ಪಿಯುಸಿ; ಉಡುಪಿಯಲ್ಲಿ ಹಪ್ಪಳ ಮಾರುವವರ ಮಗಳು ರಾಜ್ಯಕ್ಕೆ ದ್ವೀತಿಯ
ಉಡುಪಿ, ಜೂನ್ 18; ಎಸ್ಎಸ್ಎಲ್ಸಿ ರ್ಯಾಂಕ್ನಲ್ಲಿ ಇಪ್ಪತ್ತನೇ ಸ್ಥಾನಕ್ಕೆ ಕುಸಿದಿದ್ದ ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಮಾಲ್ ಮಾಡಿದೆ. ಅತೀ ಹೆಚ್ಚು ಮಕ್ಕಳು ಪಾಸ್ ಆಗುವ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನವನ್ನು ಜಿಲ್ಲೆ ಪಡೆದಿದೆ.
ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐವರು ಟಾಪರ್ ಆಗಿದ್ದು ಜಿಲ್ಲೆಗೆ ಹೆಸರು ತಂದಿದ್ದಾರೆ. ಕಾಮರ್ಸ್ ವಿಭಾಗದಲ್ಲಿ ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಸಮರ್ಥ್ ಜೋಶಿ, ಮಂಗಳೂರು ಅಲೋಶಿಯಸ್ ಕಾಲೇಜಿನ ಅನಿಶಾ ಮಲ್ಯ, ಕೆನರಾ ಪಿಯು ಕಾಲೇಜಿನ ಅಚಲ್ ಪ್ರವೀಣ್ ಉಳ್ಳಾಲ್ 600ರಲ್ಲಿ 595 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಅಶ್ವಥ ಎಲೆಯ ಮೇಲೆ ಸಚಿನ್ ಭಾವಚಿತ್ರ: ಉಡುಪಿ ಕಲಾವಿದನಿಗೆ ಸಚಿನ್ ಫಿದಾ!
ವಿಜ್ಞಾನ ವಿಭಾಗದಲ್ಲಿ ಅಲೋಶಿಯಸ್ ಕಾಲೇಜಿನ ಇಲ್ಹಾಮ್ ರಾಫಿಕ್, ಆಳ್ವಾಸ್ ಕಾಲೇಜಿನ ಶ್ರೀಕೃಷ್ಣ ಪೆಜತ್ತಾಯ 597 ಅಂಕ ಪಡೆದು ಗಮನ ಸೆಳೆದಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ: 2.60 ಲಕ್ಷ ವಿದ್ಯಾರ್ಥಿಗಳು ಫೇಲ್ ಆಗಲು ಕಾರಣವೇನು?
ಅಲೋಶಿಯಸ್ ಕಾಲೇಜಿನಲ್ಲಿ ಅನಿಶಾ ಮಲ್ಯ ಮತ್ತು ಇಲ್ಹಾಮ್ ರಾಫಿಕ್ ಹೆತ್ತವರು ಬಂದು ಮಕ್ಕಳೊಂದಿಗೆ ಸಿಹಿ ತಿನ್ನಿಸಿ ಸಂಭ್ರಮ ಹಂಚಿಕೊಂಡಿದ್ದಾರೆ. ಅನಿಶಾ ಮಲ್ಯ ಉನ್ನತ ಅಧ್ಯಯನ ಕೈಗೊಳ್ಳುವ ಬಯಕೆ ವ್ಯಕ್ತಪಡಿಸಿದರೆ, ಇಲ್ಹಾಮ್ ರಾಫಿಕ್ ಸೈಕಾಲಜಿ ಅಧ್ಯಯನಕ್ಕೆ ಮನಸ್ಸು ಮಾಡಿದ್ದಾರೆ.
ದ್ವಿತೀಯ ಪಿಯುಸಿ: ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಆ.1ರಿಂದ ಪೂರಕ ಪರೀಕ್ಷೆ
ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡ ಇಲ್ಹಾಮ್, "ಪಿಯುಸಿಯಲ್ಲಿ ಟಾಪರ್ ಆಗಿರೋದು ಕಂಡು ಖುಷಿಯಾಗಿದೆ. ಮೊದಲ ಬಾರಿಗೆ ನನಗೆ ನಂಬೋದೇ ಅಸಾಧ್ಯವಾಗಿತ್ತು. ಆದರೆ ಮಾಧ್ಯಮದಲ್ಲಿ ನಾನು ಟಾಪರ್ ಎಂದು ಸುದ್ದಿ ಬಿತ್ತರವಾದ ಬಳಿಕ ನಾನು ಟಾಪರ್ ಎಂದು ಸ್ಪಷ್ಟವಾಯಿತು. ಏಕೆಂದರೆ ನಾನು ಅಷ್ಟೊಂದು ಸಂತೋಷಗೊಂಡಿದ್ದೆ" ಎಂದರು.
ಮಂಗಳೂರಿನ ಸಂತ ಅಲೋಶಿಯಸ್ ಪಿಯುಸಿ ಟಾಪರ್ ಆಗಿರುವ ಇಲಮ್ ವಿಜ್ಞಾನ ವಿಭಾಗದಲ್ಲಿ 597 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಇಲ್ಹಾಮ್, "ಮುಂದೆ ತಾನು ಮಂಗಳೂರಿನ ಯನೆಪೊಯ ಕಾಲೇಜಿನಲ್ಲಿ ಬಿಎಸ್ಇ ಕ್ಲಿನಿಕಲ್ ಸೈಕಾಲಜಿ ಮಾಡುತ್ತೇನೆ" ಎಂದು ಹೇಳಿದ್ದಾರೆ.

"ಈ ಕ್ಷೇತ್ರದಲ್ಲಿ ತನಗೆ ಆಸಕ್ತಿಯಿದೆ. ಆದ್ದರಿಂದ ನಾನು ಬಿಎಸ್ಇ ಕ್ಲಿನಿಕಲ್ ಸೈಕಾಲಜಿಯನ್ನು ಆಯ್ಕೆ ಮಾಡಿದೆ. ಈಗಾಗಲೇ ನಾನು ರಿಜಿಸ್ಟ್ರೇಷನ್ ಮಾಡಿದ್ದೇನೆ. ಇದು ನಾಲ್ಕು ವರ್ಷಗಳ ಕೋರ್ಸ್. ಮುಂದಕ್ಕೆ ತಾನೋರ್ವ ಉತ್ತಮ ಕ್ಲಿನಿಕಲ್ ಸೈಕಾಲಜಿಸ್ಟ್ ಆಗುವೆ" ಎಂಬ ಭರವಸೆ ಇದೆ ಎಂದು ಹೇಳಿದರು.
ಇನ್ನು ಪಿಯುಸಿ ಪರೀಕ್ಷೆಯಲ್ಲಿ ಹಪ್ಪಳ ತಯಾರಿಸಿ ಜೀವನ ನಿರ್ವಹಿಸುತ್ತಿರುವ ಉಡುಪಿಯ ನಾರಾಯಣ ನಾಯಕ್ ಪುತ್ರಿ ಭವ್ಯಾ ನಾಯಕ್ ರಾಜ್ಯಕ್ಕೇ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಹಪ್ಪಳ ಮಾರಾಟ ಮಾಡಿ ಜೀವನ ಸಾಗಿಸುವ ನಾರಾಯಣ ನಾಯಕ್ ಪುತ್ರಿ ಭವ್ಯ ನಾಯಕ್ ಉಡುಪಿಯ ಪೂರ್ಣಪ್ರಜ್ಞಾ ಪಿಯು ಕಾಲೇಜಿನ ವಿದ್ಯಾರ್ಥಿನಿ. ಭವ್ಯ 600 ರಲ್ಲಿ 597 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸಿದ್ದಾಳೆ.
ಉತ್ತಮ ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಲು ಪೋಷಕರು ಮತ್ತು ಕಾಲೇಜಿನ ಉಪನ್ಯಾಸಕರು ನೀಡಿದ ಪ್ರೋತ್ಸಾಹ ಹಾಗೂ ಸಹಾಯ ಕಾರಣ ಎನ್ನುತ್ತಾಳೆ ಭವ್ಯಾ. ಓದಲು ಯಾವುದೇ ಟೈಮ್ ಟೇಬಲ್ ಇತ್ಯಾದಿ ಬಳಸದೆ, ನೇರ ವಿಷಯವನ್ನು ಗ್ರಹಿಸಿ ಮನವರಿಕೆ ಮಾಡಿಕೊಂಡರೆ ಉತ್ತಮ ಅಂಕ ಪಡೆಯಬಹುದು ಎನ್ನುತ್ತಾರೆ ಭವ್ಯಾ.
ಮಗಳ ಸಾಧನೆಯಿಂದ ತಂದೆ ನಾರಾಯಣ ನಾಯಕ್ ತುಂಬಾ ಖುಷಿಗೊಂಡಿದ್ದಾರೆ. ಹಿಂದೆಲ್ಲ ತುಂಬಾ ಕಷ್ಟ ಇತ್ತು. ಜೊತೆಗೆ ಖುಷಿಯೂ ಇತ್ತು. ಈಗ ಖುಷಿ ದುಪ್ಪಟ್ಟಾಗಿದೆ. ಮಗಳ ಇಚ್ಛೆಯಂತೆ ಆಕೆಯ ಓದು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಮುಂದೆ ಕಂಪ್ಯೂಟರ್ ಸೈನ್ಸ್ ಶಿಕ್ಷಣ ಪಡೆಯುವ ಇಂಗಿತ ವ್ಯಕ್ತಪಡಿಸಿರುವ ಭವ್ಯಾ, ಸದ್ಯ ಸಿಇಟಿ ಪರೀಕ್ಷೆ ಬರೆದಿದ್ದು ಅದರಲ್ಲೂ ಉತ್ತಮ ಸಾಧನೆಯ ನಿರೀಕ್ಷೆಯಲ್ಲಿದ್ದಾರೆ.