಲ್ಲಿ ಕುಳಿತು ಗುಂಡು ಹಾರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ಮೂಲಗಳ ಪ್ರಕಾರ ಅವರು ಸಾಲ ಮಾಡಿಕೊಂಡಿದ್ದು, ಚಿಂತೆಯಲ್ಲಿದ್ದರು. ಕಳೆದೊಂದು ತಿಂಗಳಿನಿಂದ ತೀರಾ ಖಿನ್ನತೆಗೆ ಒಳಗಾಗಿರುವಂತೆ ಕಂಡುಬಂದಿತ್ತು, ಇದನ್ನು ಅವರು ಮನೆಯವರ ಗಮನಕ್ಕೆ ತಂದಿರಲಿಲ್ಲ ಎಂಬುದು ತಿಳಿದುಬಂದಿದೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

English summary
progressive farmer committed 63 year-old Bhaskar Hegde suicide at home in Durga village of Karkala taluk. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X