ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಬ್ರಹಾಂ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಮಧ್ವರಾಜ್

|
Google Oneindia Kannada News

ಉಡುಪಿ, ಮಾರ್ಚ್ 22: ಮೀನುಗಾರಿಕಾ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಮೇಲೆ ಉಡುಪಿ ನ್ಯಾಯಾಲಯದಲ್ಲಿ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ.

ಟಿ.ಜೆ. ಅಬ್ರಾಹಂ ಅವರು ಸಚಿವ ಪ್ರಮೋದ್ ಮದ್ವರಾಜ್ ಮೇಲೆ ಬ್ಯಾಂಕ್ ಲೋನ್ ಅವ್ಯವಹಾರ ಆರೋಪ ಮಾಡಿದ್ದರು . ಈ ಹಿನ್ನೆಲೆಯಲ್ಲಿ ಈಗ ಸಚಿವ ಮದ್ವರಾಜ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ.

ಟೀಕಿಸುವ ಭರದಲ್ಲಿ ಪ್ರಮೋದ್ ಮಧ್ವರಾಜ್ - ದಾವೂದ್ ಹೋಲಿಕೆ!ಟೀಕಿಸುವ ಭರದಲ್ಲಿ ಪ್ರಮೋದ್ ಮಧ್ವರಾಜ್ - ದಾವೂದ್ ಹೋಲಿಕೆ!

ಈ ಕುರಿತು ಉಡುಪಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಮೇಲೆ ಮಾಡಿರುವ ನಿರಾಧಾರ ಆರೋಪದ ಕುರಿತು ಟಿ.ಜೆ. ಅಬ್ರಹಾಂ ಮೂರು ದಿನದೊಳಗೆ ಕ್ಷಮೆ ಕೇಳಬೇಕು . ಈಗಾಗಲೇ ಅಬ್ರಾಹಂ ಅವರಿಗೆ ನೋಟಿಸ್ ನೀಡಲಾಗಿದೆ. ಅಬ್ರಾಹಂ ತಮ್ಮ ಹೇಳಿಕೆಗೆ ಕ್ಷಮೆ ಕೇಳದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಅವರು ತಿಳಿಸಿದರು.

Pramod Madhwaraj going to file defamation case against T J Abraham

ಅಬ್ರಹಾಂ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ನನ್ನ ವಿರುದ್ಧ ನಿರಾಧಾರ ಆರೋಪ ಮಾಡಿದ್ದಾರೆ. ನನ್ನ ಬಳಿ ದಾಖಲೆಗಳು ಸಮರ್ಪಕವಾಗಿದೆ. ಎಲ್ಲಾ ವ್ಯವಹಾರಗಳನ್ನು ಕಾನೂನುಬದ್ದವಾಗಿ ನಡೆಸುತ್ತಿದ್ದೇನೆ. ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅಬ್ರಾಹಂ ಮಾಡಿರು ಆರೋಪದ ಹಿಂದೆ ಬಿಜೆಪಿಯ ಇಬ್ಬರು ನಾಯಕರು ಇದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಅಬ್ರಾಹಾಂ ಅವರು ರಾಷ್ಡ್ರೀಯ ಮತ್ತು ರಾಜ್ಯ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾನು ಕಾಂಗ್ರೇಸ್ ಪಕ್ಷದಿಂದ ಉಡುಪಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಒಂದು ಲಕ್ಷ ರುಪಾಯಿ ಪಾವತಿಸಿ ಅರ್ಜಿ ಹಾಕಿದ್ದೇನೆ. ದುಡಿದ ಹಣ ನಷ್ಟ ಮಾಡಿಕೊಳ್ಳಲ್ಲ ಎಂದು ಅವರು ಹೇಳಿದರು. ಬಿಜೆಪಿ ಪಕ್ಷ ಸೇರ್ಪಡೆಯನ್ನು ನಿರಾಕರಿಸಿದ ಪ್ರಮೋದ್ ಮದ್ವರಾಜ್, ನಾನು ನಂಬರ್ ವನ್ ಶಾಸಕ. ಹಾಗಾಗಿ ನನಗೆ ಬೇಡಿಕೆ ಇರೋದು‌ ನಿಜ ಎಂದು ಅವರು ಹೇಳಿದರು.

English summary
Udupi district incharge minister Pramod Madhwaraj going to file defamation case against social activist T J Abraham.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X