ಕೊಲ್ಲೂರು ಮುಕಾಂಬಿಕೆಗೆ ಮಂಗಳಾರತಿ ಬೆಳಗಿದ ಪ್ರಣಬ್ ಮುಖರ್ಜಿ
ಉಡುಪಿ, ಜೂನ್, 18 : ಎರಡು ದಿನ ಕರ್ನಾಟಕ ರಾಜ್ಯ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾನುವಾರ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದು ಬಳಿಕ ಕೊಲ್ಲೂರು ಮುಕಾಂಬಿಕೆಯ ದರ್ಶನ ಪಡೆದರು.
ಪ್ರತಿ ನವರಾತ್ರಿ ವೇಳೆ ತಮ್ಮ ಊರಿನ ಕಾಳಿಕಾ ದೇವಿಗೆ ಆರತಿ ಎತ್ತುವ ಪ್ರಣಬ್ ಮುಖರ್ಜಿ ಅವರು ಅದೇ ತರಹನಾಗಿ ಇಂದು ಮುಕಾಂಬಿಕೆ ದೇವಿಗೆ ಮಂಗಳಾರತಿ ಬೆಳಗಿದರು. ಪ್ರಣಬ್ ಮುಖರ್ಜಿ ಅವರು ಇಲ್ಲಿನ ಸಂಪ್ರದಾಯದಂತೆ ತಮ್ಮ ಶರ್ಟ್ ಕಳಚಿ ಅಮ್ಮನ ದರ್ಶನ ಪಡೆದಿರುವುದು ವಿಶೇಷವಾಗಿತ್ತು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ ಸಚಿವರಾದ ಕೆ ಜೆ ಜಾರ್ಜ್, ಪ್ರಮೋದ್ ಮಧ್ವರಾಜ್ ಹಾಗೂ ರುದ್ರಪ್ಪ ಲಮಾಣಿ ಸಾಥ್ ನೀಡಿದರು.ಇದೇ ವೇಳೆ ಕೊಲ್ಲೂರು ಮುಕಾಂಬಿಕೆಯ ದೇಗುಲದ ಆಡಳಿತ ಧರ್ಮದರ್ಶಿ ಹರೀಶ್ ಕುಮಾರ್ ಶೆಟ್ಟಿ ಅವರು ಪ್ರಣಬ್ ಮುಖರ್ಜಿ ಅವರಿಗೆ ಗೌರವ ಸಲ್ಲಿಸಿದರು.