ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿಯಿಂದ ಕನ್ನಡಿಗರಿಗೆ ಅವಮಾನವಾಗಿದೆ: ಬಿ.ಕೆ.ಹರಿಪ್ರಸಾದ್

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 8: ಮೋದಿ ಓರ್ವ ಸುಳ್ಳುಗಾರ ಪ್ರಧಾನಿ. ಕರ್ನಾಟಕದ ಜನರನ್ನು ನಾಯಿಗಳಿಗೆ ಹೋಲಿಸಿ ಅವಮಾನ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ, ಗ್ರಾಮ ಪಂಚಾಯತ್ ಸದಸ್ಯರಿಗಿಂತ ಕೀಳುಮಟ್ಟದ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ.

ಕುದಿಯುವ ಕೊಪ್ಪಳದಲ್ಲಿ ಕಾಂಗ್ರೆಸ್ ನಾಯಕರ ಬೆವರಿಳಿಸಿದ ಮೋದಿ ಕುದಿಯುವ ಕೊಪ್ಪಳದಲ್ಲಿ ಕಾಂಗ್ರೆಸ್ ನಾಯಕರ ಬೆವರಿಳಿಸಿದ ಮೋದಿ

ಎರಡು ತಿಂಗಳಿಗೂ ಹೆಚ್ಚು ಕಾಲ ಮೋದಿ ಕರ್ನಾಟಕದಲ್ಲೇ ಕಳೆದಿದ್ದಾರೆ. ಆದರೆ ಇದರಿಂದ ಚುನಾವಣೆಯಲ್ಲಿ ಏನೂ ಪ್ರಯೋಜನವಾಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಯೋಗಿ ಆದಿತ್ಯನಾಥ್ ಅಧಿಕಾರದ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಒಂದೇ ವರ್ಷದಲ್ಲಿ ಸಾವಿರ ನಕಲಿ ಎನ್ ಕೌಂಟರ್ ಆಗಿದೆ.

Prime Minister Narendra Modi insulting to Kannadigas

55 ವರ್ಷದಲ್ಲಿ ಕರ್ನಾಟಕದಲ್ಲಿ ಇಷ್ಟು ನಕಲಿ ಎನ್ ಕೌಂಟರ್ ಆಗಿಲ್ಲ ಎಂದು ಯೋಗಿ ಆದಿತ್ಯನಾಥರನ್ನೂ ಟೀಕಿಸಿದರು.

ದೇಶನಿಷ್ಠೆ ಮತ್ತು ರಾಷ್ಟ್ರ ರಕ್ಷಣೆ ವಿಚಾರದಲ್ಲಿ ಮುಧೋಳ ತಳಿ ನಾಯಿಗೆ ಇರುವ ನಿಯತ್ತು ಕಾಂಗ್ರೆಸ್ಸಿಗೆ ಇಲ್ಲ ಎಂದು 'ಕೈ' ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಟೀಕಾ ಪ್ರಹಾರ ಮಾಡಿದ್ದರು. ಜಮಖಂಡಿಯಲ್ಲಿ ಭಾನುವಾರ ಮಾತನಾಡುವಾಗ ಮೋದಿ,

'ಪೂರ್ವಜರಿಂದ, ಹಿರಿಯರಿಂದ ಹಾಗೂ ಮಹಾತ್ಮ ಗಾಂಧೀಜಿಯಿಂದ ನೀವು ದೇಶಭಕ್ತಿ ಕಲಿಯಲಿಲ್ಲ. ಮುಧೋಳ ತಳಿ ನಾಯಿ ನೋಡಿಯಾದರೂ ಕಲಿಯಿರಿ' ಎಂದು ಪ್ರಚಾರದುದ್ದಕ್ಕೂ ಕಾಂಗ್ರೆಸ್‌ ನಾಯಕರಿಗೆ ಕಿಚಾಯಿಸಿದ್ದರು.

ಪ್ರಧಾನಿ ಮೋದಿಯಿಂದ ಕನ್ನಡಿಗರಿಗೆ ಅವಮಾನವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು

English summary
Karnataka assembly elections 2018: AICC General Secretary BK Hariprasad Said Prime Minister Narendra Modi insulting to Kannadigas.Inferior words do not make them shine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X